ರಾತ್ರಿ ವೇಳೆ ಏಕೆ ಉಗುರು ಕತ್ತರಿಸಬಾರದು? ಅದರ ಹಿಂದಿನ ವೈಜ್ಞಾನಿಕ-ಧಾರ್ಮಿಕ ಕಾರಣಗಳಿವು

ಹಣಕ್ಕಾಗಿ ಆಸ್ಟ್ರೋ ಸಲಹೆಗಳು:  ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇಂತಹ ನಂಬಿಕೆಯ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೆರಡೂ ಕಾರಣವಾಗಿವೆ. 

Written by - Yashaswini V | Last Updated : May 5, 2022, 12:07 PM IST
  • ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮಿಯು ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಕಿರಿಕಿರಿಗೊಳ್ಳುತ್ತಾಳೆ.
  • ಇದರಿಂದ ವ್ಯಕ್ತಿಯು ಆರ್ಥಿಕ ನಷ್ಟವನ್ನು ಅನುಭವಿಸುತ್ತಾನೆ.
  • ಇದು ಮನೆಯಲ್ಲಿ ಬಡತನವನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ರಾತ್ರಿ ವೇಳೆ ಏಕೆ ಉಗುರು ಕತ್ತರಿಸಬಾರದು? ಅದರ ಹಿಂದಿನ ವೈಜ್ಞಾನಿಕ-ಧಾರ್ಮಿಕ ಕಾರಣಗಳಿವು title=
Cut Nails At Night

ರಾತ್ರಿ ವೇಳೆ ಏಕೆ ಉಗುರು ಕತ್ತರಿಸಬಾರದು: ಹಿಂದೂ ಧರ್ಮ, ವಾಸ್ತು ಶಾಸ್ತ್ರ, ಜ್ಯೋತಿಷ್ಯದಲ್ಲಿ ರಾತ್ರಿ ವೇಳೆ ಅಥವಾ ಮುಸ್ಸಂಜೆಯ ನಂತರ ಅನೇಕ ಕೆಲಸಗಳನ್ನು ನಿಷೇಧಿಸಲಾಗಿದೆ. ಅದೇ ಸಮಯದಲ್ಲಿ, ಕೆಲವು ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡದಂತೆ ಹೇಳಲಾಗುತ್ತದೆ. ಈ ನಿಯಮಗಳನ್ನು ಅನುಸರಿಸದಿರುವುದು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಅಂತಹ ನಂಬಿಕೆಗಳಲ್ಲಿ ಒಂದು ರಾತ್ರಿ ವೇಳೆ ಉಗುರು ಕತ್ತರಿಸಿದರೆ ಬಡತನ ಬರುತ್ತದೆ ಎಂಬುದಾಗಿದೆ. ಸಾಮಾನ್ಯವಾಗಿ ಮನೆಯ ಹಿರಿಯರು ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ.  ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸುವುದು ಬಡತನವನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ, ಇದು ಸತ್ಯವೇ? ಇದರ ಹಿಂದಿನ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳೇನು ಎಂದು ತಿಳಿಯೋಣ...

ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸದಿರುವುದರ ಹಿಂದಿನ ವೈಜ್ಞಾನಿಕ ಕಾರಣ :
ರಾತ್ರಿಯಲ್ಲಿ ಉಗುರು ಕತ್ತರಿಸಬಾರದು ಎಂಬುದರ ಹಿಂದಿನ ವೈಜ್ಞಾನಿಕ ಕಾರಣವೆಂದರೆ ಹಿಂದಿನ ಕಾಲದಲ್ಲಿ ಈಗಿನಂತೆ ವಿದ್ಯುತ್ ಸೌಲಭ್ಯ ಇರಲಿಲ್ಲ. ಹಾಗಾಗಿ ಕತ್ತಲೆಯಲ್ಲಿ ಉಗುರು ಕತ್ತರಿಸುವಾಗ ಏನಾದರೂ ಗಾಯವಾಗಬಹುದು ಎಂಬ ಕಾರಣಕ್ಕೆ ಕತ್ತಲೆಯಲ್ಲಿ ಅಂದರೆ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎಂದು ಹೇಳಲಾಗುತ್ತಿತ್ತು.  

