ನವದೆಹಲಿ: Ram Navami 2021 - ಚೈತ್ರ ಮಾಸ, ಕೃಷ್ಣ ಪಕ್ಷ ನವಮಿ ತಿಥಿಯಂದು ಸರಯೂ ತೀರದಲ್ಲಿರುವ ಅಯೋಧ್ಯಾಪುರಿಪುರಿಯಲ್ಲಿ ದಶರಥರಾಜನ ಮನೆಯಲ್ಲಿ ಶ್ರೀರಾಮಚಂದ್ರ ಜನಿಸಿದ್ದ. ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ಶ್ರೀ ರಾಮನ ಸಹೋದರರಾಗಿದ್ದರು. ಹೀಗಾಗಿ ಪ್ರತಿ ವರ್ಷ ಚೈತ್ರ ಮಾಸದ ಕೃಷ್ಣಪಕ್ಷದ ನವಮಿ ತಿಥಿಯಂದು ಶ್ರೀ ರಾಮ ನವಮಿ ಉತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 21, 2021ರಂದು ಶ್ರೀರಾಮನವಮಿ ಉತ್ಸವವನ್ನು ಆಚರಿಸಲಾಗುತ್ತಿದೆ. ಕೌಶಲ್ಯಾ ದೇವಿಯ ಗರ್ಭದಿಂದ ಶ್ರೀರಾಮಚಂದ್ರ ಜನಿಸಿದ ದಿನ ಎಲ್ಲೆಡೆ ಸಡಗರ ಸಂಭ್ರಮದ ವಾತಾವರಣವಿತ್ತು. ಹಾಗಾದರೆ ಬನ್ನಿ ಶ್ರೀ ರಾಮ ಜನ್ಮೊತ್ಸವದ ಕೆಲ ವಿಶೇಷ ಸಂಗತಿಗಳನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

Importance Of Ram Navami 2021
>> ಧಾರ್ಮಿಕ ಪುರಾಣಗಳ ಪ್ರಕಾರ ದಶರಥ ರಾಜ ಪುತ್ರಕಾಮೇಷ್ಟಿ ಯಜ್ಞ ನೆರವೇರಿಸಿದ್ದರು. ಅದಾದ ಬಳಿಕ ಅವರಿಗೆ ನಾಲ್ವರು ಪುತ್ರ ರತ್ನರು ಜನಿಸಿದರೆ. ಇವರಲ್ಲಿ ಶ್ರೀರಾಮಚಂದ್ರ ಅತ್ಯಂತ ಹಿರಿಯ ಮಗನಾಗಿದ್ದ.


>> ಶ್ರೀ ರಾಮನ ಜನ್ಮ ಚೈತ್ರ ಶುಕ್ಲಪಕ್ಷದ ನವಮಿ ತಿಥಿಯಂದು ಪುನರ್ವಸು ನಕ್ಷತ್ರ ಕರ್ಕ ಲಗ್ನದಲ್ಲಿ ಅಪರಾಹ್ನದ ಸಮಯದಲ್ಲಾಗಿತ್ತು. ಆ ಸಂದರ್ಭದಲ್ಲಿ ಐದು ಗ್ರಹಗಳು ತನ್ನ ಉಚ್ಛ ಸ್ಥಾನದಲ್ಲಿದ್ದ ಕಾರಣ ಅದನ್ನು ಅಭಿಜೀತ ಮುಹೂರ್ತ ನಿರ್ಮಾಣಗೊಂಡಿತ್ತು. 


>> ಶ್ರೀರಾಮಚಂದ್ರನ ಜನನದ ಸಂದರ್ಭದಲ್ಲಿ ಮಂದ, ಶೀತಲ ಹಾಗೂ ಸುಗಂಧದಿಂದ ಕೂಡಿದ ಗಾಳಿ ಬೀಸುತ್ತಿತ್ತು. ದೇವತೆಗಳು ಹಾಗು ಸಂತರು ಸಂತಸ ವ್ಯಕ್ತಪಡಿಸುತ್ತಿದ್ದರು. ಎಲ್ಲ ಪವಿತ್ರ ನದಿಗಳಲ್ಲಿ ಅಮೃತದ ಧಾರೆ ಹರಿತುತ್ತಿತ್ತು.


>> ಶ್ರೀರಾಮಚಂದ್ರನ ಜನನದ ಬಳಿಕ ಬ್ರಹ್ಮದೇವ ಸೇರಿದಂತೆ ಎಲ್ಲಾ ದೇವತೆಗಳು ಅಯೋಧ್ಯಾಪುರಿಗೆ ತಲುಪಿದ್ದರು. ಆಗಸದಲ್ಲಿ ಎಲ್ಲಿ ನೋಡಿದಲ್ಲೆಲ್ಲ ದೇವತೆಗಳ ಸಮೂಹವೆ ಕಂಡು ಬರುತ್ತಿತ್ತು. 


