ಈ ದಿನಗಳಲ್ಲಿ ಮತ್ತು ಸಮಯದಲ್ಲಿ ತುಳಸಿಎಲೆಯನ್ನು ಮುರಿಯಬಾರದು ತಿಳಿಯಿರಿ

 ತುಳಸಿಯನ್ನು ಪೂಜಿಸುವುದು ಮಾತ್ರವಲ್ಲ  ಇದರಲ್ಲಿ ಔಷಧೀಯ ಗುಣಗಳು ಇವೆ. ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳು ಕಂಡು ಬಂದಲ್ಲಿ  ತುಳಸಿ ಎಲೆಗಳಿಂದ ತಯಾರಿಸಿದ ಕಷಾಯ ನೀಡಲಾಗುತ್ತದೆ. 

Written by - Ranjitha R K | Last Updated : Mar 16, 2021, 04:54 PM IST
  • ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.
  • ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ
  • ಈ ದಿನ ಮತ್ತು ಈ ಸಮಯದಲ್ಲಿ ತುಳಸಿ ಎಲೆಗಳನ್ನು ಮುರಿಯಬೇಡಿ
ಈ ದಿನಗಳಲ್ಲಿ ಮತ್ತು ಸಮಯದಲ್ಲಿ ತುಳಸಿಎಲೆಯನ್ನು  ಮುರಿಯಬಾರದು ತಿಳಿಯಿರಿ  title=
ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. (file photo)

ನವದೆಹಲಿ: ಹಿಂದೂ ಧರ್ಮದಲ್ಲಿ ತುಳಸಿ (Tulsi) ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ತುಳಸಿಯನ್ನು ದೇವಿಯಂತೆ ಪೂಜಿಸಲು ಇದೇ ಕಾರಣ. ಬೆಳಿಗ್ಗೆ ತುಳಸಿ ಗಿಡಕ್ಕೆ ನೀರು (water) ಹಾಕಲಾಗುತ್ತದೆ.  ಸಂಜೆ, ತುಳಸಿ ಮುಂದೆ ದೀಪವನ್ನು ಬೆಳಗಿಸಿ ಮನೆಯ ಸಂತೋಷ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.  ತುಳಸಿಯನ್ನು ಮನೆಯ ಅಂಗಳದಲ್ಲಿ ಯಾಕೆ ಹಾಕಲಾಗುತ್ತದೆ ಎನ್ನುವುದಕ್ಕೆ ಶತಮಾನಗಳ ಇತಿಹಾಸವಿದೆ.  ತುಳಸಿಯನ್ನು ಲಕ್ಷ್ಮಿ ದೇವಿಯೆಂದು (Godess Laxmi)  ಪೂಜಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.  ವಾಸ್ತು ದೋಷ ವನ್ನೂ ನಿವಾರಿಸುತ್ತದೆ. ಪೂಜೆಯಲ್ಲಿ ಬಳಸುವ ಪ್ರಸಾದಕ್ಕೆ ತುಳಸಿ ಎಲೆಗಳನ್ನು ಸೇರಿಸಿದ ನಂತರವೇ ಅದನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ.

ತುಳಸಿ ಸಸ್ಯಕ್ಕೆ ಸಂಬಂಧಿಸಿದ ನಿಯಮಗಳು :
 ತುಳಸಿಯನ್ನು (Tulsi) ಪೂಜಿಸುವುದು ಮಾತ್ರವಲ್ಲ  ಇದರಲ್ಲಿ ಔಷಧೀಯ ಗುಣಗಳು ಇವೆ. ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳು ಕಂಡು ಬಂದಲ್ಲಿ  ತುಳಸಿ ಎಲೆಗಳಿಂದ (Tulsi leaves) ತಯಾರಿಸಿದ ಕಷಾಯ ನೀಡಲಾಗುತ್ತದೆ.  ಅನೇಕ ಜನರು ಚಹಾಕ್ಕೆ ಕೂಡಾ ತುಳಸಿ ಎಲೆಗಳನ್ನು ಸೇರಿಸುತ್ತಾರೆ.  ಆದರೆ ನಿಮ್ಮ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳ ಬೇಕು ಎಂದಾದರೆ  ಅಥವಾ ಹಣಕ್ಕೆ (Money) ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಮುಕ್ತಿ ಪಡೆಯಬೇಕಾದರೆ ತುಳಸಿ ಎಲೆಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಯಾವ ದಿನ ಮತ್ತು ಯಾವ ಸಮಯದಲ್ಲಿ ತುಳಸಿ ಎಲೆಯನ್ನು ಮುರಿಯಬಾರದು ಎನ್ನುವುದನ್ನು ತಿಳಿದುಕೊಳ್ಳಲೇಬೇಕು. 