ಇದನ್ನೂ ಓದಿ- ಹಣ ಪ್ರಾಪ್ತಿ ಜೊತೆಗೆ ಸೂರ್ಯ ದೋಷ ನಿವಾರಣೆಗೆ ಸಹಾಕಾರಿ ಈ ರುದ್ರಾಕ್ಷಿ

ತಾಯಿ ಲಕ್ಷ್ಮಿ ಅಸಮಾಧಾನಗೊಳ್ಳುತ್ತಾಳೆ ಎಂಬ ನಂಬಿಕೆ:
ಮತ್ತೊಂದೆಡೆ, ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮಿಯು ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಕಿರಿಕಿರಿಗೊಳ್ಳುತ್ತಾಳೆ. ಇದು ಮನೆಯಲ್ಲಿ ಬಡತನವನ್ನು ತರುತ್ತದೆ. ವ್ಯಕ್ತಿಯು ಆರ್ಥಿಕ ನಷ್ಟವನ್ನು ಅನುಭವಿಸುತ್ತಾನೆ, ಅವನ ಠೇವಣಿ ಬಂಡವಾಳವು ಖಾಲಿಯಾಗುತ್ತದೆ, ಅವನ ಮೇಲೆ ಸಾಲದ ಹೊರೆ ಹೆಚ್ಚಾಗುತ್ತದೆ ಎಂಬ ನಂಬಿಕೆ. ವಾಸ್ತವವಾಗಿ, ಲಕ್ಷ್ಮಿ ದೇವಿಯು ಸಂಜೆಯ ವೇಳೆಗೆ ಆಗಮಿಸುತ್ತಾಳೆ ಎಂದು ನಂಬಲಾಗಿದೆ, ಆದ್ದರಿಂದ ಎಲ್ಲಾ ಶುಚಿಗೊಳಿಸುವ ಸಂಬಂಧಿತ ಕೆಲಸಗಳನ್ನು ಮುಸ್ಸಂಜೆಗೂ ಮೊದಲು ಮಾಡಬೇಕು ಎಂದು ಹೇಳಲಾಗುತ್ತದ. ಅದು ಮನೆಯ ಹೊರಗಿನ ಸ್ವಚ್ಛತೆ ಅಥವಾ ವೈಯಕ್ತಿಕ ಶುಚಿತ್ವ ಎರಡಕ್ಕೂ ಅನ್ವಯಿಸುತ್ತದೆ. ಆದ್ದರಿಂದ, ಸಂಜೆಯ ಮೊದಲು, ಉಗುರುಗಳು ಮತ್ತು ಕೂದಲನ್ನು ಕತ್ತರಿಸುವ ಕೆಲಸವನ್ನು ಮಾಡಬೇಕು. ಮುಸ್ಸಂಜೆಯಲ್ಲಿ ಅಥವಾ ರಾತ್ರಿ ವೇಳೆ ಈ ಕೆಲಸಗಳನ್ನು ಮಾಡಬಾರದು ಎನ್ನಲಾಗುವುದು.

ಇದನ್ನೂ ಓದಿ- ಮೇ 10ರ ನಂತರ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ: ಈ ರಾಶಿಯವರಿಗೆ ಅದೃಷ್ಟ

ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಸಂಜೆ ವೇಳೆ ಈ ಕೆಲಸ ಮಾಡಿ:
>> ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಸೂರ್ಯಾಸ್ತದ ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. 
>> ಪ್ರತಿದಿನ ಸಂಜೆ ಪೂಜೆ ಮಾಡಬೇಕು. 
>> ಮುಖ್ಯದ್ವಾರದಲ್ಲಿ ದೀಪವನ್ನು ಬೆಳಗಿಸಬೇಕು. 
>> ದೇವತೆಗಳಿಗೆ ಆರತಿಯನ್ನು ಮಾಡಬೇಕು. 
>> ಇದರಿಂದ ತಾಯಿ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂಬ ನಂಬಿಕೆ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News