Rahu Transit in Bharani Nakshatra 2022: ಗ್ರಹಗಳ ನಡೆಯ ಪ್ರಭಾವ ಪ್ರತಿಯೊಂದು ರಾಶಿ ಹಾಗೂ ಲಗ್ನ ಜಾತಕದ ಜನರ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ರಾಹು-ಶುಕ್ರರ ಸಂಯೋಜನೆಗಾಗಿ ಜೂನ್ 14, 2022 ರಂದು ರಾಹು ಕೃತಿಕಾ ನಕ್ಷತ್ರದಿಂದ ಭರಣಿ ನಕ್ಷತ್ರಕ್ಕೆ ಸಾಗಲಿದೆ. ಫೆಬ್ರುವರಿ 21, 2023ರರವರೆಗೆ ಅದು ಅಲ್ಲಿಯೇ ಇರಲಿದೆ. ಭರಣಿ ನಕ್ಷತ್ರದಲ್ಲಿ ರಾಹುವಿನ ಎಲ್ಲಾ ಶಕ್ತಿ ಈಗಾಗಲೇ ಅಲ್ಲಿ ವಿರಾಜಮಾನನಾಗಿರುವ ಶುಕ್ರನ ಬಳಿ ಹೋಗಲಿದೆ ಮತ್ತು ಆತ ಶುಕ್ರನ ಹಾಗೆ ವರ್ತಿಸಲು ಆರಂಭಿಸಲಿದ್ದಾನೆ. 

COMMERCIAL BREAK
SCROLL TO CONTINUE READING

ಗ್ಲಾಮರಸ್ ಆಗಲಿರುವ ರಾಹು
ಶುಕ್ರ ಹಾಗೂ ರಾಹುಗಳ ಪ್ರಭಾವ ಭೌತಿಕತೆಗೆ ಸಂಬಂಧಿಸಿದೆ. ಶುಕ್ರಗ್ರಹ ಎಂದರೆ ದೈತ್ಯರ ಗುರು ಶುಕ್ರಾಚಾರ್ಯ ಆಗಿದ್ದು, ಅದು ಸಾಕಷ್ಟು ವೈಭವವನ್ನು ದಯಪಾಲಿಸುತ್ತದೆ. ಭೋಗ, ವಿಳಾಸ, ಸುಖ, ವೈಭವ ಇತ್ಯಾದಿಗಳು ಶುಕ್ರನ ಬಳಿ ಇವೆ. ಶುಕ್ರ ಭರಣಿ ನಕ್ಷತ್ರಕ್ಕೆ ಸ್ವಾಮಿ ಗ್ರಹವೂ ಹೌದು. ಹೀಗಾಗಿ ಭರಣಿ ನಕ್ಷತ್ರದಲ್ಲಿ ರಾಹು ಸಾಕಷ್ಟು ಗ್ಲಾಮರಸ್ ಆಗಲಿದ್ದಾನೆ. ಇದೇ ಕಾರಣದಿಂದ ಗ್ಲಾಮರಸ್ ಜೀವನ ಬದುಕುವವರಿಗೆ ಫೆಬ್ರುವರಿ 21, 2023 ರವರೆಗೆ ಶುಕ್ರ-ರಾಹುಗಳ ಸಂಯೋಜನೆಯ ಭಾರಿ ಲಾಭ ಸಿಗಲಿದೆ. ಗ್ರಹಗಳ ಈ ಸಂಯೋಜನೆಯಿಂದ ಕೆಲ ರಾಶಿಗಳಿಗೆ ಭಾರಿ ಲಾಭ ಸಿಗಲಿದ್ದರೆ, ಕೆಲ ರಾಶಿಗಳ ಜನರಿಗೆ ಅನಾರೋಗ್ಯ ಕಾಡಲಿದೆ. 


ರಾಹುವಿನ ನಕ್ಷತ್ರ ಪರಿವರ್ತೆನೆ ರಾಶಿಗಳ ಮೇಲೆ ಈ ರೀತಿ ಪ್ರಭಾವ ಬೀರಲಿದೆ
1. ಮೇಷ ರಾಶಿ ಹಾಗೂ ಲಗ್ನ ಹೊಂದಿರುವ ಜನರ ಬಳಿ ಸಾಕಷ್ಟು ಹಣ ಹರಿದು ಬರಲಿದೆ ಮತ್ತು ಅವರ ಎಲ್ಲಾ ಕೆಲಸಗಳು ಕೂಡಿಬರಲಿವೆ. ಆದರೆ, ಧನಸಂಪತ್ತಿನ ಜೊತೆಗೆ ಕಾಯಿಲೆಗಳು ಕೂಡ ಕಾಟ ನೀಡಲಿವೆ. ಹೊಟ್ಟೆನೋವು, ಗ್ಯಾಸ್, ಮಲಬದ್ಧತೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಆದಷ್ಟು ಜಾಗ್ರತೆವಹಿಸಿ. 


