Astro Tips: ಮಂಗಳವಾರ ಆಂಜನೇಯನಿಗೆ ಈ ವಸ್ತು ಅರ್ಪಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ!

ಭಜರಂಗಬಲಿಗೆ ಪ್ರಿಯವಾದುದು ಎಂದರೆ ವೀಳ್ಯದೆಲೆಯ ಹಾರ. ಮಂಗಳವಾರ ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ ಮತ್ತು ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ.

Written by - Puttaraj K Alur | Last Updated : Jul 10, 2024, 09:19 PM IST
  • ಮಂಗಳವಾರ ಆಂಜನೇಯನಿಗೆ ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ
  • ಮಂಗಳವಾರ ಆಂಜನೇಯನ ಪೂಜೆ ಮಾಡಲು ಉಪವಾಸವಿದ್ದು ವ್ರತ ಕೈಗೊಳ್ಳಬೇಕು
  • ಜೊತೆಗೆ ʼಓಂ ಹನುಮತೇ ನಮಃʼ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು
Astro Tips: ಮಂಗಳವಾರ ಆಂಜನೇಯನಿಗೆ ಈ ವಸ್ತು ಅರ್ಪಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ!  title=
ಮಂಗಳವಾರ ಆಂಜನೇಯನ ವಾರ...

Lord Hanuman: ಮಂಗಳವಾರ ಆಂಜನೇಯನ ವಾರ... ಆಂಜನೇಯನಿಗೆ ಈ ದಿನ ಭಕ್ತಿಯಿಂದ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಮಂಗಳವಾರ ಆಂಜನೇಯನ ಪೂಜೆ ಮಾಡಲು ಉಪವಾಸವಿದ್ದು ವ್ರತ ಕೈಗೊಳ್ಳಬೇಕು. ಜೊತೆಗೆ ʼಓಂ ಹನುಮತೇ ನಮಃʼ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಶ್ರೀರಾಮನ ಬಂಟ ಹನುಮಂತನನ್ನು ಸಂಕಟ ಹರ, ಭಯ ನಾಶ ಮಾಡುವವನು ಎಂದು ಹೇಳಲಾಗಿದೆ.

ಮಂಗಳವಾರದ ದಿನ ಆಂಜನೇಯನಿಗೆ ಭಕ್ತಿಯಿಂದ ಪೂಜೆ ಮಾಡುವುದು ಉತ್ತಮ. ಭಜರಂಗಬಲಿಗೆ ಪ್ರಿಯವಾದುದು ಎಂದರೆ ವೀಳ್ಯದೆಲೆಯ ಹಾರ. ಮಂಗಳವಾರ ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ ಮತ್ತು ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಈ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕೇವಲ ರುಚಿಯಷ್ಟೇ ಹಾಳಾಗಲ್ಲ, ಆರೋಗ್ಯಕ್ಕೂ ಹಾನಿಕರ

ಹನುಮಂತನನ್ನು ಈ ರೀತಿ ಪೂಜಿಸಲು ಮಂಗಳವಾರ ಮತ್ತು ಶನಿವಾರ ಸೂಕ್ತವಾದ ದಿನಗಳಾಗಿವೆ. ತ್ರೇತಾಯುಗದಲ್ಲಿ ಸ್ವತಃ ಸೀತಾಮಾತೆ ತನ್ನನ್ನು ನೋಡಲು ಬಂದ ಹನುಮಂತನಿಗೆ ವೀಳ್ಯದೆಲೆಯನ್ನು ಹಾಕಿ ಸ್ವಾಗತಿಸಿದಳಂತೆ.

ಆ ತಾಯಿಯೇ ಹಾಕಿದ ಹಾರವೇ ಇಂದು ಹನುಮಂತನಿಗೆ ಪ್ರೀತ್ಯರ್ಥವಾಗಿದೆ. ಹೀಗಾಗಿ ವೀಳ್ಯದೆಲೆಯ ಮೂಲಕ ಹನುಮಂತನನ್ನು ಭಕ್ತಿಯಿಂದ ಪೂಜಿಸಬೇಕು. ಈ ರೀತಿ ಪೂಜಿಸಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ. 

ಇದನ್ನೂ ಓದಿ: Weight Loss: ಮುಂಜಾನೆ ಈ ಪಾನೀಯಗಳನ್ನು ಕುಡಿಯುವುದರಿಂದ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News