ಬೆಂಗಳೂರು : ರಾಹುವನ್ನು ಛಾಯಾ ಗ್ರಹ ಮತ್ತು ಪಾಪ ಗ್ರಹ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಸೂರ್ಯ ಮತ್ತು ಚಂದ್ರನೊಂದಿಗೆ ದ್ವೇಷವನ್ನು ಹೊಂದಿದ್ದಾನೆ. ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಸಂಭವಿಸುವಲ್ಲಿ ರಾಹು ಪ್ರಮುಖ ಪಾತ್ರ ವಹಿಸುತ್ತದೆ. ರಾಹುವಿನ ಸ್ಥಾನ ಅಶುಭವಾಗಿದ್ದಾಗ, ವ್ಯಕ್ತಿಯ ಜೀವನದಲ್ಲಿ ಅನೇಕ ಸಂಕಷ್ಟಗಳು ಎದುರಾಗುತ್ತವೆ. ಜಾತಕದಲ್ಲಿ ಕಾಲ ಸರ್ಪದೋಷ, ಪಿತೃದೋಷ, ಮತ್ತು ಅಂಗಾರಕ ದೋಷ ಇತ್ಯಾದಿಗಳು ರಾಹುವಿನಿಂದಲೇ ಉಂಟಾಗುತ್ತವೆ. ಈ ಎಲ್ಲಾ  ದೋಷಗಳನ್ನು ಜ್ಯೋತಿಷ್ಯದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಭರಣಿ ನಕ್ಷತ್ರದಲ್ಲಿ ರಾಹು ಗೋಚರ :  
ಪಂಚಾಂಗದ ಪ್ರಕಾರ, ರಾಹು ಪ್ರಸ್ತುತ ಕೃತ್ತಿಕಾ ನಕ್ಷತ್ರದಲ್ಲಿದ್ದಾರೆ. ಇದು ಮೇಷ ರಾಶಿಯ ಚಿಹ್ನೆಯ ಅಡಿಯಲ್ಲಿ ಬರುತ್ತದೆ. ಜೂನ್ 14, 2022 ರಂದು ರಾಹು ಭರಣಿ ನಕ್ಷತ್ರವನ್ನು  ಪ್ರವೇಶಿಸುತ್ತಾನೆ.  ಭರಣಿ ನಕ್ಷತ್ರದ ನಾಲ್ಕನೇ ಪಾದದಲ್ಲಿ ರಾಹು ಸಂಚಾರ ಆಗಲಿದೆ. 


ಇದನ್ನೂ ಓದಿ : Narsimha Jayanti 2022: ಜೀವನದಲ್ಲಿನ ದುಃಖ-ನೋವುಗಳಿಂದ ಮುಕ್ತಿ ಪಡೆಯಬೇಕೆ? ಈ ಕಥೆ ತಪ್ಪದೆ ಆಲಿಸಿ


