Narsimha Jayanti 2022: ಜೀವನದಲ್ಲಿನ ದುಃಖ-ನೋವುಗಳಿಂದ ಮುಕ್ತಿ ಪಡೆಯಬೇಕೆ? ಈ ಕಥೆ ತಪ್ಪದೆ ಆಲಿಸಿ

Narsimha Jayanti Katha 2022: ಹಿಂದೂ ಧರ್ಮಶಾಸ್ತ್ರಗಳಲ್ಲಿ ಎಲ್ಲಾ ಪರ್ವಗಳಿವೆ ವಿಶೇಷ ಮಹತ್ವವಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ನರಸಿಂಹ ಜಯಂತಿ ಉತ್ಸವವನ್ನು ಆಚರಿಸಲಾಗುತ್ತದೆ. ಹಾಗಾದರೆ ಬನ್ನಿ ಯಾವ ದಿನಾಂಕದಂದು ಈ ತಿಥಿ ಬೀಳಲಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : May 12, 2022, 02:07 PM IST
  • ಜೀವನದಲ್ಲಿ ದುಃಖ-ನೋವುಗಳಿಂದ ಮುಕ್ತಿಪಡೆಯಬೇಕೇ?
  • ನರಸಿಂಹ ಜಯಂತಿಯ ದಿನ ಈ ಚಿಕ್ಕ ಕೆಲಸ ಮಾಡಿ
  • ಮೇ 14ರಂದು ಈ ಬಾರಿ ನರಸಿಂಹ ಜಯಂತಿ ಆಚರಿಸಲಾಗುತ್ತಿದೆ..
Narsimha Jayanti 2022: ಜೀವನದಲ್ಲಿನ ದುಃಖ-ನೋವುಗಳಿಂದ ಮುಕ್ತಿ ಪಡೆಯಬೇಕೆ? ಈ ಕಥೆ ತಪ್ಪದೆ ಆಲಿಸಿ title=
Narasimha Jayanti 2022

Narsimha Jayanti 2022: ಪರಮಾತ್ಮ ತನ್ನ ಭಕ್ತಾದಿಗಳಿಗೆ ಆನಂದವನ್ನು ನೀಡಲು ಅವತರಿಸುತ್ತಾನೋ, ಆಗ ಆ ತಿಥಿ ಹಾಗೂ ಮಾಸ ಪುಣ್ಯಕ್ಕೆ ಕಾರಣವಾಗುತ್ತದೆ. ಆ ದಿನ ಆ ಭಗವಂತನ ನಾಮಸ್ಮರಣೆಯನ್ನು ಮಾಡುವ ಭಕ್ತನಿಗೆ ಸನಾತನ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಇದೇ ರೀತಿ ಇಡೀ ಬ್ರಹ್ಮಾಂಡದ ಆತ್ಮ, ವಿಶ್ವರೂಪ ಮತ್ತು ಎಲ್ಲರ ಭಗವಂತ. ಶ್ರೀ ವಿಷ್ಣು, ಭಕ್ತ ಪ್ರಹ್ಲಾದನ ಇಚ್ಛೆಯನ್ನು ಈಡೇರಿಸಲು ನರಸಿಂಹ ರೂಪದಲ್ಲಿ ಕಾಣಿಸಿಕೊಂಡ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು ಶ್ರೀವಿಷ್ಣು, ನರಸಿಂಹನ ರೂಪದಲ್ಲಿ ಅವತರಿಸಿದ್ದ. ಈ ವರ್ಷ ಮೇ 14, 2022ರಂದು ಅಂದರೆ, ನರಸಿಂಹ ಜಯಂತಿ ಆಚರಿಸಲಾಗುತ್ತಿದ್ದು, ಅಂದು ಭಕ್ತಿ-ಭಾವದಿಂದ ನರಸಿಂಹನನ್ನು ಪೂಜಿಸುವವರ ದುಃಖ-ನೋವುಗಳು ಪರಿಹರಿಸುತ್ತವೆ ಎನ್ನಲಾಗುತ್ತದೆ.

