Mahalaxmi Raja Yoga in Kundli: ವೈದಿಕ ಜ್ಯೋತಿಷ್ಯದಲ್ಲಿ ರಾಜಯೋಗಗಳನ್ನು ಪ್ರಮುಖ ಪರಿಕಲ್ಪನೆ ಎಂದು ಪರಿಗಣಿಸಲಾಗುತ್ತದೆ. ಅವು ಜನ್ಮ ಕುಂಡಲಿಯಲ್ಲಿ ಗ್ರಹಗಳ ನಿರ್ದಿಷ್ಟ ಸಂಯೋಜನೆಯಿಂದ ರೂಪುಗೊಳ್ಳುವ ಪರಿಕಲ್ಪನೆ ಎನ್ನಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೈದಿಕ ಜ್ಯೋತಿಷ್ಯದಲ್ಲಿ ರಾಜಯೋಗಗಳನ್ನು ಪ್ರಮುಖ ಪರಿಕಲ್ಪನೆ ಎಂದು ಪರಿಗಣಿಸಲಾಗುತ್ತದೆ. ಅವು ಜನ್ಮ ಕುಂಡಲಿಯಲ್ಲಿ ಗ್ರಹಗಳ ನಿರ್ದಿಷ್ಟ ಸಂಯೋಜನೆಯಿಂದ ರೂಪುಗೊಳ್ಳುವ ಪರಿಕಲ್ಪನೆ ಎನ್ನಬಹುದು. ಈ ಯೋಗಗಳು ಯಶಸ್ಸು, ಖ್ಯಾತಿ ಮತ್ತು ಶಕ್ತಿಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಒದಗಿಸುತ್ತದೆ.
ಇನ್ನು ಇತ್ತೀಚೆಗೆ ಮಹಾಲಕ್ಷ್ಮಿ ರಾಜಯೋಗವು ರೂಪುಗೊಂಡಿದೆ. ಮಂಗಳ ಮತ್ತು ಚಂದ್ರರ ಸಂಯೋಜನೆಯಿಂದ ಈ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಎಲ್ಲಾ ರಾಶಿಗಗ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಮಹಾಲಕ್ಷ್ಮಿ ರಾಜಯೋಗದಿಂದ ಕೆಲವು ವಿಶೇಷ ರಾಶಿಯವರಿಗೆ ಶುಭಲಾಭವನ್ನು ನೀಡುವ ಸಾಧ್ಯತೆಯಿದೆ.
ಮೇಷ: ಮಂಗಳ ಮತ್ತು ಚಂದ್ರರ ಸಂಯೋಜನೆಯಿಂದ ರೂಪುಗೊಂಡ ಮಹಾಲಕ್ಷ್ಮಿ ರಾಜಯೋಗವು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡಲಿದೆ. ಕೆಲಸಗಳು ಲಾಭದಾಯಕವಾಗಿರುತ್ತದೆ. ಪ್ರಯಾಣ ವ್ಯವಹಾರದಲ್ಲಿ ತೊಡಗಿರುವವರಿಗೆ ವಿಶೇಷ ಲಾಭ ದೊರೆಯಲಿದೆ. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುವ ಸಾಧ್ಯತೆಯೂ ಇದೆ.
ವೃಷಭ ರಾಶಿ: ಮಂಗಳ ಮತ್ತು ಚಂದ್ರನ ಸಂಯೋಜನೆಯು ವೃಷಭ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಈ ರಾಶಿಯ ಜನರು ವಿತ್ತೀಯ ಲಾಭದ ಜೊತೆಗೆ ಗೌರವವನ್ನು ಪಡೆಯುತ್ತಾರೆ. ಮಾಧ್ಯಮ, ಚಲನಚಿತ್ರ, ಗ್ಲಾಮರ್ ವಲಯಕ್ಕೆ ಸಂಬಂಧಿಸಿದ ಜನರು ಉತ್ತಮ ಸಾಧನೆಗಳನ್ನು ಮಾಡುತ್ತಾರೆ. ಹೊಸ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಯೂ ಇದೆ.
ಕರ್ಕಾಟಕ: ಮಹಾಲಕ್ಷ್ಮಿ ರಾಜಯೋಗವು ಕರ್ಕಾಟಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ. ಜೀವನದಲ್ಲಿ ಸಂತಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಬೆಳವಣಿಗೆಯ ಸಾಧ್ಯತೆಗಳು ಸಹ ಗೋಚರಿಸುತ್ತವೆ. ವ್ಯಾಪಾರದಲ್ಲಿಯೂ ಲಾಭದ ಸಾಧ್ಯತೆ ಇದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)