2. ವೃಷಭ ರಾಶಿಯ ಜನರ ವಿದೇಶ ಯಾತ್ರ ಸಂಭವಿಸುವ ಸಾಧ್ಯತೆ ಇದೆ. ವೆಚ್ಚದ ಜೊತೆಗೆ ಸವಾಲುಗಳು ಕೂಡ ಹೆಚ್ಚಾಗಲಿವೆ. ಆದರೆ, ಧೈರ್ಯದಿಂದ ಎದುರಿಸಿದರೆ ಯಶಸ್ಸು ಕೂಡ ನಿಮ್ಮದಾಗಲಿದೆ. ಸಕ್ಕರೆ ಕಾಯಿಲೆ ಇರುವವರು ತಮ್ಮ ಆರೋಗ್ಯದ ಕುರಿತು ವಿಶೇಷ ಕಾಳಜಿವಹಿಸಿ, ಇಲ್ಲದಿದ್ದರೆ ನ್ಯೂರೋ ಸಮಸ್ಯೆ ಎದುರಾಗಬಹುದು. 


3. ಮಿಥುನ ರಾಶಿಯವರ ಆದಾಯ ಉತ್ತಮವಾಗಿರಲಿದೆ, ಆದರೆ ನೀವು ಯೋಚಿಸದೆ ಹೂಡಿಕೆ ಮಾಡಿದರೆ, ನೀವು ವಂಚನೆಗೆ ಒಳಗಾಗಬಹುದು.


4. ಮತ್ತೊಂದೆಡೆ, ಕರ್ಕ ರಾಶಿಯವರಿಗೆ ಸೌಕರ್ಯ, ಆದಾಯಗಳು ಹೆಚ್ಚಾಗಲಿವೆ. ಮನೆ, ವಾಹನ ಇತ್ಯಾದಿಗಳನ್ನು ಸಹ ಖರೀದಿಸಬಹುದು. 


5. ಸಿಂಹ ರಾಶಿಯ ಡಿಜಿಟಲ್ ಮೀಡಿಯಾ, ಸೋಷಿಯಲ್ ಮೀಡಿಯಾ, ಪತ್ರಿಕೋದ್ಯಮ, ಬರವಣಿಗೆ ಇತ್ಯಾದಿಗಳಲ್ಲಿ ಕೆಲಸ ಮಾಡುವವರಿಗೆ ಇದು ಉತ್ತಮ ಸಮಯ, ಹೊಸ ಅವಕಾಶಗಳು ಸಿಗಲಿವೆ, ದೇಶ-ವಿದೇಶಗಳಲ್ಲಿ ದೂರದ ಪ್ರಯಾಣ ಸಂಭವಿಸಬಹುದು, ಬಾಳಸಂಗಾತಿಯ ಆರೋಗ್ಯ ಹದಗೆಟ್ಟು ಹಣ ಹೆಚ್ಚು ಖರ್ಚಾಗಬಹುದು.


6. ಕನ್ಯಾ ರಾಶಿಯವರು ಈ ಅವಧಿಯಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ, ಅನಗತ್ಯವಾಗಿ ಹಣ ವ್ಯರ್ಥವಾಗುತ್ತದೆ. ಅನಾರೋಗ್ಯದ ಸಮಸ್ಯೆಯ ಹಿನ್ನೆಲೆ ವೈದ್ಯರ ಬಳಿ ನೀವು ಹಣವನ್ನು ಖರ್ಚು ಮಾಡಬಹುದು, ಈ ರಾಶಿಗೆ ಸಲಹೆ ನೀಡುವ ಜನರು ಇತರರಿಂದ ಹೂಡಿಕೆ ಮಾಡಿಸುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು.