ವಿಷ್ಣುವಿನ ನರಸಿಂಹ ಅವತಾರದ ಕಥೆ ಏನು?
ಶ್ರೀವಿಷ್ಣು ತನ್ನ ಭಕ್ತನಾದ ಪ್ರಲ್ಹಾದನ ರಕ್ಷಣೆಗಾಗಿ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯ ತಿಥಿಯಂದು ನರಸಿಂಹನ ರೂಪದಲ್ಲಿ ಪ್ರತ್ಯಕ್ಷನಾಗಿದ್ದ. ಈ ಅವತಾರದಲ್ಲಿ ವಿಷ್ಣುವಿನ ಅರ್ಧ ಶರೀರ ಸಿಂಹದ ಶರೀರವಾಗಿದ್ದರೆ, ಅರ್ಧ ಶರೀರ ಮನುಷ್ಯನ ಶರೀರವಾಗಿರುತ್ತದೆ. ಇದೇ ಕಾರಣದಿಂದ ಈ ಅವತಾರವನ್ನು ನರ-ಸಿಂಹ ಅವತಾರ ಎಂದು ಕರೆಯಲಾಗುತ್ತದೆ. ವಿಷ್ಣು, ನರಸಿಂಹನ ಅವತಾರ ಧಾರಣೆ ಮಾಡಿದ ಸಮಯ ದಿನದ ಸಮಯವೂ ಆಗಿರಲಿಲ್ಲ ಮತ್ತು ರಾತ್ರಿಯ ಸಮಯವೂ ಆಗಿರಲಿಲ್ಲ. ಅಂದರೆ, ಸಂಧ್ಯಾಕಾಲದಲ್ಲಿ ಶ್ರೀವಿಷ್ಣು, ನರಸಿಂಹನ ಅವತಾರದಲ್ಲಿ ಹಿರಣ್ಯಕಶಿಪು ಹೆಸರಿನ ದೈತ್ಯನನ್ನು ಸಂಹರಿಸಿ, ತನ್ನ ಭಕ್ತ ಪ್ರಲ್ಹಾದನನ್ನು ರಕ್ಷಿಸಿ ಆತನನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡಿದ್ದ. 

ಮುಲ್ತಾನ್ ನಲ್ಲಿ ಶ್ರೀವಿಷ್ಣು, ನರಸಿಂಹನಾಗಿ ಅವತರಿಸಿದ್ದ
ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಮಲಗಿಸಿ ಆತನ ಎದೆ ಸಿಳಿ ಪ್ರಲ್ಹಾದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿ ಕೊಂಡಾಗ, ನಾನು ನಿನಗೆ ಇಷ್ಟೊಂದು ಪ್ರಿಯ ಹೇಗಾದೆ ಎಂದು ಪ್ರಲ್ಹಾದ ಭಗವಂತನನ್ನು ಪ್ರಶ್ನಿಸುತ್ತಾನೆ. ಪ್ರಲ್ಹಾದನ ಪ್ರಶ್ನೆಗೆ ಉತ್ತರಿಸಿದ ನರಸಿಂಹ, ಕಳೆದ ಜನ್ಮದಲ್ಲಿ ನೀನೋರ್ವ ಬ್ರಾಹ್ಮಣ ಪುತ್ರನಾಗಿದ್ದೆ ಮತ್ತು ವಾಸುದೇವ ನಿನ್ನ ಹೆಸರಾಗಿತ್ತು. ಆದರೂ ಕೂಡ ನೀನು ವೇದಗಳ ಅಧ್ಯಯನ ಮಾಡಿರಲಿಲ್ಲ. ಹೀಗಾಗಿ ಎಲ್ಲಿಯೂ ಕೂಡ ನೀನು ಪುಣ್ಯ ಪ್ರಾಪ್ತಿಯನ್ನು ಮಾಡಿರಲಿಲ್ಲ. ಆದರೆ, ನೀನು ನನ್ನ ವೃತವನ್ನು ಆಚರಿಸಿದ್ದೆ. ಹಲವು ದೇವತೆಗಳು, ಋಷಿಮುನಿಗಳು ಹಾಗೂ ಬುದ್ಧಿವಂತ ರಾಜರು ಈ ವ್ರತವನ್ನು ಪಾಲಿಸಿದ್ದರು. ಅದರ ಪ್ರಭಾವದಿಂದ ಅವರಿಗೆ ಸಕಲ ಸಿದ್ಧಿಗಳು ಪ್ರಾಪ್ತಿಯಾಗಿದ್ದವು ಎಂದು ಹೇಳುತ್ತಾರೆ. ನಂತರ ಪ್ರಲ್ಹಾದನ ಆಗ್ರಹದ ಮೇರೆಗೆ ಶ್ರೀವಿಷ್ಣು ಈ ವೃತದ ಆಚರಣೆಯ ಹಿಂದಿನ ಕಾರಣವನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಶ್ರೀವ್ಹಿಷ್ಣು, ನರಸಿಂಹನಾಗಿ ಅವತರಿಸಿದ್ದ ಸ್ಥಳ ಪ್ರಸ್ತುತ ಪಾಕಿಸ್ತಾನದ ಮುಲ್ತಾನ್ ಆಗಿದೆ.

