Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?
Relationship - ಇಂಡಿಯನ್ ಪೊಲೀಸ್ ನಲ್ಲಿ ಪೆದೆಯಾಗಿರುವ ಆಶಿಶ್ ಮಿಶ್ರಾ ಟ್ವಿಟ್ಟರ್ ವೇದಿಕೆಯ ಮೇಲೆ ಸಾಕಷ್ಟು ಸಕ್ರೀಯರಾಗಿರುತ್ತಾರೆ. ಕೆಲ ದಿನಗಳ ಹಿಂದೆ ಅವರು ತಾಯಿ ಮತ್ತು ಪತ್ನಿ ಎರಡೂ ಸಂಬಂಧದ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದರು. ಈ ಕುರಿತು ಪ್ರಶ್ನೆ ಕೇಳಿದ್ದ ಅವರು ತಾಯಿ ಹಾಗೂ ಪತ್ನಿ ಇವರಿಬ್ಬರಲ್ಲಿ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ? ಎಂದು ಕೇಳಿದ್ದರು. ಈ ತ್ರಿಕೋನ ಸಂಬಂಧ ಇಂದಿಗೂ ಕ್ಲಿಷ್ಟ ತ್ರಿಕೋನ ಸಂಬಂಧಗಳಲ್ಲಿ ಒಂದು ಎಂದೇ ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ: Relationship - ವಿವಾಹದ ಬಳಿಕ ಯಾವ ರೀತಿ ಓರ್ವ ಯುವತಿಗೆ ತನ್ನ ಅತ್ತೆಯ ಮನೆಯಲ್ಲಿ ಹೊಸ ಸಂಬಂಧಗಳ ಜೊತೆಗೆ ಅಡ್ಜಸ್ಟ್ ಮಾಡಿಕೊಳ್ಳಬೇಕಾಗುತ್ತದೆಯೋ ಅದೇ ರೀತಿ ಪತಿಯಾದ ವ್ಯಕ್ತಿಗೆ ತನ್ನ ಪತ್ನಿ ಹಾಗೂ ತಾಯಿಯ ನಡುವೆ ಸರಿಯಾದ ಬ್ಯಾಲನ್ಸ್ ನಿರ್ಮಿಸುವುದು ಸವಾಲಿನ ಪ್ರಶ್ನೆಯಾಗಿರುತ್ತದೆ. ಕೆಲ ಸಂಬಂಧಗಳು ತುಂಬಾ ನಾಜೂಕಾಗಿರುತ್ತವೆ ಹಾಗೂ ಜಟಿಲತೆಯಿಂದ ಕೂಡಿರುತ್ತವೆ. ಅವುಗಳಲ್ಲಿ ಪುರುಷನ ತನ್ನ ತಾಯಿ ಹಾಗೂ ಪತ್ನಿಯ ನಡುವಿನ ಸಂಬಂಧ ಕೂಡ ಒಂದು.
ಪೇದೆಯೋರ್ವರ ಪ್ರಶ್ನೆಯಿಂದ ನಿರ್ಮಾಣಗೊಂಡ ಚರ್ಚೆ
ಇಂಡಿಯನ್ ಪೊಲೀಸ್ ನಲ್ಲಿ ಪೆದೆಯಾಗಿರುವ ಆಶಿಶ್ ಮಿಶ್ರಾ ಟ್ವಿಟ್ಟರ್ ವೇದಿಕೆಯ ಮೇಲೆ ಸಾಕಷ್ಟು ಸಕ್ರೀಯರಾಗಿರುತ್ತಾರೆ. ಕೆಲ ದಿನಗಳ ಹಿಂದೆ ಅವರು ತಾಯಿ ಮತ್ತು ಪತ್ನಿ ಎರಡೂ ಸಂಬಂಧದ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದರು. ಈ ಕುರಿತು ಪ್ರಶ್ನೆ ಕೇಳಿದ್ದ ಅವರು ತಾಯಿ ಹಾಗೂ ಪತ್ನಿ ಇವರಿಬ್ಬರಲ್ಲಿ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ? ಎಂದು ಕೇಳಿದ್ದರು. ಈ ತ್ರಿಕೋನ ಸಂಬಂಧ ಇಂದಿಗೂ ಕ್ಲಿಷ್ಟ ತ್ರಿಕೋನ ಸಂಬಂಧಗಳಲ್ಲಿ ಒಂದು ಎಂದೇ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಹಲವರು ತರಹೇವಾರಿ ಹಾಗೂ ಸ್ವಾರಸ್ಯಕರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
Beard Can Also Change Luck: ಗಡ್ಡದಲ್ಲಿಯೂ ಕೂಡ ನಿಮ್ಮ ಅದೃಷ್ಟ ಅಡಗಿದೆ ಗೊತ್ತಾ?
ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಜನಸಾಮಾನ್ಯರು
ಆಶಿಶ್ ಮಿಶ್ರಾ ಅವರ ಈ ಪ್ರಶ್ನೆಗೆ 109 ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಹಲವರು ಇದೊಂದು ಧರ್ಮಸಂಕಟವಾಗಿದ್ದು ಇದರಲ್ಲಿ ಪುರುಷನ ಮೇಲೆ ತಾಯಿಯ ಹಕ್ಕು ಜಾಸ್ತಿ ಇರುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಬಳಕೆದಾರ ಎಲ್ಲರ ಸಮಸ್ಯೆಯನ್ನೇ ಬಗೆಹರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಂಕಜ್ ಕುಮಾರ್ ಶ್ರೀವಾಸ್ತವ್, ಪುರುಷನ ಮೇಲೆ ಪತ್ನಿಯ ಹಕ್ಕಿದ್ದರೆ, ಪುತ್ರನ ಮೇಲೆ ತಾಯಿಯ ಹಕ್ಕಿರುತ್ತದೆ ಎಂಬ ಸ್ವಾರಸ್ಯಕರ ಉತ್ತರ ನೀಡಿ ನಿಬ್ಬೇರಗಾಗಿಸಿದ್ದಾರೆ.
ಇದನ್ನೂ ಓದಿ-Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?
ಸಂಬಂಧಗಳ ಜಟಿಲತೆಯನ್ನು ಬಗೆ ಹರಿಸಲು ಜೀವನದಲ್ಲಿ ಬರುವ ಎಲ್ಲ ವ್ಯಕ್ತಿಗಳ ಪಾತ್ರ ವಿಶೇಷವಾಗಿರುತ್ತದೆ ಹಾಗೂ ಪ್ರತಿಯೊಂದಕ್ಕೂ ಪ್ರಾತಿನಿಧ್ಯ ನೀಡಲೇ ಬೇಕು. ಎಲ್ಲರಿಗೂ ಅವರದ್ದೇ ಆದ ಸಮಯ ನೀಡಿ ಎಲ್ಲರ ಅವಶ್ಯಕತೆಗಳನ್ನು ಅರಿತುಕೊಂಡರೆ ಜೀವನದಲ್ಲಿ ಇಂತಹ ಪ್ರಶ್ನೆ ಎಂದಿಗೂ ಏಳುವುದೇ ಇಲ್ಲ.
ಇದನ್ನೂ ಓದಿ- Hasta Samudrika:ನಿಮ್ಮ ಕೈಯಲ್ಲಿಯೂ ಈ ರೇಖೆ ಇದೆಯಾ? ಇದ್ರೆ ನೀವೂ ನಿಮ್ಮ ಮಡದಿಯ ಕಾಳಜಿಗೆ ಪಾತ್ರರಗುವಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.