ಟೊಮಾಟೊ, ಆಲೂಗೆಡ್ಡೆಯಿಂದ ಕುತ್ತಿಗೆ ಸುತ್ತಲಿನ ಕಪ್ಪು ಕಲೆಗೆ ಹೇಳಿ ಗುಡ್ ಬೈ !
ಕತ್ತಿನ ಸುತ್ತ ಕಪ್ಪು ಕಲೆ ಉಂಟಾಗಲೂ ಹಲವು ಕಾರಣಗಳಿವೆ. ಆದರೆ, ನೀವು ನಿತ್ಯ ಬಳಸುವ ಟೊಮಾಟೊ ಹಾಗೂ ಆಲೂಗೆಡ್ಡೆ ಸಹಾಯದಿಂದ ಇದರಿಂದ ಮುಕ್ತಿ ಹೊಂದಬಹುದು ಎಂದು ನಿಮಗೆ ತಿಳಿದಿದೆಯೇ?
Beauty Tips: ಮುಖಕ್ಕೆ ಹೋಲಿಸಿದರೆ ಕತ್ತಿನ ಸುತ್ತ ಕ್ರಮೇಣ ಬಣ್ಣ ಮಸುಕಾಗುತ್ತದೆ. ಕೆಲವರಲ್ಲಿ, ಇದು ಗಾಢ ರೂಪ ಪಡೆದು ಹೆಚ್ಚು ಕಪ್ಪಾಗುತ್ತದೆ. ಕುತ್ತಿಗೆ ಸುತ್ತಲೂ ಕಾಣುವ ಕಪ್ಪು ಕಲೆಯಿಂದಾಗಿ ಕೆಲವರು ಮುಜುಗರಕ್ಕೊಳಗಾಗುತ್ತಾರೆ. ಆದರೆ, ಇನ್ನೂ ಕೆಲವರಲ್ಲಿ ನಾಲ್ಕು ಜನರ ಮುಂದೆ ಹೋಗುವಾಗ ಆತ್ಮವಿಶ್ವಾಸವೇ ಕುಂದುತ್ತದೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ, ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಎರಡೇ ಎರಡು ತರಕಾರಿಗಳು ಈ ಸಮಸ್ಯೆಗೆ ಪರಿಹಾರ ನೀಡಬಲ್ಲವು.
ಹೌದು, ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಟೊಮಾಟೊ, ಆಲೂಗೆಡ್ಡೆಯನ್ನು ಬಳಸಿ ನೀವು ನಿಮ್ಮ ಕುತ್ತಿಗೆ ಸುತ್ತಲೂ ಕಾಣುವ ಗಾಢ ಕಪ್ಪು (Dark Neck) ಕಲೆಯನ್ನು ನಿವಾರಿಸಬಹುದು. ಇದಕ್ಕಾಗಿ ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದಿ...
ಇದನ್ನೂ ಓದಿ- ಕೊಬ್ಬರಿ ಎಣ್ಣೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು
ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಆಲೂಗಡ್ಡೆ:
ಆರೋಗ್ಯಕರ ಸುಂದರ ತ್ವಚೆಗೆ ಆಲೂಗೆಡ್ಡೆ (Potato For Skin) ತುಂಬಾ ಪ್ರಯೋಜನಕಾರಿ ಆಗಿದೆ. ವಾಸ್ತವವಾಗಿ, ತ್ವಚೆಗೆ ಆಲೂಗೆಡ್ಡೆ ಅತ್ಯುತ್ತಮ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕತ್ತಿನ ಸುತ್ತ ಕಪ್ಪು ಕಲೆಗಳಿದ್ದರೆ ಆಲೂಗೆಡ್ಡೆಯನ್ನು ತುರಿದು ಅದರ ರಸ ತೆಗೆದು ಕತ್ತಿನ ಸುತ್ತಲೂ ಹಚ್ಚಿ. ಲಘುವಾಗಿ ಮಸಾಜ್ ಮಾಡಿ. ಕೆಲಕಾಲ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಕಪ್ಪು ಕಲೆ ಮಾಯವಾಗಿ ಕುತ್ತಿಗೆ ಬೆಳ್ಳಗಾಗುತ್ತದೆ.
ಇದನ್ನೂ ಓದಿ- ಅಲೋವೇರಾ ಜೊತೆ ಈ ಎಲೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದ್ರೆ ಕಪ್ಪು, ಸದೃಢ ಕೇಶರಾಶಿ ನಿಮ್ಮದಾಗುತ್ತವೆ..!
ಟೊಮಾಟೊ ಹಣ್ಣು:
ಪ್ರತಿಯೊಬ್ಬರ ಮನೆಯಲ್ಲೂ ಟೊಮಾಟೊ ಇದ್ದೇ ಇರುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಟ್ಯಾನಿಂಗ್ (Tanning) ಅನ್ನು ನಿವಾರಿಸಲು ಟೊಮಾಟೊ ಅತ್ಯುತ್ತಮ ಮದ್ದು. ಟೊಮಾಟೊವನ್ನು ಮಧ್ಯಕ್ಕೆ ಕತ್ತರಿಸಿ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಕತ್ತಿನ ಸುತ್ತಲೂ ನಯವಾಗಿ ಉಜ್ಜುತ್ತಾ ಮಸಾಜ್ ಮಾಡಿ. ನಿಯಮಿತವಾಗಿ ಈ ಪರಿಹಾರ ಕೈಗೊಳ್ಳುವುದರಿಂದ ಕೆಲವೇ ದಿನಗಳಲ್ಲಿ ಕುತ್ತಿಗೆ ಸುತ್ತಲಿನ ಕಪ್ಪುಕಲೆ ಮಾಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.