Shani Auspicious Effect: ಶನಿಯ ಶುಭ ದೆಸೆ ಇದ್ದರೆ ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ

Shani Dev:ಶನಿಯು ಶುಭ ಫಲಿತಾಂಶಗಳ ಜೊತೆಗೆ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಜಾತಕದಲ್ಲಿ ಶನಿ ಸ್ಥಾನ ಪ್ರಬಲವಾಗಿದ್ದರೆ, ವ್ಯಕ್ತಿಗಳು ಶನಿಯ ಮಹಾದೆಸೆಯಲ್ಲಿಯೂ ಕೂಡ ಲಾಭವನ್ನು ಪಡೆಯುತ್ತಾರೆ. ಇದಲ್ಲದೇ ಶನಿದೇವ ಯಕ್ತಿಗಳ ಕರ್ಮಗಳಿಗನುಗುಣವಾಗಿ ಫಲವನ್ನು ನೀಡುತ್ತಾನೆ.

Written by - Nitin Tabib | Last Updated : Jan 9, 2023, 09:32 PM IST
  • ನಿಯ ಶುಭ ಸ್ಥಾನ ವ್ಯಕ್ತಿಗೆ ಸಾಕಷ್ಟು ಘನತೆ ಮತ್ತು ಗೌರವವನ್ನು ನೀಡುತ್ತದೆ.
  • ಶನಿಯ ಪ್ರಭಾವದಿಂದಾಗಿ, ವ್ಯಕ್ತಿಯು ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿಯಾಗುತ್ತಾನೆ.
  • ಮತ್ತು ಅನ್ಯಾಯದ ವಿರುದ್ಧ ಎದ್ದು ನಿಲ್ಲುತ್ತಾನೆ.
Shani Auspicious Effect: ಶನಿಯ ಶುಭ ದೆಸೆ ಇದ್ದರೆ ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ title=
Auspicious Shani Effect

Shani's Auspicious Effect On Life: ಶನಿಯ ಕೆಟ್ಟ ದೃಷ್ಟಿ ಜೀವನವನ್ನೇ ನಾಶಪಡಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ, ಆದರೆ ಶನಿಯು ಶುಭ ಫಲಿತಾಂಶಗಳನ್ನು ಕೂಡ ನೀಡುತ್ತಾನೆ ಎಂಬುದು ಕೆಲವೇ ಜನರಿಗೆ ಮಾತ್ರ ತಿಳಿದಿದೆ.ಶನಿಯು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ, ಅವನು ವ್ಯಕ್ತಿಯ ಜೀವನವನ್ನು ಸಂತೋಷದಿಂದ ತುಂಬುತ್ತಾನೆ. ಶನಿಯ ಕೃಪೆಯು ಓರ್ವ ಭಿಕ್ಷುಕನನ್ನು ಅರಸನನ್ನಾಗಿ ಕೂಡ ಮಾಡುತ್ತದೆ ಎನ್ನಲಾಗುತ್ತದೆ. ಇದಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕರ್ಮಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ವ್ಯಕ್ತಿಯ ಕರ್ಮಗಳು ಒಂದು ವೇಳೆ ಉತ್ತಮವಾಗಿದ್ದರೆ, ಜಾತಕದಲ್ಲಿ ಶನಿ ಅಶುಭವಾಗಿದ್ದರೂ ಕೂಡ ವ್ಯಕ್ತಿಗೆ ಅಷ್ಟೊಂದು ಸಮಸ್ಯೆ ಎದುರಾಗುವುದಿಲ್ಲ. ಆದರೆ, ವ್ಯಕ್ತಿಯ ಕರ್ಮಗಳು ಒಂದು ವೇಳೆ ಸರಿಯಾಗಿಲ್ಲದಿದ್ದರೆ, ಶನಿಯ ಶುಭ ಸ್ಥಾನವು ಕೂಡ ವ್ಯಕ್ತಿಗೆ ಪೂರ್ಣ ಫಲಿತಾಂಶಗಳು ಪ್ರಾಪ್ತಿಯಾಗುವುದಿಲ್ಲ.

