ಬೆಂಗಳೂರು: ಸಿಲಿಕಾನ್‌ ಸಿಟಿ, ಐ.ಟಿ.ಬಿ.ಟಿ ಸಿಟಿ ರಾಜಧಾನಿ ಬೆಂಗಳೂರು ಶರವೇಗವಾಗಿ ಬೆಳೆದು ನಿಂತಿದೆ. ಪಬ್‌, ಬಾರ್‌, ರೆಸ್ಟೋರೆಂಟ್ಸ್‌ಗಳು ಇಲ್ಲಿ ಲೆಕ್ಕವೇ ಇಲ್ಲ. ಅದರಲ್ಲು ವಿಶೇಷವಾಗಿ ಬೆಂಗಳೂರಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತೆ ಡಿಫ್ರೆಂಟ್‌ ಥೀಮ್ಸ್‌ ರೆಸ್ಟೋರೆಂಟ್‌ಗಳು.


COMMERCIAL BREAK
SCROLL TO CONTINUE READING

ಸೆಂಟ್ರಲ್‌ ಜೈಲ್‌ ರೆಸ್ಟೋರೆಂಟ್‌, ಗುಫಾ ರೆಸ್ಟೋರೆಂಟ್‌, ಪ್ಲಾಟ್‌ ಫಾರ್ಮ್ಸ್‌ 65 ರೆಸ್ಟೋರೆಂಟ್‌, KGF ಕನ್ನಡಿಗಸ್‌ ಗೋಲ್ಡನ್‌ ಫುಡ್‌ ರೆಸ್ಟೋರೆಂಟ್‌ ಇತ್ಯಾದಿ. ಅದರಲ್ಲು ಬೆಂಗಳೂರಿನ HSR ಬಳಿ ಇರುವ ಸೆಂಟ್ರಲ್‌ ಜೈಲ್‌ ರೆಸ್ಟೋರೆಂಟ್‌ ಬಹಳ ಯುನಿಕ್‌ಆಗಿರುವಂತಹ ಸ್ಥಳ. ನೀವು ವೀಕೆಂಡ್‌ನಲ್ಲಿ ಫ್ರೆಂಡ್ಸ್‌ ಜೊತೆ ಫ್ಯಾಮಿಲಿ ಜೊತೆ ಸಮಯ ಕಳೆಯಬೇಕು ಅಂತ ಪ್ಲ್ಯಾನ್‌ ಮಾಡಿದ್ರೆ ದಿ ಬೆಸ್ಟ್‌ ಜಾಗ ಸೆಂಟ್ರಲ್‌ ಜೈಲ್‌ ರೆಸ್ಟೋರೆಂಟ್‌.


ಇದನ್ನೂ ಓದಿ: Kannada News: ಪತಿಯ ಮೃತದೇಹದ ಮುಂದೆ ಅಳುತ್ತಲೇ ಪ್ರಾಣ ಬಿಟ್ಟ ಪತ್ನಿ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!


JAIL ಥೀಮ್‌ ರೆಸ್ಟೋರೆಂಟ್‌ ಥೇಟ್ ಜೈಲ್‌ ರೀತಿಯಲ್ಲೆ ತಯಾರಿಸಲಾಗಿದೆ. ಮೊದಲಿಗೆ ಮುಂಭಾಗದಲ್ಲಿ ಪೋಲಿಸ್‌ ಮೂರ್ತಿಗಳನ್ನ ಇಡಲಾಗಿದೆ. ನಂತರ ಒಳ ಭಾಗದಲ್ಲಿ ಜೈಲ್‌ ಕಂಬಿಗಳ (ಸೆಲ್‌) ಒಳಗೆ ಊಟ ಸವಿಯಲು ಕೂರಿಸಲಾಗುತ್ತೆ. ಪೋಲಿಸ್‌ ಯೂನಿಫಾರ್ಮ್‌ ಧರಿಸಿ, ಗನ್‌ಗಳನ್ನ ಹಿಡಿದು ನಿಮ್ಮಲ್ಲಿಯೇ ಬಂದು ಊಟದ ಆಡರ್‌ ತೆಗೋಳ್ತಾರೆ.ನಂತರ ವೇಯ್‌ಟರ್ಸ್‌ಗಳು ಖೈದಿ ಬಟ್ಟೆಗಳನ್ನ ಧರಿಸಿ ಊಟ ಉಣಬಡಿಸುತ್ತಾರೆ.


ಇದನ್ನೂ ಓದಿ: Athani Accident: ಅಮಿತ್‌ ಶಾ ಕಾರ್ಯಕ್ರಮ ಮುಗಿಸಿ ಮರಳುವಾಗ ಅಫಘಾತ.. ಓರ್ವ ಸಾವು, 7 ಕ್ಕೂ ಹೆಚ್ಚು ಜನರಿಗೆ ಗಾಯ


ಇಲ್ಲಿ ಬರುವಂತಹ ಗ್ರಾಹಕರು ಜೈಲ್‌ ವಾತಾವರಣವನ್ನ ತುಂಬಾ ಎಂಜಾಯ್‌ ಮಾಡುತ್ತಾರೆ. ಕ್ರೇಜಿಯಾಗಿರುವಂತಹ ವಾತಾವರಣ ಜೊತೆಗೆ ಇಲ್ಲಿ ರುಚಿ ರುಚಿಯಾದಂತಹ ಊಟ ಸವಿಯಬಹುದು. ಚಿಕನ್‌ ಎನ್‌ ಕೌಂಟರ್‌, ರೆಡ್‌ ಅಲರ್ಟ್‌ ಚಿಕನ್‌ ಇಲ್ಲಿನ ಫೇಮಸ್‌ ಡಿಷೆಸ್‌ ಹಾಗು ಜೈಲ್‌ ದಮ್‌ ಬಿರಿಯಾನಿ ಸೂಪರ್‌ ಟೇಸ್ಟಿ. ಹಾಗಾದ್ರೆ ನೀವು ಒಮ್ಮೆ ಭೇಟಿ ನೀಡಿ ಜೈಲ್‌ ಊಟ ಸವಿಯಬಹುದು. 


ಫೋಟೋ ಸೆಕ್ಷನ್‌ ವಿಚಾರ ಬಂದಾಗ ನಾವು ಯಾವುದೇ ವಿಶೇಷ ಸ್ಥಳಕ್ಕೆ ಹೋದಾಗ ಪೋಟೋಸ್‌ ಕ್ಲಿಕ್‌ ಮಾಡಿಸೋದು ಪ್ರತಿಯೊಬಬ್ಬರಿಗು ಇಷ್ಟ. ಇನ್ನು ಸೆಂಟ್ರಲ್‌ ಜೈಲ್‌ ರೆಸ್ಟೋರೆಂಟ್‌ನಲ್ಲಿ ಫೋಟೋ ಸ್ಪಾಟ್‌ ಹೆಸರಿನಲ್ಲಿ ಒಂದು ಡಾರ್ಕ್‌ ರೂಮ್‌ ಒಳಗೆ, ಪೋಲಿಸ್‌ ಲಾಠಿ ಜೊತೆಗೆ ಖೈದಿ ಮೂರ್ತಿ ಇಡಲಾಗಿದೆ. ಇಲ್ಲಿ ಬರುವಂತಹ ಎಲ್ಲಾ ಗ್ರಾಹಕರು ರೀಲ್ಸ್‌  ಮಾಡಲು, ಫೋಟೋಸ್‌ ಕ್ಲಿಕ್ಕಿಸಲು ಡಾರ್ಕ್‌ ರೂಮಿಗೆ ಮುಗಿ ಬೀಳ್ತಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.