ಹಾಸನ : ರವೀಶ್ ಎಂಬುವವರು ಹೃದಯಘಾತದಿಂದ ಶುಕ್ರವಾರದಂದು ನಿಧನ ಹೊಂದಿದ್ದರು. ಅದರ ಬೆನ್ನಲೇ ಪತಿ ಮೃತ ದೇಹದೆದುರು ಪತ್ನಿ ಅಳುತ್ತಲೇ ಪ್ರಾಣ ಬಿಟ್ಟಿದ್ದಾರೆ. ಘಟನೆ ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ. ಈ ಹಿನ್ನಲೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಮೃತ ದೇಹ ಮುಂದೆ ಸತತವಾಗಿ ಅಳುತ್ತಲೇ ದುಖಃ ವ್ಯಕ್ತ ಪಡಿಸಿದ್ದಾರೆ..
ಈಗಾಗಗಲೇ ಕುಟುಂಬದ ಒಂದು ಜೀವ ಕಳೆದುಕೊಂಡು ಕುಟುಂಬವೇ ರೋದನೆಯಲ್ಲಿ ಮುಳುಗಿದ್ದರು . ಇದರ ನಡುವೆ ಪತಿ ಮೃತ ದೇಹದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಸಹ ಪ್ರಾಣ ಬಿಟ್ಟಿದ್ದಾಳೆ.
ಇದನ್ನೂ ಓದಿ: Siddaramaiah: ಕಾಂಗ್ರೆಸ್ ಕಾಲದಲ್ಲಿ ಐಟಿ-ಬಿಟಿ ರಾಜಧಾನಿ, ಬಿಜೆಪಿ ಅವಧಿಯಲ್ಲಿ ಅಪರಾಧಿಗಳ ಜಗತ್ತಿನ ರಾಜಧಾನಿ - ಸಿದ್ದರಾಮಯ್ಯ
ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು, ಮಗ ಸೊಸೆಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದೆ. ಸಾವಿನಲ್ಲೂ ಜೊತೆಯಾದ ದಂಪತಿ, ಇಬ್ಬರ ಗಂಡು ಮಕ್ಕಳ ಗೋಳಾಟ, ಕುಟುಂಬಸ್ಥರ , ಗ್ರಾಮಸ್ಥರ ಕಂಬನಿ ಮುಗಿಲು ಮುಟ್ಟಿದ್ದೆ.
ಇಂತಥ ದೃಶ್ಯಗಳನ್ನು ಕಥೆಯನ್ನು ಸಿನಿಮಾಗಳಲ್ಲಿ ನೋಡಿರುತ್ತವೆ. ಆದರೆ ವಾಸ್ತವದಲ್ಲಿ ಈ ಘಟನೆ ನಡೆದಿರುವುದು ನಿಜಕ್ಕೂ ಹೃದಯವಿದ್ರಾಯಕ. ಅದೇನೆ ಇರಲಿ ಆ ದುಖಃ ಭರಿಸುವ ಶಕ್ತಿ ಆ ದಂಪತಿಗಳ ಮಕ್ಕಳು ಹಾಗೂ ಕುಟುಂಬಸ್ಥರ ನೀಡಬೇಕು.
ಇದನ್ನೂ ಓದಿ:Karnataka Assembly Election: ಚುನಾವಣೆಗೆ ಕೌಂಟ್ ಡೌನ್ ಶುರು: ಉದ್ಯಾನನಗರಿಯಲ್ಲಿ ಭರ್ಜರಿ ಪ್ರಚಾರ
ಆ ದಂಪತಿಗಳ ಕಥೆ ನೋಡುತ್ತಿದ್ದರೇ ಯಾವ ಸಿನಿಮಾದ ಕಥೆಗೂ ಕಮ್ಮಿ ಇಲ್ಲ ಎನಿಸುತ್ತದೆ. ತುಂಬಾ ಪ್ರೀತಿಸುವ ಜೀವಿಗಳು ಒಬ್ಬರನ್ನು ಕಳೆದುಕೊಂಡು ಮತ್ತೊಂದು ಜೀವ ಹೆಚ್ಚು ದಿನ ಬದುಕುವುದಿಲ್ಲ ಎಂಬ ಮಾತೊಂದು ಇತ್ತು ಬಹುಷಃ ಆ ಮಾತು ಇಂದು ನಿಜಾವಾಯಿತು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.