ಜಾತಕದಲ್ಲಿನ ಶುಭ ಶನಿಯು ಅನೇಕ ಉಡುಗೊರೆಗಳನ್ನು ನೀಡುತ್ತಾನೆ
ಜಾತಕದಲ್ಲಿ ಶನಿಯ ಸ್ಥಾನವು ಶುಭವಾಗಿದ್ದರೆ ಮತ್ತು ವ್ಯಕ್ತಿಯ ಕರ್ಮಗಳು ಕೂಡ ಉತ್ತಮವಾಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಉಡುಗೊರೆಗಳನ್ನು ಪಡೆಯುತ್ತಾನೆ. ಶನಿಯು ಜೀವನದಲ್ಲಿ ಏನನ್ನು ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 
ಪ್ರಗತಿ: ಜಾತಕದಲ್ಲಿ ಶನಿಯ ಮಂಗಳ ಸ್ಥಾನವು ವ್ಯಕ್ತಿಗೆ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ. ವ್ಯಕ್ತಿಯು ಯಾವ ಕ್ಷೇತ್ರಕ್ಕೆ ಹೋದರೂ, ಅವನು ವೇಗವಾಗಿ ಯಶಸ್ಸನ್ನು ಪಡೆಯುತ್ತಾನೆ.

ಸಂತೋಷ ಪ್ರಾಪ್ತಿಯಾಗುತ್ತದೆ
ಶನಿಯ ಶುಭ ದೆಸೆ ವ್ಯಕ್ತಿಗೆ ಐಷಾರಾಮಿ ಮನೆಯಲ್ಲಿ ವಾಸಿಸುವ ಅವಕಾಶವನ್ನು ನೀಡುತ್ತದೆ.

ಗೌರವ ಪಾಪ್ತಿ 
ಶನಿಯ ಶುಭ ಸ್ಥಾನ ವ್ಯಕ್ತಿಗೆ ಸಾಕಷ್ಟು ಘನತೆ ಮತ್ತು ಗೌರವವನ್ನು ನೀಡುತ್ತದೆ. ಶನಿಯ ಪ್ರಭಾವದಿಂದಾಗಿ, ವ್ಯಕ್ತಿಯು ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿಯಾಗುತ್ತಾನೆ ಮತ್ತು ಅನ್ಯಾಯದ ವಿರುದ್ಧ ಎದ್ದು ನಿಲ್ಲುತ್ತಾನೆ. ವ್ಯಕ್ತಿಯ ಈ ಗುಣಗಳು ಆತನಿಗೆ ಸಾಕಷ್ಟು ಗೌರವವನ್ನು ತಂದುಕೊಡುತ್ತವೆ.

ಶನಿದೇವನನ್ನು ಹೇಗೆ ಪ್ರಸನ್ನಗೊಳಿಸಬೇಕು
>> ಶನಿಯು ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ, ಆದ್ದರಿಂದ ವ್ಯಕ್ತಿಯು ಶನಿ ದೇವರಿಗೆ ಇಷ್ಟವಾದ ಕರ್ಮಗಳನ್ನು ಮಾಡಬೇಕು. ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವಂತೆ, ಎಲ್ಲದರಲ್ಲೂ ಪ್ರಾಮಾಣಿಕರಾಗಿ, ಮಾದಕ ವಸ್ತುಗಳಿಂದ ದೂರವಿರಿ.

ಇದನ್ನೂ ಓದಿ-Relationship Tips: ಸಂಗಾತಿಗೆ ಸರ್ಪ್ರೈಸ್ ಕೊಡಬೇಕೇ? ಈ ಸಲಹೆ ಅನುಸರಿಸಿ, ಪ್ರೀತಿ ಹೆಚ್ಚಾಗುತ್ತೆ

>> ಇದಲ್ಲದೇ ಶನಿದೇವನನ್ನು ಪ್ರಸನ್ನಗೊಳಿಸುವ ಕೆಲ ಕಾರ್ಯಗಳನ್ನು ಮಾಡಬೇಕು. ಉದಾಹರಣೆಗೆ, ಶನಿದೇವನ ಆಶೀರ್ವಾದ ಪಡೆಯಲು, ಹನುಮನನ್ನು ಪೂಜಿಸಿ. ಶನಿವಾರದಂದು ಆಲದ ಮರಕ್ಕೆ ನೀರನ್ನು ಅರ್ಪಿಸಿ. ಶನಿದೇವನಿಗೆ ಎಣ್ಣೆಯನ್ನು ಅರ್ಪಿಸಿ.

ಇದನ್ನೂ ಓದಿ-Sankranti 2023: ಈ ಬಾರಿ ಜನವರಿ 15ಕ್ಕೆ ಮಕರ ಸಂಕ್ರಾಂತಿ, ಸ್ನಾನ-ದಾನದ ಸರಿಯಾದ ಸಮಯ ಮತ್ತು ಪುಣ್ಯಕಾಲದ ಮಹತ್ವ ಇಲ್ಲಿದೆ

(ಹಕ್ಕುತ್ಯಾಗ- ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News