Rahu Nakshatra Parivartan 2023: ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳು ತಮ್ಮ ರಾಶಿ ಹಾಗೂ ನಕ್ಷತ್ರಗಳನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ನಕ್ಷತ್ರ ಹಾಗೂ ರಾಶಿ ಬದಲಾವಣೆ ಮಾನವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ರಾಶಿಗಳ ಪಾಲಿಗೆ ಈ ಗೋಚರಗಳು ಶುಭ ಸಾಬೀತಾದರೆ, ಕೆಲ ರಾಶಿಗಳ ಜನರ ಪಾಲಿಗೆ ಈ ಗೋಚರಗಳು ಅಶುಭ ಸಾಬೀತಾಗುತ್ತವೆ. ಫೆಬ್ರುವರಿ 9 ರಂದು ರಾಹು ತಾನು ಸ್ನೇಹ ಭಾವದ ಸಂಬಂಧ ಹೊಂದಿರುವ ಅಶ್ವಿನಿ ನಕ್ಷತ್ರದಲ್ಲಿ ಪ್ರವೇಶಿಸಲಿದೆ. ಅಶ್ವಿನಿ ನಕ್ಷತ್ರದ ಮೇಲೆ ಕೇತು ಗ್ರಹದ ಅಧಿಪತ್ಯ ಇದೆ. ಹೀಗಾಗಿ ಈ ಸ್ಥಿತಿಯನ್ನು ಅತ್ಯುತ್ತಮ ಎಂದು ಭಾವಿಸಲಾಗುತ್ತಿದೆ. ಇನ್ನೊಂದೆಡೆ ರಾಹು ಗ್ರಹದ ಮೇಲೆ ಶನಿ ದೇವನ ಮೂರನೇ ದೃಷ್ಟಿ ಇದೆ. ಹೀಗಾಗಿ ಇದರ ಪ್ರಭಾವ ಎಲ್ಲಾ ರಾಶಿಗಳ ಜನರ ಮೇಲೆ ಬೀಳಲಿದೆ. ಆದರೆ, 3 ರಾಶಿಗಳ ಜನರಿಗೆ ಈ ಅವಧಿಯಲ್ಲಿ ಭಾರಿ ಧನಲಾಭದ ಜೊತೆಗೆ ವೃತ್ತಿ ಜೀವನದಲ್ಲಿ ಬಡ್ತಿ ಸಿಗುವ ಭಾಗ್ಯವಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಮಿಥುನ ರಾಶಿ
ರಾಹುವಿನ ನಕ್ಷತ್ರ ಬದಲಾವಣೆಯು ನಿಮ್ಮ ಪಾಲಿಗೆ ಅತ್ಯಂತ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ರಾಹುವಿನ ಈ ಸಂಚಾರವು ನಿಮ್ಮ ಜಾತಕದ ಆದಾಯದ ಸ್ಥಾನದಲ್ಲಿ ಇರಲಿದೆ. ಹೀಗಾಗಿ ನಿಮ್ಮ ಆದಾಯವು ಹೆಚ್ಚಾಗಬಹುದು. ಈ ಅವಧಿಯಲ್ಲಿ, ನೀವು ಹಲವು ಮೂಲಗಳಿಂದ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ಇದರೊಂದಿಗೆ ರಾಜಕೀಯಕ್ಕೆ ಸಂಬಂಧಿಸಿದವರಿಗೆ ಒಂದಷ್ಟು ಸ್ಥಾನಮಾನ ಸಿಗಬಹುದು. ರಾಹು ಗ್ರಹದ ದೃಷ್ಟಿ ನಿಮ್ಮ ಮೇಲಿರಲಿದೆ. ಸರ್ಕಾರಿ ಗುತ್ತಿಗೆಗಳಲ್ಲಿ ಅಥವಾ ಆಡಳಿತಾತ್ಮಕ ವಲಯದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಒಂದು ವೇಳೆ ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ ಲಾಭ ನಿಮ್ಮದಾಗಲಿದೆ. ಒಡಹುಟ್ಟಿದವರೊಂದಿಗಿನ ನಿಮ್ಮ ಹೊಂದಾಣಿಕೆಯು ಈ ಅವಧಿಯಲ್ಲಿ ಉತ್ತಮವಾಗಿರುತ್ತದೆ.


