International women's day : ಸಮಾಜದ ಅಭಿವೃದ್ದಿಗೆ ಪುರುಷರೊಂದಿಗೆ ಮಹಿಳೆಯರು ಸಹ ಸಮಾನವಾಗಿ ಕೊಡುಗೆ ನೀಡುತ್ತಿದ್ದಾರೆ. ಆದರೂ ಅನೇಕ ದೇಶಗಳಲ್ಲಿ, ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಗೌರವ ಮತ್ತು ಅವಕಾಶಗಳು ಸಿಗುವುದಿಲ್ಲ. ಕೆಲವು ದೇಶಗಳಲ್ಲಿ, ಮಹಿಳೆಯರು ಕುಟುಂಬದ ನಾಲ್ಕು ಗೋಡೆಗಳ ನಡುವೆ ನಲುಗುತ್ತಿದ್ದಾರೆ. ಕ್ರೀಡೆ, ರಾಜಕೀಯ, ರಕ್ಷಣಾ ಸಚಿವಾಲಯ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಅನೇಕ ದೇಶಗಳು ಮಹಿಳೆಯರಿಗೆ ಬೆಂಬಲ ನೀಡುತ್ತಿವೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಮಹಿಳಾ ದಿನಾಚರಣೆಯಂದು ಪ್ರಪಂಚದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆದರೆ ಈಗ ನಾವು 2023 ರ ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ಮತ್ತು ಥೀಮ್ ಅನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಅಂತರಾಷ್ಟ್ರೀಯ ಮಹಿಳಾ ದಿನ 2023 ಯಾವಾಗ ಎಂದು ನಿಮಗೆ ತಿಳಿದಿದೆಯೇ? ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 1909 ರಿಂದ ಮಹಿಳಾ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಈ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.


ಇದನ್ನೂ ಓದಿ: Shani Dev: 24 ಗಂಟೆಗಳ ನಂತರ ಈ ರಾಶಿಗಳಿಗೆ ಕೆಟ್ಟ ಸಮಯ ಪ್ರಾರಂಭವಾಗಲಿದೆ!


ಮಹಿಳಾ ದಿನದ ಇತಿಹಾಸ: 1908 ರಲ್ಲಿ ಅಮೆರಿಕಾದಲ್ಲಿ ಕಾರ್ಮಿಕ ಚಳುವಳಿ ಪ್ರಾರಂಭವಾಯಿತು. ಈ ಚಳವಳಿಯಲ್ಲಿ ಸುಮಾರು 15,000 ಮಹಿಳೆಯರು ಭಾಗವಹಿಸಿದ್ದರು. ಅವರೆಲ್ಲ ಒಮ್ಮೆಲೇ ನ್ಯೂಯಾರ್ಕ್ ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರು. ದುಡಿಯುವ ಸಮಯವನ್ನು ಕಡಿಮೆ ಮಾಡಿ, ಕೂಲಿ ಹೆಚ್ಚಿಸಬೇಕು ಎಂಬುದು ದುಡಿಯುವ ಮಹಿಳೆಯರ ಆಗ್ರಹವಾಗಿತ್ತು. ಅದಲ್ಲದೆ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಬೇಕು ಎಂಬ ಬೇಡಿಕೆಗಳನ್ನೂ ಈ ಆಂದೋಲನದಲ್ಲಿ ಮಂಡಿಸಲಾಯಿತು. ಮೇಲಾಗಿ ತಮ್ಮ ಬೇಡಿಕೆ ಈಡೇರುವವರೆಗೂ ಚಳವಳಿ ನಿಲ್ಲುವುದಿಲ್ಲ. ಇದರೊಂದಿಗೆ ಅಂದಿನ ಸರಕಾರ ಅವರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರದತ್ತ ಸಿದ್ಧತೆ ನಡೆಸಿತ್ತು. 1909 ರಲ್ಲಿ, ಸೋಷಿಯಲಿಸ್ಟ್ ಪಾರ್ಟಿ ಆಫ್ ಅಮೇರಿಕಾ ಮಹಿಳಾ ದಿನವನ್ನು ಆಚರಿಸಬೇಕೆಂದು ಘೋಷಿಸಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.