ಹಿರಣ್ಯಕಶಿಪುವಿಗೆ ದೊರೆತ ವರದಾನದ ಹಿನ್ನೆಲೆ ನರಸಿಂಹನಾಗಿ ಅವತರಿಸಿದ್ದ ಶ್ರೀವಿಷ್ಣು
ನರಸಿಂಹ ದೇವರು ಹೇಳಿದ ಕಥೆಯ ಪ್ರಕಾರ, ಪೌರಾಣಿಕ ಕಾಲದಲ್ಲಿ ಮುಲ್ತಾನ್‌ನಲ್ಲಿ ಹರಿತ್ ಎಂಬ ಬ್ರಾಹ್ಮಣ ವಾಸಿಸುತ್ತಿದ್ದ. ಆತ ಧಾರ್ಮಿಕ ಕಾರ್ಯಗಳಲ್ಲಿ ನಿರತನಾದ ಓರ್ವ ವೇದಾಭ್ಯಾಸಿಯಾಗಿದ್ದ. ಆತನ ಪತ್ನಿ ಲೀಲಾವತಿ ಕೂಡ ತನ್ನ ಪತಿಯನ್ನು ಅನುಸರಿಸುತ್ತಿದ್ದಳು. ಈ ದಂಪತಿ ಜೋಡಿ 21 ಯುಗಗಳ  ಕಠೋರ ತಪಸ್ಸು ಮಾಡಿದ ಬಳಿಕ ಭಗವಂತ ಪ್ರತ್ಯಕ್ಷನಾಗಿ ಅವರಿಬ್ಬರಿಗೂ ನೇರ ದರ್ಶನ ನೀಡುತ್ತಾನೆ. ಆ ಸಂದರ್ಭದಲ್ಲಿ ಇಬ್ಬರೂ ಪ್ರಭು! ನೀನು ನಮಗೆ ವರವನ್ನು ನೀಡಬೇಕೆಂದರೆ, ನಮಗೆ ನಿನ್ನಂತಹ ಪುತ್ರನನ್ನು ದಯಪಾಲಿಸು ಎಂದು ಕೇಳಿಕೊಳ್ಳುತ್ತಾರೆ. ಅವರ ಮಾತುಗಳನ್ನು ಕೇಳಿದ ಭಗವಂತ, ನಿಸ್ಸಂದೇಹವಾಗಿ ನಾನು ನಿಮ್ಮಿಬ್ಬರ ಪುತ್ರನಾಗಿದ್ದೇನೆ ಬ್ರಾಹ್ಮಣವರ್ಯ, ಆದರೆ, ನಾನು ಇಡೀ ಜಗತ್ತನ್ನು ಸೃಷ್ಟಿಸಿದ ಪರಮಾತ್ಮ, ಹೀಗಾಗಿ ನಾನು ಶಾಶ್ವತವಾಗಿ ವಾಸಿಸುವ ಶಾಶ್ವತ ವ್ಯಕ್ತಿ, ಆದ್ದರಿಂದ ನಾನು ಗರ್ಭದಲ್ಲಿ ನೆಲೆಸುವುದಿಲ್ಲ ಎಂದು ಹೇಳುತ್ತಾನೆ. ಹಿರಣ್ಯಕಶಿಪು ಎಂಬ ರಾಕ್ಷಸನ ದೌರ್ಜನ್ಯಕ್ಕೆ ಜನ ಬೇಸತ್ತು ಹೋಗಿದ್ದರು, ನಿಮಗೂ ಕೂಡ ಆತ ಸಾಕಷ್ಟು ಕಾಟ ನೀಡಿದ್ದ  ಕಾರಣ ನಾನು ಈ ರೂಪದಲ್ಲಿ ಬಂದು ಅವನನ್ನು ಸಂಹರಿಸಬೇಕಾಯಿತು ಎಂದು ಭಗವಂತ ಹೇಳುತ್ತಾನೆ. ಹಿರಣ್ಯಕಶಿಪು ಹಗಲಿನಲ್ಲಾಗಲಿ ಅಥವಾ ರಾತ್ರಿಯಲ್ಲಾಗಲಿ ನಾನು ಮರಣ ಹೊಂದಬಾರರು ಮತ್ತು ಮನುಷ್ಯನಾಗಲೀ ಅಥವಾ ಪ್ರಾಣಿಯಿಂದಾಗಲಿ ನನ್ನ ಮರಣ ಸಂಭವಿಸಬಾರದು ಎಂಬ ವರವನ್ನು ಪಡೆದಿರುತ್ತಾನೆ.