ಇದನ್ನೂ ಓದಿ : Tulsi :ಅಮೃತ ಸಮಾನ ಈ ತುಳಸಿ ರಸ..! ತಿಳಿಯಿರಿ ಆರೋಗ್ಯಕ್ಕೇನು ಲಾಭ.!

ಈ ದಿನ ಮತ್ತು ಈ ಸಮಯದಲ್ಲಿ  ತುಳಸಿ ಎಲೆಗಳನ್ನು ಮುರಿಯಬೇಡಿ :
- ಭಾನುವಾರ, ಮಂಗಳವಾರ ಮತ್ತು ಶುಕ್ರವಾರದಂದು (Friday) ತುಳಸಿ ಎಲೆಗಳನ್ನು ಕೀಳಬಾರದು 
- ಇದಲ್ಲದೆ, ಏಕಾದಶಿ ದಿನ, ದ್ವಾದಶಿ ತಿಥಿ, ಅಮಾವಾಸ್ಯ ಮತ್ತು ಪೂರ್ಣಿಮಾ ತಿಥಿಗಳಲ್ಲಿ ತುಳಸಿ ಎಲೆಯನ್ನು ಮುರಿಯಬಾರದು. ಹಾಗೆ ಮಾಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ನಂಬಲಾಗಿದೆ.
- ಸೂರ್ಯೋದಯಕ್ಕೆ (Sun rise) ಮೊದಲು ಮತ್ತು ಸೂರ್ಯಾಸ್ತದ (Sun set) ನಂತರವೂ ತುಳಸಿ ಎಲೆಯನ್ನು ಮುರಿಯಬಾರದು.
- ಮನೆಯಲ್ಲಿ ಮಗು (Child) ಜನಿಸಿದಾಗ, ಆ ಮಗುವಿಗೆ ನಾಮಕರಣ ಮಾಡುವವರೆಗೆ ತುಳಸಿ ಎಲೆಗಳನ್ನು ಒಡೆಯಬೇಡಿ.
- ಮನೆಯಲ್ಲಿ ಯಾರಾದರೂ ಸತ್ತರೆ, ತುಳಸಿ ಎಲೆಯನ್ನು 13 ದಿನಗಳವರೆಗೆ ತೆಗೆಯಬಾರದು .
- ಇದಲ್ಲದೆ, ಸೂರ್ಯಗ್ರಹಣ , ಚಂದ್ರ ಗ್ರಹಣ ದಿನದಂದು ತುಳಸಿ ಎಲೆಯನ್ನು ಒಡೆಯುವುದನ್ನು ಸಹ ನಿಷೇಧಿಸಲಾಗಿದೆ.
- ಸ್ನಾನ ಮಾಡದೆ ಅಥವಾ ಅಶುದ್ಧ ಕೈಗಳಿಂದ ತುಳಸಿ ಎಲೆಯನ್ನು ಎಂದಿಗೂ ಮುರಿಯಬಾರದು. ಅಂತಹ ಎಲೆಗಳನ್ನು ದೇವರ ಆರಾಧನೆಗೂ ಬಳಸಬಾರದು . 

ಇದನ್ನೂ ಓದಿ : ASTROLOGY : ನಿಮಗಂಟಿದ ದಟ್ಟ ದಾರಿದ್ರ್ಯ ತೊಲಗಬೇಕಾ..? ನಿಷ್ಠೆಯಿಂದ ಹೀಗೆ ಮಾಡಿ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News