Rahu Gochar 2023: 2023 ರಲ್ಲಿ, ಅಕ್ಟೋಬರ್ ತಿಂಗಳಲ್ಲಿ ರಾಹು ಮೇಷ ರಾಶಿಯನ್ನು ಪ್ರವೆಶಿಸಲಿದ್ದಾನೆ. ಆದರೆ ಅದಕ್ಕೂ ಮುನ್ನ ಅಕ್ಟೋಬರ್ ವರೆಗೆ ರಾಹು ವೃಷಭ ರಾಶಿಯಲ್ಲಿ ವಿರಾಜಮಾನನಾಗಲಿದ್ದಾನೆ ಇನ್ನೊಂದೆಡೆ, ಕುಂಭ ರಾಶಿಯಲ್ಲಿ ಶನಿಯ ಸಂಚಾರದಿಂದ ರಾಹು ಮತ್ತು ಶನಿ ಪರಸ್ಪರ ಕೇಂದ್ರ ಸ್ಥಾನದಲ್ಲಿರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ರಾಹು ಮತ್ತು ಶನಿಯ ಪ್ರಭಾವದಿಂದ, ವೃಷಭ ರಾಶಿಯ ಜಾತಕದವರಿಗೆ, ಅದರಲ್ಲಿಯೂ ವಿಶೇಷವಾಗಿ ರಾಹು ಮತ್ತು ಶನಿ ಸಂಕ್ರಮಣದಿಂದ ಕುಂಭ ರಾಶಿಯವರು ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಇದರೊಂದಿಗೆ, ಈ ರಾಶಿಗಳ  ಸ್ಥಳೀಯರಿಗೆ ರಾಹು ಹಠಾತ್ ಲಾಭವನ್ನು ನೀಡಲಿದ್ದಾನೆ.


COMMERCIAL BREAK
SCROLL TO CONTINUE READING

ಮಿಥುನ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹುವಿನ ಹಿಮ್ಮುಖ ಚಲನೆ ಈ ರಾಶಿಯ ಏಕಾದಶ ಭಾವದಲ್ಲಿ ಸಂಭವಿಸುತ್ತಿದೆ. ಈ ಸಮಯದಲ್ಲಿ, ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇದೆ ವೇಳೆ, ಈ ಸಮಯದಲ್ಲಿ ದೊಡ್ಡ ವೆಚ್ಚಗಳು ಸಹ ಎದುರಾಗಬಹುದು, ಆದರೆ ಹಣದ ಆಗಮನದಿಂದಾಗಿ, ಎಲ್ಲವೂ ಸುಗಮವಾಗಿ ನೆರವೇರಲಿದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಈ ಸಮಯವು ಅನುಕೂಲಕರವಾಗಿದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆದರೆ ನೀವು ಕೆಲಸದ ಮೇಲೆ ಗಮನ ಹರಿಸಬೇಕು. ಶೀಘ್ರ ಪ್ರಯಾಣದ ಲಕ್ಷಣಗಳು ಗೋಚರಿಸುತ್ತಿವೆ ಮತ್ತು ಅದು ಸಾಕಷ್ಟು ಪ್ರಯೋಜನವನ್ನು ನೀಡಲಿದೆ.


ಕರ್ಕ ರಾಶಿ
ಕರ್ಕ ರಾಶಿಯ ದಶಮಭಾವದಲ್ಲಿ ರಾಹುವಿನ ಈ ಗೋಚರ ಸಂಭವಿಸಲಿದೆ. ಈ ಸಮಯದಲ್ಲಿ, ಕುಟುಂಬ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಮತ್ತೊಂದೆಡೆ, ಕುಟುಂಬದ ಸದಸ್ಯರ ಆರೋಗ್ಯ ಹದಗೆಡುವುದರಿಂದ ಕುಟುಂಬದಲ್ಲಿ ಉದ್ವಿಗ್ನ ವಾತಾವರಣ ಇರುತ್ತದೆ. ಈ ಸಮಯದಲ್ಲಿ ಖರ್ಚು ಹೆಚ್ಚಾಗುತ್ತದೆ. ಆದರೆ ಹಣದ ಹಠಾತ್ ಆಗಮನವು ಅದನ್ನು ಸರಿದೂಗಿಸಲಿದೆ. ಈ ಅವಧಿಯಲ್ಲಿ ಹೆಚ್ಚಿನ ಕೆಲಸದ ಒತ್ತಡ ಇರಲಿದೆ. ಏತನ್ಮಧ್ಯೆ ಹಣಕಾಸಿನ ಆಗಮನ, ನಿಮ್ಮ ಆರ್ಥಿಕ ಸ್ಥಿತಿಯನ್ನು ಸರಿಯಾಗಿಡುತ್ತದೆ ಮತ್ತು ಹಣದ ಕೊರತೆಯನ್ನು ಎದುರಿಸಲು ನಿಮಗೆ ಅವಕಾಶ ನೀಡುವುದಿಲ್ಲ. ಈ ಅವಧಿಯಲ್ಲಿ ಬಂಧು ಮಿತ್ರರ ಸಹಕಾರ ಸಿಗಲಿದೆ.


ವೃಶ್ಚಿಕ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಂಕ್ರಮವು ನಿಮ್ಮ ಜಾತಕದ ಷಷ್ಠಮ ಭಾವದಲ್ಲಿ ಸಂಭವಿಸಲಿದೆ. ರಾಹುವಿನ ಸಂಚಾರದಿಂದ ನೀವು ಎದುರಾಳಿಗಳ ಮೇಲೆ ವಿಜಯ ಸಾಧಿಸುವಿರಿ. ಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದೇ ವೇಳೆ, ನಿಮ್ಮ ಆರ್ಥಿಕ ಭಾಗವು ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ನೀವು ಹುಡುಕುತ್ತಿರುವ ಅವಕಾಶಗಳನ್ನು ನೀವು ಕಾಣಬಹುದು. ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧಗಳಲ್ಲಿ ಮಾಧುರ್ಯತೆ ಇರಲಿದೆ. ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ನೀವು ಪ್ರವಾಸಕ್ಕೆ ಹೋಗಬಹುದು.


ಇದನ್ನೂ ಓದಿ-Lucky Zodiac Signs: ಇತರರ ಪಾಲಿಗೆ ತುಂಬಾ ಲಕ್ಕಿ ಇಂತಹ ಜನ, ವಿವಾಹದ ಬಳಿಕ ಸಂಗಾತಿಯ ಅದೃಷ್ಟವನ್ನೇ ಬದಲಿಸುತ್ತಾರೆ


ಕುಂಭ ರಾಶಿ
ಈ ರಾಶಿ ಜಾತಕದ ತೃತೀಯ ಭಾವದಲ್ಲಿ ಈ ರಾಹು ಗೋಚರ ನೆರವೇರಲಿದೆ, ಇದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ, ವ್ಯಾಪಾರದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಈ ಸಮಯವು ವೃತ್ತಿಜೀವನಕ್ಕೂ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಅವಕಾಶ ಸಿಗಲಿದೆ. ವಿದೇಶಗಳೊಂದಿಗೆ ಸಂಬಂಧ ಹೊಂದಿರುವ ಉದ್ಯಮಿಗಳು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ವಿವಾದಗಳಿಂದ ದೂರವಿರಿ.


ಇದನ್ನೂ ಓದಿ-Shani Auspicious Effect: ಶನಿಯ ಶುಭ ದೆಸೆ ಇದ್ದರೆ ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.