ಚಿನ್ನದ ಕಾಲುಂಗುರ ಮತ್ತು ಕಾಲ್ಗೆಜ್ಜೆಯನ್ನು ಏಕೆ ಧರಿಸಬಾರದು ಗೊತ್ತೆ..? ತಪ್ಪದೆ ತಿಳಿಯಿರಿ
Benefits Of Wearing Silver : ಮಹಿಳೆಯರು ಬೆಳ್ಳಿಯ ಕಾಲುಂಗುರ, ಕಾಲು ಗೆಜ್ಜೆ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದೆ. ಇವುಗಳನ್ನು ಧರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಅಂತ ಹಿರಿಯರು ಹೇಳುತ್ತಾರೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
Silver Ring Benefits : ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರು ಬೆಳ್ಳಿಯ ಕಾಲುಂಗುರ ಮತ್ತು ಕಾಲ್ಗೆಜ್ಜೆ ಧರಿಸುವುದು ಒಂದು ಸಂಪ್ರದಾಯ. ಪಂಡಿತರು, ಹಿರಿಯರು ಹೇಳುವ ಪ್ರಕಾರ ಹೆಣ್ಣುಮಕ್ಕಳು ಮನೆಯಲ್ಲಿ ಬೆಳ್ಳಿಯ ಕಾಲ್ಗೆಜ್ಜೆ ಹಾಕಿಕೊಂಡು ಓಡಾಡಿದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳಂತೆ. ಇಂದಿಗೂ ನಾವು ಯುವತಿಯರು, ಬಾಲಕಿಯರು, ಮಹಿಳೆಯರ ಕಾಲಲ್ಲಿ ಗೆಜ್ಜೆ, ಮತ್ತು ಉಂಗುರ ನೋಡಬಹದು.
ಬೆಳ್ಳಿಯಿಂದ ಮಾಡಿದ ಕಾಲ್ಗೆಜ್ಜೆ, ಕಾಲುಂಗುರ ಧರಿಸುವುದು ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರು ಚಿನ್ನದಿಂದ ಮಾಡಿದ ಕಾಲುಂಗುರ ಮತ್ತು ಕಾಲ್ಗೆಜ್ಜೆ ಧರಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ ಅಂತ ವೈಜ್ಞಾನಿಕವಾಗಿ ಪುರಾಣಗಳು ಹೇಳುತ್ತವೆ. ಇದಕ್ಕೆ ಬಲವಾದ ಕಾರಣವೂ ಸಹ ಇದೆ..
ಇದನ್ನೂ ಓದಿ:ಸ್ಟೈಲ್‌ಗಾಗಿ ನೀವು ಬೆಳೆಸುವ ಉಗುರುಗಳಲ್ಲಿ ಎಷ್ಟು ರೀತಿಯ ಬ್ಯಾಕ್ಟೀರಿಯಾ ಇರುತ್ತೆ ಗೊತ್ತೆ..!
ಸಾಮಾನ್ಯವಾಗಿ, ಹಿಂದೂ ಪುರಾಣಗಳ ಪ್ರಕಾರ, ಚಿನ್ನವನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಲಕ್ಷ್ಮಿ ದೇವಿಗೆ ಹಳದಿ ಬಣ್ಣ ತುಂಬಾ ಇಷ್ಟ. ಅದಕ್ಕಾಗಿ ಚಿನ್ನದ ಬಣ್ಣ ಹಳದಿಯಾಗಿರುವುದರಿಂದ ಅದನ್ನು ಕಾಲಿನಲ್ಲಿ ಧರಿಸಬಾರದು ಎನ್ನುತ್ತಾರೆ ಪಂಡಿತರು. ಇದಲ್ಲದೆ, ಚಿನ್ನ ದೇಹದ ಶಾಖವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.
ಇನ್ನು ವೈದ್ಯರು ಮತ್ತು ವಿಜ್ಞಾನದ ಪ್ರಕಾರ ಬೆಳ್ಳಿಯ ಕಡಗಗಳನ್ನು ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆಯಂತೆ. ಬೆಳ್ಳಿಯ ಕಾಲ್ಗೆಜ್ಜೆ, ಕಾಲುಂಗುರ ಧರಿಸುವುದರಿಂದ ದೇಹದಲ್ಲಿನ ಶಾಖವು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಪ್ರತಿನಿತ್ಯ ನೆನೆಹಾಕಿದ ಮೆಂತ್ಯೆ ತಿನ್ನಿ: ಈ 5 ಕಾಯಿಲೆಗಳಿಂದ ಪಡೆಯಬಹುದು ಶಾಶ್ವತ ಮುಕ್ತಿ
ಹಾಗಾಗಿ ಪಾದಗಳಿಗೆ ಬಂಗಾರದ ಆಭರಣಗಳನ್ನು ಧರಿಸುವುದು ಆರೋಗ್ಯ ದೃಷ್ಠಿಯಿಂದಲೂ ಒಳ್ಳೆಯದಲ್ಲ. ಬೆಳ್ಳಿಯ ಕಡಗ, ಗೆಜ್ಜೆ, ಕಾಲುಂಗುರ ಧರಿಸುವುದರಿಂದ ಬೆನ್ನು ನೋವು, ಮೊಣಕಾಲು ನೋವು ಮತ್ತು ಮುಟ್ಟಿನ ಸೆಳೆತವೂ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ..
ಬೆಳ್ಳಿ ಬಳೆಗಳನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಪಾದಗಳಿಗೆ ಬೆಳ್ಳಿಯ ಬಳೆಗಳನ್ನು ಧರಿಸುವುದರಿಂದ ಮಹಿಳೆಯರಲ್ಲಿ ಹಾರ್ಮೋನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಗರ್ಭಾಶಯವನ್ನು ಆರೋಗ್ಯಕರವಾಗಿಡಲು ಬೆಳ್ಳಿಯ ಬಳೆಗಳು ತುಂಬಾ ಪ್ರಯೋಜನಕಾರಿ. ಬೆಳ್ಳಿಯ ಬಳೆಗಳು ಮಹಿಳೆಯರ ಕಾಲು ನೋವಿನ ಸಮಸ್ಯೆಯನ್ನು ಪರಿಹರಿಸುತ್ತವೆ. ಹಾಗಾಗಿ ಬಂಗಾರದ ಬಳೆ ತೊಡುವುದಕ್ಕಿಂತ ಬೆಳ್ಳಿಯ ಕಾಲುಂಗುರ ಮತ್ತು ಕಾಲ್ಗೆಜ್ಜೆ ಧರಿಸುವುದು ಉತ್ತಮ ಎಂದು ಶಾಸ್ತ್ರಗಳು ಹೇಳುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.