>> ಸಂಪೂರ್ಣ ಅಯೋಧ್ಯಾ ನಗರಿಯಲ್ಲಿ ಉತ್ಸವದ ವಾತಾವರಣ ಮನೆ ಮಾಡಿತ್ತು. ದಶರಥ ರಾಜ ಕೂಡ ತುಂಬಾ ಖುಷಿಯಾಗಿದ್ದರು ಮತ್ತು ಅವರ ಎಲ್ಲ ರಾಣಿಯರು ಕೂಡ ಖುಷಿಯಾಗಿದ್ದರು. ಈ ಸಂದರ್ಭದಲ್ಲಿ ದಶರಥ ರಾಜ ಬ್ರಾಹ್ಮಣರಿಗೆ ಚಿನ್ನ, ಗೋವು, ವಸ್ತ್ರ ಹಾಗೂ ಮಣಿಗಳನ್ನು ದಾನವಾಗಿ ನೀಡಿದ್ದರು.


>> ಶೋಭೆಯ ಮೂಲ ಎಂದೇ ಕರೆಯಲಾಗುವ ಶ್ರೀ ರಘುಕುಲ ತಿಲಕನ ಜನ್ಮದ ಬಳಿಕ ಅಯೋಧ್ಯಾನಗರಿಯ ಮನೆ-ಮನೆಯಲ್ಲಿ ಮಂಗಳವಾದ್ಯಗಳು ಮೊಳಗಲಾರಂಭಿಸಿದ್ದವು. ನಗರದ ನಿವಾಸಿಗಳು ನೋಡಿದಲ್ಲೆಲ್ಲ ಹಾಡಿ-ಕುಣಿದು ಸಂತಸ ವ್ಯಕ್ತಪಡಿಸುತ್ತಿದ್ದರು. ಈ ರೀತಿ ಸಂಪೂರ್ಣ ನಗರದ ನಿವಾಸಿಗಳು ಶ್ರೀ ರಾಮನ ಜನ್ಮದಿನವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.


ಈ ದಿನ ಮನೆಯಲ್ಲಿ ಹವನ ನಡೆಸುವುದು ಶುಭಕರ (Puja Vidhi)
ಶ್ರೀರಾಮನವಮಿಯ ದಿನ ಶ್ರೀರಾಮಚಂದ್ರನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಈ ದಿನ ನವರಾತ್ರಿಯ ಅಂತಿಮ ದಿನ ಕೂಡ ಹೌದು. ಹೀಗಾಗಿ ನವರಾತ್ರಿಯ ಅಂತಿಮ ದಿನ ಕನ್ಯಾ ಪೂಜೆ ಹಾಗೂ ಹವನದ ವಿಶೇಷ ಮಹತ್ವವಿದೆ. ಹಾಗಾದರೆ ಬನ್ನಿ ಶ್ರೀರಾಮ ನವಮಿ ಹವನ ಪೂಜೆಯ ವಿಧಿ ಹಾಗೂ ಶುಭ ಮುಹೂರ್ತದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,


ಶ್ರೀರಾಮ ನವಮಿಯ ಶುಭ ಮುಹೂರ್ತ (Shubh Muhurat)
- ನವಮಿ ತಿಥಿಯ ಆರಂಭ : ಏಪ್ರಿಲ್ 21, 2021ರಂದು ಬೆಳಗಿನ ಜಾವ 00.43 ಗಂಟೆಗೆ.
- ನವಮಿ ತಿಥಿಯ ಸಮಾಪ್ತಿ: ಏಪ್ರಿಲ್ 22, 2021ರಂದು ಬೆಳಗಿನ ಜಾವ 00.35ಕ್ಕೆ .
- ಪೂಜೆಯ ಶುಭ ಮೂಹೂರ್ತ: ಬೆಳಗ್ಗೆ 11:02 ರಿಂದ ಅಪರಾಹ್ನ 01:38ರವರೆಗೆ.
- ಶುಭ ಮೂಹೂರ್ತದ ಒಟ್ಟು ಅವಧಿ: 2 ಗಂಟೆ 36 ನಿಮಿಷ
- ರಾಮ ನವಮಿಯ ಅಪರಾಹ್ನ ಸಮಯ: 12 ಗಂಟೆ 20 ನಿಮಿಷ.


ಇದನ್ನೂ ಓದಿ- Vinayaki Devi Temple: ಶ್ರೀಗಣೇಶನ ಸ್ತ್ರೀ ಅವತಾರ 'ವಿನಾಯಕಿ' ಬಗ್ಗೆ ನಿಮಗೆಷ್ಟು ತಿಳಿದಿದೆ?