ಇದನ್ನೂ ಓದಿ-Shani Grah Upay: ಶನಿಯ ಕೋಪದಿಂದ ಮುಕ್ತಿ ಪಡೆಯಲು ಸರಳ ವಿಧಾನ

ನಕಾರಾತ್ಮಕ ಶಕ್ತಿಯನ್ನು ತೊಲಗಿಸುತ್ತಾನೆ ನರಸಿಂಹ
ಜೋತಿಷ್ಯಶಾಸ್ತ್ರದ ಪ್ರಕಾರ ಮಕ್ಕಳು ಹೆದರುವ ಭೂಮಿಯ ಮೇಲಿನ ನಕಾರಾತ್ಮಕ ಶಕ್ತಿಗಳನ್ನು ನರಸಿಂಹ ತೊಲಗಿಸುತ್ತಾನೆ. ಹೀಗಾಗಿ ನರಸಿಂಹನನ್ನು ಭಕ್ತಿ ಭಾವದಿಂದ ಪೂಜಿಸಬೇಕು. ನರಸಿಂಹ ನಕಾರಾತ್ಮಕ ಶಕ್ತಿ ತೊಲಗಿಸುವ ಮತ್ತು ರಕ್ಷಣೆ ಒದಗಿಸುವ ದೇವನಾಗಿದ್ದಾನೆ. ಸಾಮಾನ್ಯವಾಗಿ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಒಂದು ವೇಳೆ ಯಾರೊಬ್ಬರ ಮನೆ ದಕ್ಷಿಣಾಭಿಮುಖವಾಗಿದ್ದಲ್ಲಿ, ಮನೆಯಲ್ಲಿ ದಕ್ಷಿಣ ದಿಕ್ಕಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು ಪ್ರಭಾವಹೀನಗೊಳಿಸಲು ಮನೆಯಲ್ಲಿ ನರಸಿಂಹನ ಚಿತ್ರ ಬಳಸಿ. ಆದರೆ, ಚಿತ್ರ ಮನೆಯ ಹೊರಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಚಿತ್ರದಲ್ಲಿನ ಭಗವಂತ ಮನೆಯ ದಕ್ಷಿಣಾಭಿಮುಖ ದ್ವಾರವನ್ನು ನೋಡುತ್ತಿರುವಂತಿರಬೇಕು. ಇದರಿಂದ, ಕೆಟ್ಟ ಶಕ್ತಿ ಹಾಗೂ ಭಯ ಮನೆಯನ್ನು ಪ್ರವೇಶಿಸುವುದೇ ಇಲ್ಲ.

ಇದನ್ನೂ ಓದಿ-ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ ರೂಪುಗೊಂಡಿದೆ ಪಂಚ ಮಹಾಪುರುಷ ಯೋಗ, ಈ ಎರಡು ರಾಶಿಯವರ ಮೇಲೆ ಬೀರಲಿದೆ ಪ್ರಭಾವ

(Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News