Ratha Saptami: ಮಾಘ ಮಾಸದ ಶುಕ್ಲ ಪಕ್ಷದ  ಸಪ್ತಮಿಯಂದು ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ಬಾರಿ ರಥ ಸಪ್ತಮಿ 2022 ಫೆಬ್ರವರಿ 8 ರಂದು ಆಚರಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಶಾಸ್ತ್ರಗಳ ಪ್ರಕಾರ, ರಥ ಸಪ್ತಮಿಯಂದು (Ratha Saptami) ಸೂರ್ಯನ ವಿಶೇಷ ಪೂಜೆಯು ಉತ್ತಮ ಆರೋಗ್ಯವನ್ನು ತರುತ್ತದೆ. ರಥಸಪ್ತಮಿಯ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಸಂಪತ್ತು ಮತ್ತು ಆಸ್ತಿಯ ಅನುಗ್ರಹ ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಇದರ ಬಗ್ಗೆ ತಿಳಿಯಿರಿ. 


ಇದನ್ನೂ ಓದಿ- Ratha Saptami: ರಥ ಸಪ್ತಮಿ ದಿನದಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ


ರಥ ಸಪ್ತಮಿಯಂದು ಸೂರ್ಯ ದೇವರನ್ನು ಹೇಗೆ ಪೂಜಿಸಬೇಕು?
ಈ ದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಗಂಗಾಜಲ ಮಿಶ್ರಿತ ನೀರಿನಲ್ಲಿ ಕುಂಕುಮ, ಸಕ್ಕರೆ ಮತ್ತು ಕೆಂಪು ಹೂವುಗಳನ್ನು ಬೆರೆಸಿ ಸೂರ್ಯ ದೇವರಿಗೆ (Surya Dev) ನೀರನ್ನು ಅರ್ಪಿಸಿ. ಇದಾದ ನಂತರ ಅರ್ಘ್ಯದೊಂದಿಗೆ ನೀಡಿದ ನೀರನ್ನು ಹಣೆಯ ಮೇಲೆ ಚಿಮುಕಿಸಿ. ಇದರ ನಂತರ, ದೇವರ 12 ನಾಮಗಳನ್ನು ಮೂರು ಬಾರಿ ಜಪಿಸುತ್ತಾ, ತಂದೆಯ ಪಾದಗಳನ್ನು ಸ್ಪರ್ಶಿಸಿ. ಸಾಧ್ಯವಾದರೆ, ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. 


ಇದನ್ನೂ ಓದಿ- Navratna Ring Benefits : ಈ ಉಂಗುರ ಧರಿಸುವುದರಿಂದ ಹೆಚ್ಚಾಗುತ್ತದೆ ಅದೃಷ್ಟ, ಆರೋಗ್ಯವೂ ಚೆನ್ನಾಗಿರುತ್ತದೆ!


ಸಂಪತ್ತು ಪಡೆಯಲು ಏನು ಮಾಡಬೇಕು? 
ರಥ ಸಪ್ತಮಿಯ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಸೂರ್ಯ ದೇವರಿಗೆ ನೀರು ಅರ್ಪಿಸಿ. ಇದರ ನಂತರ, ಪೂರ್ವಕ್ಕೆ ಮುಖ ಮಾಡಿ ಮತ್ತು ಕೆಂಪು ಆಸನದಲ್ಲಿ ಕುಳಿತುಕೊಳ್ಳಿ. ಅಲ್ಲದೆ, ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಅದನ್ನು ಹತ್ತಿರದಲ್ಲಿಡಿ. ಇದರ ನಂತರ, ತಾಮ್ರದ ದೀಪದಲ್ಲಿ ಶುದ್ಧ ಹಸುವಿನ ತುಪ್ಪದಿಂದ ದೀಪ ಬೆಳಗಿಸಿ. ಗಣಪತಿಯನ್ನು ಸ್ಮರಿಸುತ್ತಾ ಸೂರ್ಯ ಸ್ತೋತ್ರವನ್ನು ಮೂರು ಬಾರಿ ಪಠಿಸಿ. ಇದರ ನಂತರ, ಸಂಪತ್ತುಗಾಗಿ ಭಗವಾನ್ ಸೂರ್ಯನನ್ನು ಪ್ರಾರ್ಥಿಸಿ.  


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.