ಹವನ ಸಾಮಗ್ರಿ (Havan Materials List)
ಮಾವಿನ ಗಿಡದ ಕಟ್ಟಿಗೆ
ಮಾವಿನ ಎಲೆಗಳು 
ಅಶ್ವತ್ಥ ಮರದ ಕಾಂಡ
ತೊಗಟೆ
ಬೆಲಪತ್ರಿ
ಔದುಂಬರ ತೊಗಟೆ
ಶ್ರೀಗಂಧದ ಕಟ್ಟಿಗೆ 
ಅಶ್ವಗಂಧ
ಜೇಷ್ಠಮದದ ಕಾಂಡ
ಕರ್ಪೂರ 
ಎಳ್ಳು
ಅಕ್ಕಿ
ಲವಂಗ
ಹಸುವಿನ ತುಪ್ಪ
ಏಲಕ್ಕಿ
ಸಕ್ಕರೆ 
ನವಗ್ರಹಗಳ ಕಟ್ಟಿಗೆ
ಪಂಚಖಾದ್ಯ
ಜುಟ್ಟು ಹೊಂದಿರುವ ತೆಂಗಿನ ಕಾಯಿ
ಜೋಳ


ಇದನ್ನೂ ಓದಿ- Unique Shiva Temple:ಇಲ್ಲಿ ನಡೆಯುತ್ತದೆ ಮಹಾದೇವನ ತುಂಡಾದ ತ್ರಿಶೂಲ ಪೂಜೆ, ದೇವಸ್ಥಾನದ ಇತರೆ ನಿಗೂಢ ರಹಸ್ಯಗಳ ಮಾಹಿತಿ ಇಲ್ಲಿದೆ


ರಾಮನವಮಿ ಹವನ ವಿಧಿ (Havan Vidhi)
- ರಾಮನವಮಿಯ ದಿನ ಪ್ರಾತಃಕಾಲದಲ್ಲಿ ಬೇಗನೆ ಏಳಬೇಕು.
- ಸ್ನಾನ ಇತ್ಯಾದಿ ಪ್ರಾತಃಕಾಲದ ಕರ್ಮಗಳನ್ನು ಪೂರ್ಣಗೊಳಿಸಿ ಶುಭ್ರ ವಸ್ತ್ರ ಧರಿಸಬೇಕು.
- ಶಾಸ್ತ್ರಗಳ ಪ್ರಕಾರ ಹವನ ನೆರವರಿಸುವ ಸಮಯದಲ್ಲಿ ಪತಿ-ಪತ್ನಿಯರು ಒಟ್ಟಿಗೆ ಕುಳಿತುಕೊಳ್ಳಬೇಕು.
- ಪವಿತ್ರ ಹಾಗೂ ಸ್ವಚ್ಚವಾದ ಸ್ಥಾನದಲ್ಲಿ ಹವನ ಕುಂಡ ನಿರ್ಮಿಸಬೇಕು.
- ಬಳಿಕ ಹವನ ಕುಂಡದಲ್ಲಿ ಮಾವಿನ ಗಿಡದ ಕಾಷ್ಠ (ಕಟ್ಟಿಗೆ) ಹಾಗೂ ಕರ್ಪೂರದ ಸಹಾಯದಿಂದ ಅಗ್ನಿ ಪ್ರಜ್ವಲಿಸಬೇಕು.
- ಬಳಿಕ ಅಗ್ನಿಕುಂಡದಲ್ಲಿ ಎಲ್ಲ ದೇವಿ-ದೇವತೆಗಳ ಹೆಸರಿನಲ್ಲಿ ಆಹುತಿ ನೀಡಬೇಕು.
- ಧಾರ್ಮಿಕ ನಂಬಿಕೆಗಳ ಅನುಸಾರ ಕನಿಷ್ಠ ಪಕ್ಷ 108 ಬಾರಿಗೆ ಆಹುತಿಯನ್ನು ನೀಡಬೇಕು. ಈ ದಿನ ಕನ್ಯಾಪೂಜೆಗೂ ಕೂಡ ವಿಶೇಷ ಮಹತ್ವವಿರುತ್ತದೆ. ಹೀಗಾಗಿ ಹವನ ನೆರವೇರಿಸಿದ ಬಳಿಕ ನೀವು ಕನ್ಯಾ ಪೂಜೆ ಕೂಡ ನೆರವೇರಿಸಬಹುದು.


ಇದನ್ನೂ ಓದಿ- Two Days Amavasya This Month: ಈ ತಿಂಗಳು ಎರಡು ದಿನ ಅಮಾವಾಸ್ಯೆ,, ನಿಮ್ಮನ್ನಗಲಿದವರಿಗಾಗಿ ಈ ಕೆಲಸ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.