ಕೊಬ್ಬರಿ ಎಣ್ಣೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

Coconut Oil Benefits: ಸಾಮಾನ್ಯವಾಗಿ ಬಿದ್ದು ಗಾಯವಾದಾಗ, ಇಲ್ಲವೇ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಾದಾಗ ಕೊಬ್ಬರಿ ಎಣ್ಣೆ ಬಳಸುವಂತೆ ಹಿರಿಯರು ಸಲಹೆ ನೀಡುತ್ತಾರೆ. ಕೊಬ್ಬರಿ ಎಣ್ಣೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದೇ ಇದಕ್ಕೆ ಮುಖ್ಯ ಕಾರಣ. 

Written by - Yashaswini V | Last Updated : Jul 8, 2024, 02:14 PM IST
  • ಕೊಬ್ಬರಿ ಎಣ್ಣೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ
  • ಕೊಬ್ಬರಿ ಎಣ್ಣೆಯಲ್ಲಿರುವ ಉತ್ತಮ ಅಂಶಗಳಿಂದಾಗಿ ಇದು ಕೂದಲು ಹಾಗೂ ಚರ್ಮದ ಆರೈಕೆಯಲ್ಲಿ ಉತ್ತಮ ಮದ್ದು ಎಂದು ಪರಿಗಣಿಸಲಾಗಿದೆ
ಕೊಬ್ಬರಿ ಎಣ್ಣೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು  title=

Coconut Oil Beauty Hacks: ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅಡುಗೆ ಮಾಡುವಾಗ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅಡುಗೆಯ ಸ್ವಾದ ಇಮ್ಮಡಿಗೊಳ್ಳುತ್ತದೆ. ಅಷ್ಟೇ ಅಲ್ಲ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಸೌಂದರ್ಯದ ಗುಟ್ಟು ಕೂಡ ಅಡಕವಾಗಿದೆ. ಹಾಗಾಗಿಯೇ, ಭಾರತದಲ್ಲಿ ಅನಾದಿ ಕಾಲದಿಂದಲೂ ಕೂದಲು ಹಾಗೂ ಚರ್ಮದ ಆರೈಕೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹೇರಳವಾಗಿ ಬಳಸಲಾಗುತ್ತದೆ. 

ಕೂದಲಿನ ರಕ್ಷಣೆ, ಚರ್ಮದ ಆರೈಕೆ (Skin Care), ಸೋಂಕಿನಿಂದ ರಕ್ಷಣೆ, ತೂಕ ನಷ್ಟದಂತಹ ಹಲವು ಪ್ರಯೋಜನಗಳನ್ನು ಹೊಂದಿರುವ ಕೊಬ್ಬರಿ ಎಣ್ಣೆಯನ್ನು ಆರೋಗ್ಯದ ಗಣಿ ಎಂದು ಬಣ್ಣಿಸಲಾಗುತ್ತದೆ. ಕೊಬ್ಬರಿ ಎಣ್ಣೆಯ ಬಳಕೆಯ ಪ್ರಯೋಜನಗಳೆಂದರೆ... 

* ತೂಕ ಇಳಿಕೆ: 
ಗಾಣದ ಕೊಬ್ಬರಿ ಎಣ್ಣೆಯನ್ನು (Coconut Oil) ದೈನಂದಿನ ಆಹಾರದಲ್ಲಿ ಬಳಸುವುದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ತೂಕ ಇಳಿಕೆಯನ್ನು ಕೂಡ ಪ್ರಚೋದಿಸುತ್ತದೆ. 

ಇದನ್ನೂ ಓದಿ- ಏನೇ ಮಾಡಿದರೂ ಕೂದಲು ಉದುರುವುದು ನಿಲ್ಲುವುದಿಲ್ಲವೇ ? ಇದೊಂದು ಎಣ್ಣೆ ಹಚ್ಚಿ ನೋಡಿ !

* ಕೂದಲಿನ ರಕ್ಷಣೆ: 
ಕೂದಲಿಗೆ ನಿಯಮಿತ ಕೊಬ್ಬರಿ ಎಣ್ಣೆ ಬಳಕೆಯಿಂದ (Coconut Oil Benefits) ಇದು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಕಾರಿ. ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ರಾತ್ರಿಯಿಡೀ ಹಾಗೆ ಬಿಟ್ಟು ಬೆಳಿಗ್ಗೆ ಹೇರ್ ವಾಶ್ ಮಾಡುವುದರಿಂದ ಇದು ಕೂದಲಿಗೆ ಉತ್ತಮ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. 

* ಸೀಳು ಕೂದಲಿನ ಸಮಸ್ಯೆ: 
ಕೂದಲಿನ ತುದಿ ಸೀಳು ಬಿಟ್ಟಿದ್ದರೆ ಕೂದಲಿನ ಬುಡದಿಂದ ತುದಿಯವರೆಗೆ ಕೊಬ್ಬರಿ ಎಣ್ಣೆಯನ್ನು ಅನ್ವಯಿಸಿ ಹತ್ತು ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿದರೆ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಮಾಯವಾಗುತ್ತದೆ. 

* ನೋವು ನಿವಾರಕ: 
ಕೊಬ್ಬರಿ ಎಣ್ಣೆಯಲ್ಲಿ ಒಂದೆರಡು ಹನಿ ಪುದೀನಾ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಸ್ನಾಯು ನೋವಿನಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- ಹೊಸದಾಗಿ ಓಪೆನ್ ಆಗಿರುವ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇದ್ದೀರಾ? ಈ 5 ವಿಷಯಗಳನ್ನು ನೆನಪಿನಲ್ಲಿಡಿ

* ದೇಹದ ಮಸಾಜ್: 
ತೆಂಗಿನ ಎಣ್ಣೆಯಲ್ಲಿ ಲ್ಯಾವೆಂಡರ್ ತೈಲವನ್ನು ಬೆರೆಸಿ ಇಡೀ ದೇಹಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮೈ-ಕೈ ನೋವು ನಿವಾರಣೆಯಾಗುತ್ತದೆ. 

* ಲಿಪ್ ಬಾಮ್:  
ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಒಂದು ಕೊಬ್ಬರಿ ಎಣ್ಣೆ ಲೇಪಿಸುವುದರಿಂದ ಒಡೆದಿರುವ ತುಟಿಗಳಿಂದ ಪರಿಹಾರ ಪಡೆಯಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News