ಬೆಂಗಳೂರು : Rahu Planet Transit 2022 : ಜ್ಯೋತಿಷ್ಯದ ಪ್ರಕಾರ, ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹಗಳೆಂದರೆ ರಾಹು ಮತ್ತು ಕೇತುಗಳಾಗಿವೆ. ಈ ಎರಡೂ ಗ್ರಹಗಳು ಒಂದೂವರೆ ವರ್ಷದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಇದಲ್ಲದೇ ಸದಾ ಹಿಮ್ಮುಖವಾಗಿ ಚಲಿಸುವುದು ಈ ಎರಡು ರಾಶಿಯ ವಿಶೇಷ. ಏಪ್ರಿಲ್ ತಿಂಗಳಿನಲ್ಲಿ ರಾಹು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದೆ. ರಾಹು-ಕೇತುಗಳನ್ನು ಛಾಯಾ ಗ್ರಹಗಳು ಎಂದು ಕರೆಯಲಾಗುತ್ತದೆ. ಅವುಗಳ ಕೆಟ್ಟ ಪರಿಣಾಮವು ಜೀವನವನ್ನು ನಾಶಪಡಿಸುತ್ತದೆ. ಆದರೆ ಈ ಗ್ರಹಗಳು ಶುಭ ಫಲಿತಾಂಶಗಳನ್ನು ಕೂಡಾ ನೀಡುತ್ತವೆ. ಈ ಸಮಯದ ರಾಹು ಸಂಕ್ರಮಣವು 3 ರಾಶಿಯ ಜನರಿಗೆ ತುಂಬಾ ಶುಭವಾಗಿರಲಿದೆ.  ಈ ಮೂರು ರಾಶಿಯವರ ಮೇಲೆ ರಾಹು ಒಂದು ವರ್ಷಕ್ಕಿಂತ ಹೆಚ್ಚು ಕಾಲದವರೆಗೆ ಕೃಪೆ ತೋರಲಿದ್ದಾನೆ.  


COMMERCIAL BREAK
SCROLL TO CONTINUE READING

ಈ ರಾಶಿಯವರಿಗೆ ರಾಹು ಸಂಕ್ರಮಣ ಬಹಳ ಮಂಗಳಕರ :
ಮಿಥುನ: ರಾಹುವಿನ ಸಂಕ್ರಮಣವು ಮಿಥುನ ರಾಶಿಯವರಿಗೆ ಅನೇಕ ಶುಭ ಫಲಗಳನ್ನು ನೀಡಲಿದೆ.  ಈ ಸಮಯವು ಮಿಥುನ ರಾಶಿಯವರ ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಅವರ ಆದಾಯದಲ್ಲಿ ಗಣನೀಯ ಏರಿಕೆಯಾಗಲಿದೆ. ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಿರಿ. ವಿಶೇಷವಾಗಿ ವ್ಯಾಪಾರದಲ್ಲಿರುವ ಜನರಿಗೆ, ಈ ಸಮಯದಲ್ಲಿ ಹಣದ ಹೊಳೆಯೇ ಹರಿಯಲಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ದೊಡ್ಡ ಹುದ್ದೆಯನ್ನೂ ಪಡೆಯಬಹುದು. 


ಇದನ್ನೂ ಓದಿ : ರಾತ್ರಿ ವೇಳೆ ಏಕೆ ಉಗುರು ಕತ್ತರಿಸಬಾರದು? ಅದರ ಹಿಂದಿನ ವೈಜ್ಞಾನಿಕ-ಧಾರ್ಮಿಕ ಕಾರಣಗಳಿವು


ಕರ್ಕ ರಾಶಿ : ಕರ್ಕ ರಾಶಿಯವರಿಗೆ ಕೆಲಸದ ವಿಷಯದಲ್ಲಿ ರಾಹುವಿನ ಸಂಚಾರವು ಅತ್ಯಂತ ಮಂಗಳಕರವಾಗಿರಲಿದೆ. ಉದ್ಯೋಗದಲ್ಲಿರುವವರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಹೊಸ ಉದ್ಯೋಗ ಸಿಗಬಹುದು. ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಪಡೆಯಬಹುದು. ಹೂಡಿಕೆಯಲ್ಲಿ ಲಾಭದಾಯಕವಾಗಲಿದೆ. ಹೊಸ ಮನೆ-ಕಾರು ಖರೀದಿಸಬಹುದು. 


ಮೀನ: ರಾಹುವಿನ ಸಂಚಾರವು ಮೀನ ರಾಶಿಯವರಿಗೆ ಧನ ಲಾಭವನ್ನು ತರುತ್ತದೆ. ಈ ರಾಶಿಯವರು ಕೆಲಸದಲ್ಲಿ ಪ್ರಗತಿ ಸಾಧಿಸುತ್ತಾರೆ. ಗಳಿಕೆ ಹೆಚ್ಚಲಿದೆ. ರಾಜಕೀಯಕ್ಕೆ ಬರಲು ಅಥವಾ ದೊಡ್ಡ ಹುದ್ದೆಯನ್ನು ಪಡೆಯಲು ಬಯಸುವವರ ಕನಸು ಈಡೇರುತ್ತದೆ. ಒಟ್ಟಾರೆಯಾಗಿ, ಈ ಸಮಯವು ಅವರಿಗೆ ಪ್ರತಿಯೊಂದು ವಿಷಯದಲ್ಲೂ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.  


ಇದನ್ನೂ ಓದಿ : Name Astrology: ಐಶಾರಾಮಿ ಬದುಕು, ಧನ ಸಂಪತ್ತು ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ ಈ ಹೆಸರಿನವರು..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.