Relationship Tips From Chanakya Neeti: ಆಚಾರ್ಯ ಚಾಣಕ್ಯರು ರಾಜಕೀಯ ಜೀವನವಲ್ಲದೆ ವ್ಯಕ್ತಿಯ ವೈಯಕ್ತಿಕ ಜೀವನದ ಬಗ್ಗೆಯೂ ಅನೇಕ ಸಲಹೆಗಳನ್ನು ನೀಡಿದ್ದಾರೆ. ಯಶಸ್ವಿ ದಾಂಪತ್ಯ ಜೀವನಕ್ಕೆ ಪತಿ-ಪತ್ನಿಯರು ಕೆಲವು ಅರ್ಹತೆಗಳನ್ನು ಹೊಂದಿರಬೇಕೆಂದು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಸುಖ ಸಂಸಾರ ಅಥವಾ ಉತ್ತಮ ದಾಂಪತ್ಯ ಜೀವನಕ್ಕೆ ಹೆಂಡತಿಯಲ್ಲಿ ಕೆಲವು ಉತ್ತಮ ಗುಣಗಳಿರಬೇಕಂತೆ. ಚಾಣಕ್ಯರು ಹೇಳಿರುವ ಈ ಗುಣಗಳು ಹೆಂಡತಿಯಲ್ಲಿದ್ದರೆ ಗಂಡನ ಬದಕು ಸ್ವರ್ಗದಂತಿರುತ್ತದಂತೆ. ಚಾಣಕ್ಯರ ಪ್ರಕಾರ ಗಂಡ ಜೀವನ ಸ್ವರ್ಗವಾಗಿರಬೇಕಾದರೆ ಹೆಂಡತಿಯಲ್ಲಿ ಯಾವ ಗುಣಗಳಿರಬೇಕು..? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.  


COMMERCIAL BREAK
SCROLL TO CONTINUE READING

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಒಳ್ಳೆಯ ಹೆಂಡತಿಯ ಮೂಲ ಗುಣವೆಂದರೆ ತನ್ನ ಗಂಡನನ್ನು ತಾಯಿಯಂತೆ ನೋಡಿಕೊಳ್ಳಬೇಕು ಹಾಗೂ ಸಹೋದರಿಯಂತೆ ಪ್ರೀತಿಸಬೇಕು. ಈ ಗುಣವಿದ್ದರೆ ಹೆಂಡತಿಯೊಂದಿಗೆ ಯಶಸ್ವಿ ದಾಂಪತ್ಯ ಜೀವನ ನಡೆಸುವ ಪುರುಷನಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳು ದೊರಕುತ್ತವಂತೆ. ಆತ ಅಂದುಕೊಂಡಿದ್ದನ್ನು ಸಾಧಿಸಿ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ಹೇಳಲಾಗಿದೆ.   


ಇದನ್ನೂ ಓದಿ: ಮೇಷ, ಮಿಥುನ ಸೇರಿದಂತೆ ಈ 5 ರಾಶಿಯವರಿಗೆ ಗೋಲ್ಡನ್ ಟೈಂ ಶುರು: ಸಿಗಲಿದೆ ಮಹಾಲಕ್ಷ್ಮಿ ಯೋಗದ ಅಖಂಡ ಲಾಭ


ಬುದ್ಧಿವಂತ ಹೆಂಡತಿಯ ಬಗ್ಗೆ ಉಲ್ಲೇಖಿಸಿರುವ ಚಾಣಕ್ಯರು, ಮದುವೆಯಾಗುವ ಹುಡುಗಿ ಸುಂದರವಾಗಿಲ್ಲದಿದ್ದರೂ ಪರವಾಗಿಲ್ಲ, ಆಕೆ ಒಳ್ಳೆಯ ಕುಟುಂಬದಿಂದ ಬಂದಿರಬೇಕಂತೆ. ಉತ್ತಮ ಹಿನ್ನೆಲೆಯುಳ್ಳ ಮನೆತನದಿಂದ ಬಂದ ಹುಡುಗಿ ಅಂದವಿಲ್ಲದಿದ್ದರೂ ಸಹ ಆಕೆಯನ್ನು ಖುಷಿಖುಷಿಯಾಗಿಯೇ ಮದುವೆಯಾಗಬಹುದಂತೆ. ಕುಟುಂಬಕ್ಕೆ ಹೊಂದಿಕೊಳ್ಳುವ ಹುಡುಗಿ ಸಿಕ್ಕರೆ ಅದು ಗಂಡನ ಅದೃಷ್ಟವೆಂದು ಚಾಣಕ್ಯರು ಹೇಳುತ್ತಾರೆ. ಇಂತಹ ಹುಡುಗಿ ಮಾತ್ರ ಎಲ್ಲವನ್ನೂ ಸರಿಯಾಗಿ ಅರ್ಥಮಾಡಿಕೊಂಡು ಚೆನ್ನಾಗಿ ಸಂಸಾರ ನಡೆಸುತ್ತಾಳೆಂದು ಚಾಣಕ್ಯರು ತಿಳಿಸಿದ್ದಾರೆ. 


