QR Code On Wedding Card - ಮದುರೈ: ಯಾರ ತಲೆಯಲ್ಲಿ ಎಂತಹ ಐಡಿಯಾ ಯಾವಾಗ ಬರುತ್ತೆ ಎಂಬುದು ಹೇಳುವುದು ಕಷ್ಟ. ಆದರೆ, ಈ ಬಾರಿ ಬಂದಿರುವ ಐಡಿಯಾ ಕೇಳಿ ನೀವೂ ಸ್ವಲ್ಪ ಕ್ಷಣ ಅವಾಕ್ಕಾಗುವಿರಿ. ಏಕೆಂದರೆ ಇನ್ಮುಂದೆ ಮದುವೆಯಲ್ಲಿ ಕಾಣಿಕೆ ನೀಡಲು ನಿಮಗೆ ಪಾಕೀಟು ಅಥವಾ ಗಿಫ್ಟ್ ಹುಡುಕಾಟ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಇದೀಗ ಯಾರು ಬೇಕಾದರೂ ಕೂಡ ವಧು ಅಥವಾ ವರನ ಖಾತೆಗೆ ಗೂಗಲ್ ಪೇ ಅಥವಾ ಫೋನ್ ಪೇ ಬಳಸಿ ನೇರವಾಗಿ ಅವರ ಖಾತೆಗೆ ಹಣವನ್ನು ವರ್ಗಾಯಿಸಬಹುದು. ಹೌದು, ಮಧುರೈನಲ್ಲಿರುವ ಕುಟುಂಬವೊಂದು ಮದುವೆಯ ಮಮತೆಯ ಕರೆಯೋಲೆಯ ಮೇಲೆ ಗೂಗಲ್ ಪೇ ಹಾಗೂ ಫೋನ್ ಪೇಗಳ QR Code ಮುದ್ರಿಸಿ ಹೊಸ ಐಡಿಯಾವೊಂದಕ್ಕೆ ನಾಂದಿಹಾಡಿದೆ. IANS ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ಕುಟುಂಬ ತಮ್ಮ ಮಗಳ ಮದುವೆಗೆ ಆಗಮಿಸಿದ ಅತಿಥಿಗಳಿಗಾಗಿ ಹಾಗೂ ಮಹಾಮಾರಿಯ ಕಾರಣ ಮದುವೆಗೆ ಹಾಜರಾಗದ ಅತಿಥಿಗಳಿಗೆ ಕಾಣಿಕೆ ನೀಡಲು ನೆರವಾಗಲು ಈ ಆಯ್ಕೆಯನ್ನು ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-Aadhaar Cardನಲ್ಲಿ ಜೋಡಿಸಲಾಗಿರುವ ಈ ನೂತನ ವೈಶಿಷ್ಟ್ಯದ ಕುರಿತು ನಿಮಗೆ ತಿಳಿದಿದೆಯೇ?


ಭಾನುವಾರ ನೆರವೇರಿದ್ದ ಈ ವಿಶಿಷ್ಟ ಮದುವೆಯ (Advanced Marriage) ಕರೆಯೋಲೆ ವೈರಲ್ ಆಗಿತ್ತು
ವಧುವಿನ ತಾಯಿ ಟಿ.ಜೆ. ಜಯಂತಿ ನೀಡಿರುವ ಮಾಹಿತಿ ಪ್ರಕಾರ ಮದುವೆಯಲ್ಲಿ ಸುಮಾರು 30 ಜನರು ಈ ಆಯ್ಕೆಯನ್ನು ಬಳಸಿ ತಮ್ಮ ಕಾಣಿಕೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಜಯಂತಿ ಮದುರೈನಲ್ಲಿ ಸ್ವಂತ ಬ್ಯೂಟಿ ಪಾರ್ಲರ್ ನಡೆಸುತ್ತಾರೆ ಹಾಗೂ ಇದೇ ಮೊದಲ ಬಾರಿಗೆ ತಮ್ಮ ಕುಟುಂಬದಲ್ಲಿ ಈ ರೀತಿಯ ಪ್ರಯೋಗ ನಡೆಸಲಾಗಿದೆ ಎಂದಿದ್ದಾರೆ. ಭಾನುವಾರ ಈ ವಿವಾಹ ನೆರವೇರಿದ್ದು, ಮದುವೆಯ ಕರೆಯೋಲೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಹಲವು ಕರೆಗಳು ಬರುತ್ತಿವೆ ಎಂದು ಜಯಂತಿ ಹೇಳಿದ್ದಾರೆ. 


ಇದನ್ನು ಓದಿ-ದಿನಸಿ ಅಂಗಡಿಯನ್ನು Online Store ಆಗಿ ಪರಿವರ್ತಿಸಲು ಆಫರ್ ನೀಡಿದ ICICI Bank


ಆನ್ಲೈನ್ ನಲ್ಲಿ ಮದುವೆಗೆ ಉಪಸ್ಥಿತರಾಗಿರುವವರಿಗೆ ಫುಡ್ ಡಿಲೆವರಿ ನಡೆಸಲಾಗಿದೆ
ಕಳೆದ ವರ್ಷ ಕೊರೊನಾ ವೈರಸ್ ಮಹಾಮಾರಿಯ ಕಾರಣ, ಹಲವರು ತಂತ್ರಜ್ಞಾನವನ್ನು ಬಳಸಿ ಹೊಸ ಹೊಸ ಐಡಿಯಾಗಳನ್ನು ಹುಟ್ಟುಹಾಕುತ್ತಿದ್ದಾರೆ. ಕಳೆದ ತಿಂಗಳು ನವದಂಪತಿ ಜೋಡಿಯೊಂದು ಆನ್ಲೈನ್ ನಲ್ಲಿ ವಿವಾಹಕ್ಕೆ ಉಪಸ್ಥಿತಿ ನೊಂದಾಯಿಸಿದ ತನ್ನ ಬಂಧು-ಮಿತ್ರರಿಗಾಗಿ ಅವರ ಮನೆಯಲ್ಲಿಯೇ ಫುಡ್ ಡಿಲೆವರಿ ವ್ಯವಸ್ಥೆ ಮಾಡಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನು ಓದಿ-ರೈಲು ಪ್ರಯಾಣಿಕರಿಗೆ ಮಹತ್ವದ ಸೂಚನೆ, ಶೀಘ್ರವೇ ಜಾರಿಗೆ ಬರಲಿದೆ ಈ ನೂತನ ನಿಯಮ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.