7. ತುಲಾ ರಾಶಿಯ ವ್ಯಾಪಾರಿಗಳಿಗೆ ಸಮಯ ಉತ್ತಮವಾಗಿದೆ, ಆದರೆ ನೀವು ನಿಮ್ಮ ನೆಟ್‌ವರ್ಕ್ ಅನ್ನು ಹೆಚ್ಚಿಸಿದರೆ ಮಾತ್ರ ನಿಮಗೆ ಲಾಭ ಸಂಭವಿಸಲಿದೆ. 


8. ಹಾಗೆಯೇ ವೃಶ್ಚಿಕ ರಾಶಿಯವರ ಸಂತೋಷದ ಸಾಧನಗಳು ಹೆಚ್ಚಾಗಲಿವೆ, ಆದಾಯದ ಜೊತೆಗೆ ಖರ್ಚುಗಳು ಕೂಡ ಹೆಚ್ಚಾಗಲಿವೆ, ಕೆಲವು ರೀತಿಯ ಕಾಯಿಲೆಗಳು ಕೂಡ ಸಂಭವಿಸಬಹುದು. 


9. ಈ ಅವಧಿಯಲ್ಲಿ ಧನು ರಾಶಿಯ ವಿದ್ಯಾರ್ಥಿಗಳು ಓದಲು, ಬರೆಯಲು ಮತ್ತು ಕೆಲಸ ಮಾಡಲು ಇಷ್ಟಪಡುವುದಿಲ್ಲ, ಅವರಿಗೆ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು, ಬಾಯಿಯಲ್ಲಿ ಗುಳ್ಳೆಗಳು ಇತ್ಯಾದಿಗಳನ್ನು ಎದುರಿಸುವ ಸಾಧ್ಯತೆ ಇದೆ.


10. ಮಕರ ರಾಶಿಯವರಿಗೆ, ಈ ಸಂಯೋಜನೆಯು ಲಾಭವನ್ನು ತರುತ್ತದೆ, ಸಾಕಷ್ಟು ಆದಾಯವನ್ನು ತರುತ್ತದೆ. ಆದರೆ ಅಗತ್ಯವಿರುವ ಬಡವರಿಗೆ ನೀವು ಸಹಾಯ ಮಾಡದೆ ಹೋದಲ್ಲಿ, ಮನೆಯಲ್ಲಿ ಇರಿಸಲಾಗಿರುವ ಹಣ ಅನಾರೋಗ್ಯಕ್ಕೆ ಖರ್ಚಾಗಲಿದೆ. ಮನಸ್ಸಿನಲ್ಲಿ ಆತಂಕ ಇರುವ ಸಾಧ್ಯತೆ ಇದೆ. 


11. ಕುಂಭ ರಾಶಿಯವರ ಕೆಲಸದಲ್ಲಿ ಯು-ಟರ್ನ್ ನಂತಹ ಬದಲಾವಣೆಗಳು ಸಂಭವಿಸಲಿವೆ, ಅಂದರೆ ಉದ್ಯಮಿಗಳು ಉದ್ಯೋಗಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಮತ್ತು ಉದ್ಯೋಗಾಕಾಂಕ್ಷಿಗಳು ವ್ಯಾಪಾರ ಮಾಡಲು ಪ್ರಾರಂಭಿಸುತ್ತಾರೆ. 


ಇದನ್ನೂ ಓದಿ-Body Hair Astrology: ಪುರುಷರಷ್ಟೇ ಅಲ್ಲ ಮಹಿಳೆಯರಿಗೂ ಕೂಡ ದೇಹದ ಈ ಭಾಗಗಳಲ್ಲಿ ರೋಮಗಳಿದ್ದರೆ ಅದು ಅತ್ಯಂತ ಶುಭ ಸಂಕೇತ


12. ಮೀನ ರಾಶಿಯವರಿಗೆ ಹಣ ಹರಿದುಬರಲಿದೆ. ಆದರೆ, ಮಾತಿನ ಮೇಲೆ ನಿಯಂತ್ರಣವಿರಲಿ, ಹಲ್ಲಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಚ್ಚರದಿಂದಿರುವುದು ಉತ್ತಮ.


ಇದನ್ನೂ ಓದಿ-Mobile Wallpaper Vastu: ಮೊಬೈಲ್ ನಲ್ಲಿ ಯಾವ ವಾಲ್ ಪೇಪರ್ ಬಳಸಿದರೆ ಯಶಸ್ಸು ನಿಮ್ಮದಾಗುತ್ತದೆ?


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.