ಪತಿ-ಪತ್ನಿಯರ ನಡುವಿನ ಪ್ರೀತಿಯೇ ಯಶಸ್ವಿ ದಾಂಪತ್ಯ ಜೀವನಕ್ಕೆ ಆಧಾರ ಎಂದು ಚಾಣಕ್ಯ ಹೇಳಿದರು. ಹೆಂಡತಿಯ ನಿಜವಾದ ಸಂತೋಷವು ಪತಿಗೆ ಮಾಡುವ ಸೇವೆಯಲ್ಲಿ ಅಡಗಿದೆ ಮತ್ತು ಹೆಂಡತಿಯನ್ನು ಪ್ರೀತಿಸುವುದು ಗಂಡನ ಕರ್ತವ್ಯ ಎಂದು ಚಾಣಕ್ಯ ಹೇಳಿದರು. ಬುದ್ಧಿವಂತ, ಪ್ರಾಮಾಣಿಕ ಹೆಂಡತಿ ಯಾವಾಗಲೂ ಗಂಡನ ಯಶಸ್ಸಿನ ರಾಯಭಾರಿ ಎಂದು ಚಾಣಕ್ಯ ಹೇಳಿದ್ದಾರೆ.


ಹೆಂಡತಿಯು ತನ್ನ ಗಂಡನನ್ನು ಪ್ರೀತಿಸಬೇಕು ಮತ್ತು ಯಾವಾಗಲೂ ಸತ್ಯವನ್ನು ಮಾತನಾಡಬೇಕು. ಹೆಂಡತಿಯ ಇಂತಹ ನಡವಳಿಕೆಯು ಕುಟುಂಬದಲ್ಲಿ ಸಂತೋಷವನ್ನು ತರುತ್ತದೆ. ಹೆಂಡತಿ ತನ್ನ ಗಂಡನ ಒಪ್ಪಿಗೆಯೊಂದಿಗೆ ಮಾಡುವ ಪ್ರತಿಯೊಂದೂ ಅವರ ಜೀವನ ಮತ್ತು ಕುಟುಂಬಕ್ಕೆ ಪ್ರಯೋಜನಕಾರಿಯಾಗಬೇಕು.


ಇದನ್ನೂ ಓದಿ: ಈ ರಾಶಿಯ ಜಾತಕದಲ್ಲಿ ಮಹಾಲಕ್ಷ್ಮೀ ಯೋಗ! ಹಣದ ಸುರಿಮಳೆ, ಉದ್ಯೋಗದಲ್ಲಿ ಬಡ್ತಿ-ಶ್ರೀಮಂತಿಕೆ ಅರಸಿ ಬರುವುದು!


ಒಳ್ಳೆಯ ಹೆಂಡತಿ ಎಂದಿಗೂ ಜಗಳವಾಡುವುದಿಲ್ಲ. ಹೆಂಡತಿ ತನ್ನ ಪತಿಯೊಂದಿಗೆ ವಿನಾಕಾರಣ ಜಗಳವಾಡಬಾರದು. ಪರಿಸ್ಥಿತಿಗೆ ಅನುಗುಣವಾಗಿ ಗಂಡನ ಸೇವೆ ಮಾಡುವ ಹೆಂಡತಿಯರು ಸುಂದರವಾಗಿಲ್ಲದಿದ್ದರೂ ಗಂಡನ ಪ್ರೀತಿಯನ್ನು ಸಂಪೂರ್ಣವಾಗಿ ಗಳಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ.


ಒಳ್ಳೆಯ ಹೆಂಡತಿ ಬುದ್ಧಿವಂತಳಾಗಿರಬೇಕು ಮತ್ತು ಪ್ರಾಮಾಣಿಕಳಾಗಿರಬೇಕು. ತುಂಬಾ ಪ್ರೀತಿಸುವ ಮತ್ತು ಪ್ರಾಮಾಣಿಕಳಾಗಿರುವ ಹೆಂಡತಿಯನ್ನು ಪಡೆಯುವ ಪತಿ ಅದೃಷ್ಟ ಮಾಡಿರುತ್ತಾರೆ. ಗಂಡನು ತನ್ನ ಹೆಂಡತಿಯನ್ನು ತಾಯಿಯಷ್ಟೇ ಪ್ರೀತಿಸಬೇಕು. ಹೆಂಡತಿಯ ಮೇಲೆ ಪರಿಶುದ್ಧ ಪ್ರೀತಿ ತೋರಬೇಕು. ಕೋಪ ಕಡಿಮೆಯಾದಷ್ಟೂ ಗಂಡ ಹೆಂಡಿತಿಯ ಜೊತೆ ಸುಖವಾಗಿರುತ್ತಾನೆ. ಹೆಂಡತಿಯೊಬ್ಬಳು ಗಂಡನೊಂದಿಗೆ ಹೊಂದಿಕೊಂಡಿದ್ದರೆ ಗಂಡ ಈ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.