Money Plants Vastu Tips: ಮನಿ ಪ್ಲಾಂಟ್ ಖರೀದಿಸಿ ನೆಡುವುದರಿಂದ ಶುಭವೋ? ಇಲ್ಲ ಬೇರೆಯವರು ನೀಡಿದರೆ ಉತ್ತಮವೇ?
Money Plants Vastu Tips: ಮನಿ ಪ್ಲಾಂಟ್ ಮನೆಗೆ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿದೆ. ಆದರೆ, ವಾಸ್ತು ಶ್ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಖರೀದಿಸಿ ನೆಡುವುದರಿಂದ ಅದೃಷ್ಟ ಬರುತ್ತದೋ ಅಥವಾ ಬೇರೆಯವರಿಗೆ ಉಡುಗೊರೆಯಾಗಿ ಪಡೆದ ಮನಿ ಪ್ಲಾಂಟ್ ಇದ್ದರೆ ಅದೃಷ್ಟವೋ ಇಂದು ತಿಳಿಯೋಣ...
Money Plants Vastu Tips: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತುಶಾಸ್ತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ದಿಕ್ಕು, ಯಾವ ದಿಕ್ಕಿನಲ್ಲಿ ಏನಿದ್ದರೆ ಉತ್ತಮ? ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಎಂಬಿತ್ಯಾದಿ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ಮನಿ ಪ್ಲಾಂಟ್ ಬಗ್ಗೆಯೂ ನಿಯಮಗಳನ್ನು ತಿಳಿಸಲಾಗಿದೆ. ಮನಿ ಪ್ಲಾಂಟ್ ವಿಷಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯಲು ವಾಸ್ತು ಶಾಸ್ತ್ರವನ್ನು ಅನುಸರಿಸಬೇಕು ಎಂದು ಸಲಹೆ ನೀಡಲಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ (Vastu Shastra), ಮನಿ ಪ್ಲಾಂಟ್ ಅನ್ನು ಯಾವ ದಿಕ್ಕಿನಲ್ಲಿ ನೆಡಬೇಕು. ಮನಿ ಪ್ಲಾಂಟ್ ಸುತ್ತಲೂ ನಕಾರಾತ್ಮಕತೆಯನ್ನು ತರುವಂತಹ ವಿಚಾರಗಳು ಯಾವುವು? ಯಾವ ಸಂದರ್ಭದಲ್ಲಿ ಮನಿ ಪ್ಲಾಂಟ್ ಲಾಭದ ಬದಲು ನಷ್ಟ ಉಂಟುಮಾಡುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸಲಾಗಿದೆ. ಅಂತೆಯೇ 'ಮನಿ ಪ್ಲಾಂಟ್' ಅನ್ನು ಖರೀದಿಸಿ ನೆಡುವುದು ಪ್ರಯೋಜನಕಾರಿಯೋ ಅಥವಾ ಬೇರೆಯವರಿಂದ ಉಡುಗೊರೆ ಪಡೆದು ನೆಡುವುದು ಉತ್ತಮವೋ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಮನೆಯಲ್ಲಿ ಇಂತಹ ಮನಿ ಪ್ಲಾಂಟ್ ಇದ್ದರೆ ಭಾರೀ ನಷ್ಟ:
ನಿಸ್ಸಂಶಯವಾಗಿ ಕಳ್ಳತನವನ್ನು ಯಾವುದೇ ಧರ್ಮದಲ್ಲಿ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಕಳ್ಳತನ ಮಾಡಿ ಮನಿ ಪ್ಲಾಂಟ್ (Money Plant) ನೆಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಇಂತಹ ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಭಾರೀ ಆರ್ಥಿಕ ನಷ್ಟದ ಜೊತೆಗೆ ಅಂತಹ ಮನೆಯಲ್ಲಿ ಪ್ರಗತಿ ಕುಂಠಿತಗೊಳ್ಳಬಹುದು ಎನ್ನಲಾಗುತ್ತದೆ.
