Pudina-Raw Mango Recipe: ಬೇಸಿಗೆ ಕಾಲದಲ್ಲಿ ಪುದೀನ ಮತ್ತು ಕಚ್ಚಾ ಮಾವಿನ ಚಟ್ನಿ ತುಂಬಾ ಇಷ್ಟಪಡಲಾಗುತ್ತದೆ.  ಪುದೀನ (Pudina) ತಂಪು ಗುಣಧರ್ಮ ಮತ್ತು ಜೀರ್ಣಕಾರಿ ಗುಣದ ಕಾರಣ ಹೊಟ್ಟೆಗೂ ಕೂಡ ಒಳ್ಳೆಯದು ಎಂದು ಪರಿಗಣಿಸಿದರೆ, ಹಸಿ ಮಾವಿನ (Raw Mango) ರುಚಿ ಎಂದರೆ ಅದನ್ನು ಸವಿಯಲು ಯಾರು ತಾನೇ ಇಷ್ಟಪಡುವುದಿಲ್ಲ. ಬೇಸಿಗೆಯ ಸಮಯದಲ್ಲಿ ಬಿಸಿ ಶಾಖ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು (Health) ತಪ್ಪಿಸಲು ಅನೇಕ ಜನರು ಕಚ್ಚಾ ಮಾವಿನ ಕಾಯಿಯಿಂದ ತಯಾರಿಸಲಾಗಿರುವ ಪಾನಕ ಕುಡಿಯುತ್ತಾರೆ. ಅದೇ ಸಮಯದಲ್ಲಿ, ಕೆಲವರು ಇದನ್ನು ಚಟ್ನಿಯ ರೂಪದಲ್ಲಿ ಹೆಚ್ಚು ತಿನ್ನಲು ಇಷ್ಟಪಡುತ್ತಾರೆ.  ಹೀಗಿರುವಾಗ ನೀವೂ ಕೂಡ ನಿಮ್ಮ ಮನೆಯಲ್ಲಿ ಪುದಿನಾ-ಮಾವಿನ ಚಟ್ನಿಯನ್ನು ತಯಾರಿಸಿ ಸವಿಯಬಹುದು. ಹಾಗಾದರೆ ಬನ್ನಿ ಮನೆಯಲ್ಲಿಯೇ ಪುದೀನಾ ಹಾಗೂ ಕಚ್ಚಾ ಮಾವಿನ ಕಾಯಿಯ ಚಟ್ನಿಯನ್ನು (Pudina-Raw Mango Chuteny) ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Skin Care- ಮನೆಯಲ್ಲಿ ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ ಈ ಬಗ್ಗೆ ಎಚ್ಚರವಹಿಸಿ


ಪುದೀನಾ-ಮಾವಿನ ಕಾಯಿ ತಯಾರಿಕೆಗೆ ಬೇಕಾಗುವ ಸಾಮಗ್ರಿ (Food Recipe)
ಹಸಿ ಮಾವಿನ ಕಾಯಿ 3-4.
ಕೊತಂಬರಿ ಸೊಪ್ಪು 2 ಕಪ್
ಪುದೀನಾ ಎಳೆಗಳು 1 ಕಪ್ 
ಇಂಗು ಎರಡು ಚಿಟಿಕೆ 
ಬ್ಲಾಕ್ ಸಾಲ್ಟ್ ಅರ್ಧ ಚಮಚೆ (ಚಿಕ್ಕ)
ಹಸಿ ಮೆಣಸಿನ ಕಾಯಿ 4 ರಿಂದ 5
ರುಚಿಗೆ ತಕ್ಕಂತೆ ಉಪ್ಪು


ಇದನ್ನೂ ಓದಿ-HOME REMEDIES- ಹೊಟ್ಟೆ ಸಮಸ್ಯೆಯಿಂದ ಹಿಡಿದು ಮನೆ ಕ್ಲೀನ್ ವರೆಗೆ ಉಪಯುಕ್ತ, ಬೆಲೆ ಕೇವಲ 8 ರೂ.


ತಯಾರಿಸುವ ವಿಧಾನ (Lifestyle)
- ಎಲ್ಲಕ್ಕಿಂತ ಮೊದಲು ಮಾವಿನ ಕಾಯಿಯನ್ನು ಸ್ವಚ್ಛವಾಗಿ ತೊಳೆದು, ಅದರ ಸಿಪ್ಪೆ ಸುಲಿಯಿರಿ. ಬಳಿಕ ಚಿಕ್ಕ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ. 
-ಹಸಿ ಮೆಣಸಿನಕಾಯಿ, ಕೊತಂಬರಿ ಸೊಪ್ಪು ಹಾಗೂ ಪುದಿನಾ ಎಲೆಗಳನ್ನು ಕೂಡ ಸ್ವಚ್ಛವಾಗಿ ತೊಳೆದುಕೊಳ್ಳಿ.
- ಈಗ ಮಿಕ್ಸಿಯ ಜಾರ್ ನಲ್ಲಿ ಎಲ್ಲಾ ಸಾಮಗ್ರಿಗಳನ್ನು ಹಾಕಿ ಅದಕ್ಕೆ ಹುರಿದ ಜೀರಿಗೆ ಬೆರೆಸಿ. ಬ್ಲಾಕ್ ಸಾಲ್ಟ್, ಉಪ್ಪು, ಇಂಗು ಕೂಡ ಬೆರೆಸಿ. ನಂತರ ಅರ್ಧ ಕಪ್ ನೀರನ್ನು ಬೆರೆಸಿ ಮಿಕ್ಸಿ ಆನ್ ಮಾಡಿ.
- ಈಗ ನಿಮ್ಮ ಕಚ್ಚಾ ಮಾವಿನ ಕಾಯಿ-ಪುದಿನಾ ಚಟ್ನಿ ರೆಡಿ.
- ಇದನ್ನು ನೀವು ಅನ್ನ, ಸಮೋಸ, ಕಚೋರಿ, ಪಕೋಡ ಜೊತೆಗೆ ಸವಿಯಬಹುದು.


ಇದನ್ನೂ ಓದಿ-Ragi Malt Recipe: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ರಾಗಿ ಮಾಲ್ಟ್ ಡ್ರಿಂಕ್ ಸೇವಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.