Ram Navami 2021: ರಾಮ ನವಮಿಯ ಪೂಜಾ ವಿಧಿ ವಿಧಾನಗಳನ್ನು ತಿಳಿಯಿರಿ
ಹಿಂದೂ ಪಂಚಾಂಗದ ಪ್ರಕಾರ, ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನಾಂಕದಂದು ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ.
ನವದೆಹಲಿ : ಹಿಂದೂ ಪಂಚಾಂಗದ ಪ್ರಕಾರ, ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನಾಂಕದಂದು ರಾಮನವಮಿ (Ramanavami) ಹಬ್ಬವನ್ನು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ಪುನರ್ವಸು ನಕ್ಷತ್ರ ಮತ್ತು ಕರ್ಕ ಲಘ್ನದಲ್ಲಿ, ಶ್ರೀ ರಾಮನ ಜನನವಾಯಿತು ಎನ್ನುತ್ತದೆ ಪುರಾಣ. ವಿಷ್ಣುವಿನ (Lord Vishnu) ಏಳನೇ ಅವತಾರವಾಗಿ ಶ್ರೀ ರಾಮ ಅಯೋಧ್ಯೆಯ ರಾಜ ದಶರಥನ ಪುತ್ರನಾಗಿ ಜನ್ಮ ತಾಳುತ್ತಾರೆ. ಈ ವರ್ಷ, ಏಪ್ರಿಲ್ 21 ಬುಧವಾರದಂದು ರಾಮನವಮಿ ಹಬ್ಬ. ರಾಮನವಮಿ ಹಬ್ಬವನ್ನು ದೇಶಾದ್ಯಂತವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ರಾಮನವಮಿ ದಿನಾಂಕ ಮತ್ತು ಶುಭ ಸಮಯ :
ರಾಮ ನವಮಿ (Ramanavami) ದಿನಾಂಕ - 21 ಏಪ್ರಿಲ್ 2021, ಬುಧವಾರ
ನವಮಿ ಪ್ರಾರಂಭ - 21 ಏಪ್ರಿಲ್ 2021 ಮಧ್ಯಾಹ್ನ 12:43 ಕ್ಕೆ
ನವಮಿ ಕೊನೆಗೊಳ್ಳುವುದು - 22 ಏಪ್ರಿಲ್ 2021 ಮಧ್ಯಾಹ್ನ 12:35 ಕ್ಕೆ
ರಾಮನವಮಿ ಪೂಜೆಯ ಶುಭ ಸಮಯ- 21 ಏಪ್ರಿಲ್ ನಿಂದ ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 1:38 ರವರೆಗೆ
ಇದನ್ನೂ ಓದಿ : Thursday Fast: ಗುರುವಾರದ ವ್ರತದ ಸಮಯದಲ್ಲಿ ಈ ನಿಯಮಗಳನ್ನು ನೆನಪಿನಲ್ಲಿಡಿ
ರಾಮನವಮಿ ಪೂಜೆ ವಿಧಾನ :
ನವಮಿ ತಿಥಿ ದಿನದಂದು, ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಿ ಶ್ರೀ ರಾಮನ (Lord Rama) ಪ್ರತಿಮೆ ಅಥವಾ ಚಿತ್ರವನ್ನು ಪೂಜಾ ಸ್ಥಳದಲ್ಲಿ ಇರಿಸಿ. ನಂತರ ರಾಮನವಮಿ ಪೂಜೆಯ ಸಂಕಲ್ಪ ಮಾಡಿ. ಸಂಕಲ್ಪದ ನಂತರ, ಅಕ್ಷತೆ, ಶ್ರೀಗಂಧ, ಧೂಪದ್ರವ್ಯ ಗಳಿಂದ ಪೂಜೆ ಆರಂಭಿಸಿ. ಪೂಜೆಯ ವೇಳೆ ತುಳಸಿ ಎಲೆ (Tulsi )ಮತ್ತು ಕಮಲದ ಹೂವನ್ನು (Lotus) ಅರ್ಪಿಸಿ. ಹಣ್ಣುಗಳು (Fruits) ಮತ್ತು ಸಿಹಿತಿಂಡಿಗಳನ್ನು ಕೂಡಾ ಪೂಜೆಗೆ ಇಡಿ. ಆರತಿ ನಂತರ ಪೂಜೆಯ ಪ್ರಸಾದವನ್ನು ವಿತರಿಸಿ. ಈ ದಿನ ರಾಮಾಯಣ ಮತ್ತು ರಾಮ ರಕ್ಷಾ ಸ್ತೋತ್ರಗಳನ್ನು ಓದುವುದು ಉತ್ತಮ ಫಲವನ್ನು ನೀಡುತ್ತದೆಯಂತೆ.
ಇದನ್ನೂ ಓದಿ : Dream and Death: ಕನಸಲ್ಲಿ ಸಾವು ಕಂಡರೆ ಶುಭವೇ ? ಅಶುಭವೇ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.