ಇದನ್ನೂ ಓದಿ- Wall Clock Vastu: ಗಡಿಯಾರದ ಈ ವಾಸ್ತು ಸಲಹೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು
ಈ ರೀತಿ ವಾಸ್ತು ಪ್ಲಾಂಟ್ ಮಾತ್ರವೇ ತರುತ್ತೆ ಅದೃಷ್ಟ:
ಮನಿ ಪ್ಲಾಂಟ್ ಹಣ ಮತ್ತು ತಾಯಿ ಲಕ್ಷ್ಮಿಗೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ, ಆರ್ಥಿಕ ಪ್ರಗತಿಗಾಗಿ ಖರೀದಿಸಿ ತಂದಂತಹ ಮನಿ ಪ್ಲಾಂಟ್ ಅನ್ನು ನಿಮ್ಮ ಮನೆಯಲ್ಲಿ ನೆಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ನೀವು ನಿಮ್ಮ ಹಣದಲ್ಲಿ ಖರೀದಿಸಿ ತಂದಿಟ್ಟ ಮನಿ ಪ್ಲಾಂಟ್ ಮನೆಯಲ್ಲಿ ಹಣದ ಹರಿವನ್ನು ಹೆಚ್ಚಿಸುವುದರ ಜೊತೆಗೆ ಸುಖ-ಸಂತೋಷ, ಸಮೃದ್ದಿಯನ್ನು ವೃಡ್ಡಿಯಾಗುವಂತೆ ಮಾಡುತ್ತದೆ ಎಂಬ ನಂಬಿಕೆಯಿದೆ.
ಬೇರೆಯವರಿಗೆ ಮನಿ ಪ್ಲಾಂಟ್‌ಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದೇ?
ವಾಸ್ತು ಪ್ರಕಾರ, ಬೇರೆಯವರಿಂದ ಮನಿ ಪ್ಲಾಂಟ್ (Vastu For Money Plant) ಪಡೆಯುವುದಷ್ಟೇ ಅಲ್ಲ, ಇತರರಿಗೆ ಮನಿ ಪ್ಲಾಂಟ್ ನೀಡುವುದು ಕೂಡ ನಿಮ್ಮ ಅದೃಷ್ಟವನ್ನು ಬೇರೆಯವರಿಗೆ ದಾನ ಮಾಡಿದಂತೆ. ಹಾಗಾಗಿ, ಯಾರಿಗಾದರೂ ಮನಿ ಪ್ಲಾಂಟ್ ನೀಡುವುದಾಗಲಿ ಅಥವಾ ಯಾರಿಂದಲಾದರೂ ಅದನ್ನು ಪಡೆಯುವುದಾಗಲಿ ಶುಭಕರವಲ್ಲ.
ಇದನ್ನೂ ಓದಿ- Bedroom Vastu: ಈ ಸಸ್ಯಗಳು ನಿಮ್ಮ ದಾಂಪತ್ಯ ಜೀವನಕ್ಕೆ ಮುಳ್ಳಾಗುತ್ತವೆ..!
ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ ಈ ವಿಚಾರಗಳ ಬಗ್ಗೆ ಇರಲಿ ವಿಶೇಷ ಗಮನ:
ಬಳ್ಳಿ ಮೇಲ್ಮುಖವಾಗಿರಲಿ:
ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ ಅದರ ಬಳ್ಳಿ ಯಾವಾಗಲೂ ಮೇಲ್ಮುಖವಾಗಿಯೇ ಇರಬೇಕು ಎಂಬುದರ ಬಗ್ಗೆ ವಿಶೇಷ ಗಮನವಿರಲಿ.
ಮನಿ ಪ್ಲಾಂಟ್ ದಿಕ್ಕು:
ಯಾವಾಗಲೂ ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಶುಭ.
ಮನಿ ಪ್ಲಾಂಟ್ ನಲ್ಲಿ ನೆಡಬಾರದು:
ಮನಿ ಪ್ಲಾಂಟ್ ಅನ್ನು ಯಾವುದೇ ಕಾರಣಕ್ಕೂ ನೆಲದಲ್ಲಿ ನೆಡಬೇಡಿ. ಮನಿ ಪ್ಲಾಂಟ್ ಅನ್ನು ಯಾವಾಗಲೂ ಮಣ್ಣಿನ ಕುಂಡ ಅಥವಾ ಗಾಜಿನ ಬಟ್ಟಲಿನಲ್ಲಿ ನೆಡಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.