Mobile Wallpaper Vastu: ಮೊಬೈಲ್ ನಲ್ಲಿ ಯಾವ ವಾಲ್ ಪೇಪರ್ ಬಳಸಿದರೆ ಯಶಸ್ಸು ನಿಮ್ಮದಾಗುತ್ತದೆ?

Vastu Tips for Mobile: ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದೆ ಜೀವನವನ್ನೇ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿಬಿಟ್ಟಿದೆ. ಇದು ಸಾಕಷ್ಟು ಅನಾನುಕೂಲತೆಗಳನ್ನು ಹೊಂದಿದ್ದರೂ ಕೂಡ ಮತ್ತೊಂದೆಡೆ, ಮೊಬೈಲ್ ಬಳಸುವಾಗ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಿದರೆ, ಹಣದ ಮುಗ್ಗಟ್ಟು, ಮದುವೆ  ಸಮಸ್ಯೆ ಇತ್ಯಾದಿಗಳು ಬಗೆಹರಿಯುತ್ತವೆ.  

Written by - Nitin Tabib | Last Updated : Jun 13, 2022, 12:25 PM IST
  • ನಾವು ಮೊಬೈಲ್‌ನ ವಾಲ್‌ಪೇಪರ್ ಅನ್ನು ದಿನಕ್ಕೆ ನೂರಾರು ಬಾರಿ ನೋಡುತ್ತೇವೆ,
  • ಇದರಿಂದ ವಾಲ್‌ಪೇಪರ್‌ನಲ್ಲಿ ಏನಿದೆ ಮತ್ತು ಅದು ಹೇಗಿದೆ ಎಂಬುದು ನಮ್ಮ ಆಲೋಚನೆ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
  • ಯಾವ ಸಮಸ್ಯೆ ನಿವಾರಣೆಗೆ ಎಂತಹ ವಾಲ್ಪೇಪರ್ ಬಳಸಬೇಕು?
Mobile Wallpaper Vastu: ಮೊಬೈಲ್ ನಲ್ಲಿ ಯಾವ ವಾಲ್ ಪೇಪರ್ ಬಳಸಿದರೆ ಯಶಸ್ಸು ನಿಮ್ಮದಾಗುತ್ತದೆ? title=
Mobile Wallpaper Vastu Tips

Vastu Tips for Mobile Wallpaper: ಬದಲಾಗುತ್ತಿರುವ ಇಂದಿನ ಜೀವನಶೈಲಿಗೂ ಕೂಡ ವಾಸ್ತು ಶಾಸ್ತ್ರದ ನಿಯಮಗಳು ಪ್ರಸ್ತುತವಾಗಿವೆ. ಇಂದಿನ ಕಾಲಕ್ಕೆ ತಕ್ಕಂತೆ ಅವುಗಳನ್ನು ಅನುಸರಿಸಿದರೆ ಅದರಿಂದ ಸಾಕಷ್ಟು ಲಾಭ ಸಿಗುತ್ತದೆ. ಮೊಬೈಲ್ ಬಗ್ಗೆ ಹೇಳುವುದಾದರೆ, ವಾಸ್ತುಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅನುಸರಿಸುವುದರಿಂದ ನೀವು ಅನೇಕ ಸಮಸ್ಯೆಗಳಿಂದ ಪಾರಾಗಬಹುದು, ಜೊತೆಗೆ ನಿಮ್ಮ ವೃತ್ತಿ ಜೀವನ-ಆರ್ಥಿಕ ಸ್ಥಿತಿಗೂ ಕೂಡ ಇದರಿಂದ ಲಾಭ ಸಿಗುತ್ತದೆ. ಇದಕ್ಕಾಗಿ, ನಿಮ್ಮ ಮೊಬೈಲ್‌ನಲ್ಲಿ ವಾಸ್ತುಶಾಸ್ತ್ರದ ನಿಯಮಗಳನ್ನು ಅನುಸರಿಸಿ ವಾಲ್‌ಪೇಪರ್ ಅನ್ನು ಅನ್ವಯಿಸಿದರೆ ಉತ್ತಮ.

ಮೊಬೈಲ್ ವಾಲ್‌ಪೇಪರ್ ನಿಂದ ಸಮಸ್ಯೆಗಳ ಪರಿಹಾರ 
ನಾವು ಮೊಬೈಲ್‌ನ ವಾಲ್‌ಪೇಪರ್ ಅನ್ನು ದಿನಕ್ಕೆ ನೂರಾರು ಬಾರಿ ನೋಡುತ್ತೇವೆ, ಇದರಿಂದ ವಾಲ್‌ಪೇಪರ್‌ನಲ್ಲಿ ಏನಿದೆ ಮತ್ತು ಅದು ಹೇಗಿದೆ ಎಂಬುದು ನಮ್ಮ ಆಲೋಚನೆ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ವಾಲ್‌ಪೇಪರ್ ನೋಡಿದ ತಕ್ಷಣ ಧನಾತ್ಮಕ ಶಕ್ತಿಯಿಂದ ತುಂಬಿಹೋಗುವಂತಿದ್ದರೆ ಅದು ನಮ್ಮ ಆಲೋಚನೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಯಾವ ರೀತಿಯ ಸಮಸ್ಯೆ ನಿವಾರಿಸಲು ಮೊಬೈಲ್‌ನಲ್ಲಿ ಎಂತಹ ವಾಲ್‌ಪೇಪರ್ ಅನ್ನು ಇನ್ಸ್ಟಾಲ್ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.

