Astro Tips: ಈ ದಿನ ಅಪ್ಪಿತಪ್ಪಿಯೂ ತುಳಸಿಗೆ ನೀರು ಅರ್ಪಿಸಬೇಡಿ, ಮನೆಗೆ ಬಡತನ & ದಾರಿದ್ರ್ಯ ಕಾಡುತ್ತೆ!

ತುಳಸಿ ಪೂಜೆಯ ಸಲಹೆಗಳು: ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ದೇವರ ಆಶೀರ್ವಾದಕ್ಕಾಗಿ ಜನರು ತುಳಸಿ ಗಿಡವನ್ನು ನೆಟ್ಟು ಅದನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜಿಸುತ್ತಾರೆ. ಈ ಸಮಯದಲ್ಲಿ ತುಳಸಿಗೆ ನೀರನ್ನು ಸಹ ಅರ್ಪಿಸಲಾಗುತ್ತದೆ. ಆದರೆ ಕೆಲವು ದಿನ ತುಳಸಿಗೆ ನೀರು ಅರ್ಪಿಸುವುದಕ್ಕೆ ನಿಷೇಧವಿದೆ.

Written by - Puttaraj K Alur | Last Updated : Mar 1, 2023, 05:38 PM IST
  • ತುಳಸಿಯನ್ನು ಹಿಂದೂ ಧರ್ಮದಲ್ಲಿ ಮಂಗಳಕರ & ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ
  • ಬಹುತೇಕರು ಈ ತುಳಸಿ ಗಿಡವನ್ನು ತಮ್ಮ ಮನೆಗಳಲ್ಲಿ ನೆಟ್ಟು ಪ್ರತಿನಿತ್ಯವೂ ಪೂಜಿಸುತ್ತಾರೆ
  • ಆದರೆ ಕೆಲವು ವಿಶೇಷ ದಿನಗಳಂದು ಅಪ್ಪಿತಪ್ಪಿಯೂ ತುಳಸಿ ಗಿಡಕ್ಕೆ ನೀರು ಅರ್ಪಿಸಬಾರದು
Astro Tips: ಈ ದಿನ ಅಪ್ಪಿತಪ್ಪಿಯೂ ತುಳಸಿಗೆ ನೀರು ಅರ್ಪಿಸಬೇಡಿ, ಮನೆಗೆ ಬಡತನ & ದಾರಿದ್ರ್ಯ ಕಾಡುತ್ತೆ! title=
ತುಳಸಿ ಗಿಡಕ್ಕೆ ಈ ದಿನ ನೀರು ಅರ್ಪಿಸಬೇಡಿ

ನವದೆಹಲಿ: ತುಳಸಿಯನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಮತ್ತು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಇದು ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯ ವಾಸಸ್ಥಾನವೆಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಹೆಚ್ಚಿನವರು ಈ ಗಿಡವನ್ನು ತಮ್ಮ ಮನೆಗಳಲ್ಲಿ ನೆಟ್ಟು ಪ್ರತಿನಿತ್ಯ ಪೂಜಿಸುತ್ತಾರೆ. ಪೂಜಿಸುವುದು ಮತ್ತು ನೀರನ್ನು ಅರ್ಪಿಸುವುದು ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯನ್ನು ಸಂತೋಷಗೊಳಿಸುತ್ತದೆ.

ಅವರು ನಿಮ್ಮ ಭಕ್ತಿಗೆ ಮೆಚ್ಚಿ ಆಶೀರ್ವಾದ ನೀಡುತ್ತಾರೆಂದು ನಂಬಲಾಗಿದೆ. ಆದಾಗ್ಯೂ ತುಳಸಿಗೆ ನೀರನ್ನು ಅರ್ಪಿಸಲು ಕೆಲವು ನಿಯಮಗಳಿವೆ. ತಿಂಗಳಲ್ಲಿ ಕೆಲವು ದಿನಗಳು ತುಳಸಿಗೆ ನೀರು ಅರ್ಪಿಸಬಾರದು. ಹೀಗೆ ಮಾಡುವುದರಿಂದ ಮನೆಯ ಐಶ್ವರ್ಯವು ಕೊನೆಗೊಳ್ಳುತ್ತದೆ ಮತ್ತು ಜೀವನದಲ್ಲಿ ಬಡತನ ಕಾಡಲು ಆರಂಭಿಸುತ್ತದೆ. ಯಾವ ದಿನ ತುಳಸಿಗೆ ನೀರು ಅರ್ಪಿಸಬಾರದು ಎಂದು ತಿಳಿಯಿರಿ.

ಇದನ್ನೂ ಓದಿ: Astro Tips: ಏಕಾದಶಿಯ ಈ ತಂತ್ರಗಳಿಂದ ನಿಮ್ಮ ಅದೃಷ್ಟ ಚಿನ್ನದಂತೆ ಹೊಳೆಯುತ್ತದೆ!

ಭಾನುವಾರ: ಶಾಸ್ತ್ರಗಳ ಪ್ರಕಾರ ಭಾನುವಾರ ತುಳಸಿಗೆ ನೀರನ್ನು ಅರ್ಪಿಸಬಾರದು. ಈ ದಿನ ತುಳಸಿ, ವಿಷ್ಣುವಿಗೆ ನೀರಿಲ್ಲದ ಉಪವಾಸವನ್ನು ಆಚರಿಸುತ್ತಾಳೆ. ಈ ದಿನ ನೀರನ್ನು ಅರ್ಪಿಸುವುದು ಅವರ ಉಪವಾಸವನ್ನು ಮುರಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನ ಅಪ್ಪಿತಪ್ಪಿಯೂ ತುಳಸಿಗೆ ನೀರು ಅರ್ಪಿಸಬೇಡಿ.

ಏಕಾದಶಿ: ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು ಅಥವಾ ಅದಕ್ಕೆ ನೀರನ್ನು ಅರ್ಪಿಸಬಾರದು. ಏಕಾದಶಿಯ ದಿನದಂದು ತಾಯಿ ತುಳಸಿಯು ವಿಷ್ಣುವಿಗೆ ನಿರ್ಜಲ ವ್ರತವನ್ನು ಆಚರಿಸುತ್ತಾಳೆ. ಈ ದಿನ ತುಳಸಿಗೆ ನೀರನ್ನು ಅರ್ಪಿಸಿದರೆ ತಾಯಿ ತುಳಸಿ ಕೋಪಗೊಳ್ಳುತ್ತಾಳೆ ಎಂಬುದು ಇದರ ಹಿಂದಿನ ಕಾರಣವಾಗಿದೆ.

ಇದನ್ನೂ ಓದಿ: Holi 2023: 30 ವರ್ಷಗಳ ನಂತರ ಹೋಳಿಯಲ್ಲಿ ಅದ್ಭುತ ಕಾಕತಾಳೀಯ, ಈ ರಾಶಿಯವರು ಶ್ರೀಮಂತರಾಗಲಿದ್ದಾರೆ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News