ಕರ್ಕ ರಾಶಿ
ರಾಹುವಿನ ನಕ್ಷತ್ರ ಬದಲಾವಣೆಯು ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ರಾಹು ಗ್ರಹದ ಈ ಸಂಕ್ರಮಣ ನಿಮ್ಮ ಸಂಕ್ರಮಣದ ಜಾತಕದ ದಶಮ ಭಾವದಲ್ಲಿ ನಡೆಯಲಿದೆ. ಆದ್ದರಿಂದ, ಈ ಅವಧಿಯಲ್ಲಿ ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಇದರೊಂದಿಗೆ ದೊಡ್ಡ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ನೆರವೇರಲಿದೆ. ತಂದೆಯೊಂದಿಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. ಈ ಗೋಚರದಿಂದ ಉದ್ಯಮಿಗಳು ಲಾಭ ಪಡೆಯಬಹುದು. ಆಕಸ್ಮಿಕ ಲಾಭ ಉಂಟಾಗಬಹುದು. ಇದರೊಂದಿಗೆ, ಉದ್ಯೋಗಿಗಳಿಗೆ ಬಡ್ತಿ ಮತ್ತು ಇನ್ಕ್ರೀಮೆಂಟ್ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮತ್ತೊಂದೆಡೆ, ಆಸ್ತಿಯ ವ್ಯವಹಾರದಿಂದ ನಿಮಗೆ ಲಾಭವಾಗಬಹುದು.


ಇದನ್ನೂ ಓದಿ-Holi 2023: ಹೋಳಿ ಹಬ್ಬದ ಬಳಿಕ ಈ ಮೂರು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ, ಕಾರಣ ಇಲ್ಲಿದೆ


ಕನ್ಯಾ ರಾಶಿ
ರಾಹುವಿನ ಅಶ್ವಿನಿ ನಕ್ಷತ್ರ ಪ್ರವೇಶ ನಿಮಗೂ ಕೂಡ ಲಾಭ ನೀಡಲಿದೆ. ಏಕೆಂದರೆ ರಾಹು ಗ್ರಹ ನಿಮ್ಮ ಜಾತಕದ ಷಷ್ಠಮ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಭೂಮಿ ಮತ್ತು ಮನೆಯ ಲಾಭವನ್ನು ಪಡೆಯಬಹುದು. ಇನ್ನೊಂದೆಡೆ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಪಿತ್ರಾರ್ಜಿತ  ಆಸ್ತಿಯ ಲಾಭ ದೊರೆಯಲಿದೆ. ಅಲ್ಲದೆ ವಿದೇಶಕ್ಕೆ ಹೋಗಬಯಸುವವರ ಇಷ್ಟಾರ್ಥಗಳು ಈಡೇರಲಿವೆ. ಮತ್ತೊಂದೆಡೆ, ವ್ಯಾಪಾರ ಅಥವಾ ಯಾವುದೇ ಉದ್ದೇಶಕ್ಕಾಗಿ ಸಾಲವನ್ನು ತೆಗೆದುಕೊಳ್ಳಲು ಬಯಸುವವರು ಅದನ್ನು ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಪಡೆಯಬಹುದು.


ಇದನ್ನೂ ಓದಿ-ನವಾಂಶ ಜಾತಕದ ಉಚ್ಛ ಭಾವದಲ್ಲಿ ಶನಿಯ ಸಂಚಾರ, 4 ರಾಶಿಗಳ ಜಾತಕದವರಿಗೆ ಭಾರಿ ಧನಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.