>> ವೃತ್ತಿ-ವ್ಯವಹಾರದ ಪ್ರಗತಿಗೆ ವಾಲ್‌ಪೇಪರ್: ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ನೀವು ಸಿಲುಕಿಹಾಕಿಕೊಂಡಿದ್ದೀರಿ ಎಂದು ನೀವು ಭಾವಿಸುತ್ತಿದ್ದರೆ ಅಥವಾ ನಿಮ್ಮ ಇಚ್ಛೆಯಂತೆ ಪ್ರಗತಿಯನ್ನು ಸಾಧಿಸುತ್ತಿಲ್ಲ ಎಂದು ನೀವು ಭಾವಿಸುತ್ತಿದ್ದಾರೆ, ಮೊಬೈಲ್ ವಾಲ್‌ಪೇಪರ್‌ನಲ್ಲಿ ವ್ಯಕ್ತಿ ಮೆಟ್ಟಿಲುಗಳನ್ನು ಏರುತ್ತಿರುವ ಚಿತ್ರವನ್ನು ನೀವು ಬಳಸಬಹುದು. ಇದು ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಮತ್ತು ಇದು ನಿಮಗೆ ಮುಂದುವರಿಯಲು ಸಾಕಷ್ಟು ಸಹಾಯ ಮಾಡುತ್ತದೆ.

>> ಮನಃಶಾಂತಿಗಾಗಿ: ನಿಮ್ಮ ಮನಸ್ಸು ಸದಾ ವಿಚಲಿತವಾಗಿದ್ದರೆ, ನಿಮ್ಮ ಮೊಬೈಲ್ ವಾಲ್‌ಪೇಪರ್‌ನಲ್ಲಿ ಮಳೆಯ ನೀರಿನ ಹಿತವಾದ ಚಿತ್ರವನ್ನು ಹಾಕಿ. ಇದಲ್ಲದೇ ಯೋಗಾಸನದ ಚಿತ್ರವನ್ನೂ ವಾಲ್‌ಪೇಪರ್‌ನಲ್ಲಿ ಹಾಕಿದರೆ ಒಳ್ಳೆಯದು.

>> ವೈವಾಹಿಕ ಅಥವಾ ಪ್ರೇಮ ಜೀವನದ ಸಮಸ್ಯೆಗಳಿಂದ ಹೊರಬರಲು: ಮದುವೆ ಅಥವಾ ಪ್ರೇಮ ಜೀವನದಲ್ಲಿ ಸಮಸ್ಯೆಗಳಿದ್ದರೆ, ವಾಲ್‌ಪೇಪರ್‌ನಲ್ಲಿ ಗುಲಾಬಿಯ ಚಿತ್ರವನ್ನು ಹಾಕಿ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಪ್ರೀತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

>> ಹೊಸ ಉದ್ಯೋಗ ಪಡೆಯಲು: ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಬಡ್ತಿ ಪಡೆಯಲು ಬಯಸುತ್ತಿದ್ದರೆ, ನಂತರ ಮೊಬೈಲ್‌ನ ವಾಲ್‌ಪೇಪರ್‌ಗೆ ಹಸಿರಿನಿಂದ ಕೂಡಿದ ಚಿತ್ರವನ್ನು ಹಾಕಿ. ಹಸಿರು ಬಣ್ಣವು ಯಶಸ್ಸಿನ ಸಂಕೇತವಾಗಿದೆ.

ಇದನ್ನೂ ಓದಿ-ಬ್ರಾಹ್ಮೀ ಮುಹೂರ್ತದಲ್ಲಿ ಬೀಳುವ ಈ ಕನಸುಗಳು ನೂರಕ್ಕೆ ನೂರು ಪ್ರತಿಶತದಷ್ಟು ಧನ ಲಾಭ ನೀಡುತ್ತವೆಯಂತೆ ..!

>> ಹಣದ ಕೊರತೆ ಹೋಗಲಾಡಿಸಲು: ಹಣದ ಬಿಕ್ಕಟ್ಟು ನಿಮ್ಮನ್ನು ಬಿಡುತ್ತಿಲ್ಲ ಎಂದಾದಲ್ಲಿ ನಿಮ್ಮ ಮೊಬೈಲ್ ನ ವಾಲ್ ಪೇಪರ್ ನಲ್ಲಿ ಬುದ್ಧನ ಆಶೀರ್ವಾದದ ಚಿತ್ರವನ್ನು ಹಾಕಿದರೆ ಸಾಕಷ್ಟು ಲಾಭ ಸಿಗುತ್ತದೆ. ಇದು ನಿಮ್ಮ ಆದಾಯವನ್ನು ಹೆಚ್ಚಿಸುವಲ್ಲಿ ಸಹಾಯಕ ಸಾಬೀತಾಗುತ್ತದೆ ಮತ್ತು ನಿಮಗೆ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಇದನ್ನೂ ಓದಿ-ಮಂಗಳ ಗೋಚರ : ಈ ಮೂರು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಿಗಲಿದೆ ಬಹು ದೊಡ್ಡ ಯಶಸ್ಸು ..!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News