ನವದೆಹಲಿ: ಫಾಲ್ಗುಣ ಮಾಸದಲ್ಲಿ ಬರುವ ಏಕಾದಶಿಯನ್ನು ರಂಗಭಾರಿ ಏಕಾದಶಿ ಎಂದು ಕರೆಯಲಾಗುತ್ತದೆ. ಇದನ್ನು ಅಮಲಕಿ ಏಕಾದಶಿ ಅಥವಾ ಆಮ್ಲಾ ಏಕಾದಶಿ ಎಂತಲೂ ಕರೆಯುತ್ತಾರೆ. ಈ ರಂಗಭಾರಿ ಏಕಾದಶಿಯನ್ನು ಕಾಶಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮದುವೆಯ ನಂತರ ಈ ಏಕಾದಶಿಯ ದಿನದಂದು ಶಿವ ಮತ್ತು ತಾಯಿ ಪಾರ್ವತಿ ಮೊದಲ ಬಾರಿಗೆ ಕಾಶಿಗೆ ಬಂದರು. ನಂತರ ಭಕ್ತರು ಅವರನ್ನು ಬಣ್ಣಗಳಿಂದ ಸ್ವಾಗತಿಸಿದರು ಎಂಬ ನಂಬಿಕೆಯಿದೆ.


COMMERCIAL BREAK
SCROLL TO CONTINUE READING

ರಂಗಭಾರಿ ಏಕಾದಶಿಯ ದಿನದಂದು ಭಗವಾನ್ ಶಿವನಿಗೆ ಗುಲಾಲ್ ಅರ್ಪಿಸುವುದರಿಂದ ಜೀವನದಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ. ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ಇದರೊಂದಿಗೆ ಈ ದಿನದಂದು ಅಮೃತಬಳ್ಳಿಯನ್ನು ಪೂಜಿಸಬೇಕೆಂಬ ನಿಯಮವೂ ಇದೆ. ಹೀಗೆ ಮಾಡುವುದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯ ಕೃಪೆಯಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.


ಇದನ್ನೂ ಓದಿ: Astro Tips: ಈ ದಿನ ಅಪ್ಪಿತಪ್ಪಿಯೂ ತುಳಸಿಗೆ ನೀರು ಅರ್ಪಿಸಬೇಡಿ, ಮನೆಗೆ ಬಡತನ & ದಾರಿದ್ರ್ಯ ಕಾಡುತ್ತೆ!


ರಂಗಭಾರಿ ಏಕಾದಶಿ ಪೂಜಾ ಸಮಯ


ಹಿಂದೂ ಕ್ಯಾಲೆಂಡರ್ ಪ್ರಕಾರ ರಂಗಭಾರಿ ಏಕಾದಶಿ ತಿಥಿಯು ಮಾರ್ಚ್ 2ರಂದು ಬೆಳಗ್ಗೆ 6.39ರಿಂದ ಪ್ರಾರಂಭವಾಗಿ ಮಾರ್ಚ್ 3ರ ಬೆಳಗ್ಗೆ 9.12ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ರಂಗಭಾರಿ ಏಕಾದಶಿಯನ್ನು ಮಾರ್ಚ್ 3ರಂದು ಆಚರಿಸಲಾಗುತ್ತದೆ. ಈ ದಿನದಂದು ಪೂಜೆಗೆ ಮಂಗಳಕರ ಸಮಯವು ಮಾರ್ಚ್ 3ರ ಬೆಳಗ್ಗೆ 8:15ರಿಂದ 9:43ರವರೆಗೆ ಇರುತ್ತದೆ. ಮತ್ತೊಂದೆಡೆ ಉಪವಾಸದ ಸಮಯವು ಮಾರ್ಚ್ 4ರ ಬೆಳಗ್ಗೆ 6:48ರಿಂದ 9:09ರವರೆಗೆ ಇರುತ್ತದೆ.


ರಂಗಭಾರಿ ಏಕಾದಶಿ ಈ 3 ರಾಶಿಯವರಿಗೆ ಶುಭಕರ


ಮೇಷ ರಾಶಿ: ಮಾರ್ಚ್ 3 ಅಂದರೆ ರಂಗಭಾರಿ ಏಕಾದಶಿಯ ದಿನ ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ. ಸಂಬಳದಲ್ಲಿ ಹೆಚ್ಚಳವಾಗಲಿದೆ. ರೋಗಗಳಿಂದ ಮುಕ್ತಿ ದೊರೆಯುತ್ತದೆ.


ಮಿಥುನ ರಾಶಿ: ರಂಗಭಾರಿ ಏಕಾದಶಿಯಂದು ಮಿಥುನ ರಾಶಿಯವರಿಗೆ ಶಿವನ ಆಶೀರ್ವಾದ ಸಿಗಲಿದೆ. ಇವರು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುವರು. ನಿಮಗೆ ಭಾರೀ ಲಾಭ ಬರಬಹುದು. ಪರಸ್ಪರ ಸಂಬಂಧಗಳು ಉತ್ತಮವಾಗಿರುತ್ತವೆ.


ಇದನ್ನೂ ಓದಿ: Mars Transit 2023: ಮಂಗಳ ಸಂಕ್ರಮಣದಿಂದ ಈ ರಾಶಿಯ ಜನರು ಇನ್ಮುಂದೆ ಎಂತಹದ್ದೇ ಕೆಲಸಕ್ಕೆ ಮಾಡಿದರೂ ಅಲ್ಲಿ ಯಶಸ್ಸು ಖಂಡಿತ!


ಧನು ರಾಶಿ: ಮಾರ್ಚ್ 3ರ ದಿನ ಧನು ರಾಶಿಯವರ ಸ್ಥಗಿತವಾಗಿರುವ ಕೆಲಸ ಪೂರ್ಣವಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಭಗವಾನ್ ಶಿವ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.