ಮೇಷ: ಮೇಷ ರಾಶಿಯವರಿಗೆ ಕೆಲವು ಸಂದರ್ಭಗಳಲ್ಲಿ ರಾಹುವಿನ ಸಂಕ್ರಮವು ಶುಭವಲ್ಲ. ರಾಹು ಕಳೆದ 12 ಏಪ್ರಿಲ್ 2022 ರಿಂದ ಮೇಷ ರಾಶಿಯಲ್ಲಿ ಸಾಗುತ್ತಿದೆ. ಈಗ ರಾಹುವಿನ ನಕ್ಷತ್ರ ಬದಲಾಗಲಿದೆ. ವಿಶೇಷವೆಂದರೆ ಯಾವ ನಕ್ಷತ್ರಕ್ಕೆ ರಾಹು ಪ್ರವೇಶಿಸಲಿದ್ದಾನೆ ಆ ನಕ್ಷತ್ರ ಮೇಷ ರಾಶಿಯ ಅಡಿಯಲ್ಲಿ ಬರುತ್ತದೆ. ಜೂನ್ 14 ರಂದು ಭರಣಿ ನಕ್ಷತ್ರದ 4 ನೇ  ಪಾದಕ್ಕೆ ರಾಹು ಪ್ರವೇಶಿಸಲಿದ್ದಾನೆ.  ಇದರ ಅಧಿಪತಿ ಮಂಗಳ. ಮೇಷ ರಾಶಿಯ ಅಧಿಪತಿಯೂ ಮಂಗಳ. ಮಂಗಳನೊಂದಿಗೆ ರಾಹುವಿನ ಯಾವುದೇ ರೀತಿಯ ಸಂಬಂಧ ಶುಭ ಫಲಗಳನ್ನೂ ನೀಡುವುದಿಲ್ಲ. ಜೀವನದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಉದ್ಯೋಗವನ್ನು ಹುಡುಕುತ್ತಿರುವವರು ಹೆಚ್ಚು ಕಷ್ಟಪಟ್ಟು ಕೆಲಸ ಪಡೆಯಬೇಕಾಗುತ್ತದೆ. . ವೈವಾಹಿಕ ಜೀವನದಲ್ಲಿಯೂ ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ, ಯಾವುದೇ ರೀತಿಯ ವಿವಾದಗಳಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಿ. ಆರೋಗ್ಯ ಮತ್ತು ಹಣದ ಬಗ್ಗೆಯೂ ಕಾಳಜಿ ವಹಿಸಬೇಕು.


ಕರ್ಕ: ನಿಮ್ಮ ರಾಶಿಯ ಅಧಿಪತಿ ಚಂದ್ರ. ಚಂದ್ರನು ರಾಹು ಜೊತೆ ಬಲವಾದ ದ್ವೇಷವನ್ನು ಹೊಂದಿದ್ದಾನೆ. ಹಾಗಾಗಿಯೇ ಈ ಸಂದರ್ಭದಲ್ಲಿ ಕೆಲಸ ಕಾರ್ಯಗಳನ್ನು ಮಾಡುವಾಗ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಮಾಡಬೇಕು. ಜೂನ್‌ನಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ಮಾನಸಿಕ ಒತ್ತಡ ಮತ್ತು ನಕಾರಾತ್ಮಕ ಆಲೋಚನೆಗಳು  ಮನಸ್ಸಿಗೆ ಬರಬಹುದು. 


ಇದನ್ನೂ ಓದಿ : ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ ರೂಪುಗೊಂಡಿದೆ ಪಂಚ ಮಹಾಪುರುಷ ಯೋಗ, ಈ ಎರಡು ರಾಶಿಯವರ ಮೇಲೆ ಬೀರಲಿದೆ ಪ್ರಭಾವ


ರಾಹುವಿನ ಕೃಪೆ ಪಡೆಯಲು ಏನು ಮಾಡಬೇಕು ? : 
ರಾಹುವನ್ನು ಶಾಂತವಾಗಿರಲು, ಶನಿವಾರದಂದು ಉಪವಾಸ ಮಾಡಿ ಮತ್ತು ಕೆಲವು ನಿಯಮಗಳನ್ನು ಅನುಸರಿಸಿ. ರಾಹು ಶಿವಭಕ್ತರಿಗೆ ತೊಂದರೆ ಕೊಡುವುದಿಲ್ಲ. ಶಿವನಿಗೆ ಗಂಟೆ ಮತ್ತು ದಾತುರಾವನ್ನು ಅರ್ಪಿಸಿದರೆ ರಾಹು ಪ್ರಸನ್ನನಾಗುತ್ತಾನೆ. ಅಲ್ಲದೆ ಪ್ರತಿ ದಿನ  ಓಂ ರಾಮ್ ರಾಹವೇ ನಮಃ. ಎಂಬ ಮಾತ್ರವನ್ನು ಜಪಿಸಬೇಕು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.