Mantra Jaap Rules - ಮಂತ್ರಗಳಲ್ಲಿ ಅಪಾರ ಶಕ್ತಿ ಇರುತ್ತದೆ ಎನ್ನಲಾಗುತ್ತದೆ. ದೇವ-ದೇವತೆಗಳ ಆಶೀರ್ವಾದವನ್ನು ಪಡೆಯಲು ಇದೊಂದು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ವಿಭಿನ್ನ ದೇವ-ದೇವತೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬಹುದು. ಮಂತ್ರವನ್ನು ಪಠಿಸುವುದರಿಂದ, ವ್ಯಕ್ತಿಯ ಆಲೋಚನೆಗಳಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ ಮತ್ತು ಆಲೋಚನೆಗಳಿಗೆ ಬಲ ಸಿಗುತ್ತದೆ. ಇದರಿಂದ ವ್ಯಕ್ತಿಯ ಜೀವನದ ತೊಂದರೆಗಳು ದೂರಾಗುತ್ತವೆ. ದೇವ-ದೇವತೆಗಳ ಕೃಪೆಯಿಂದ ಅವರ ಇಷ್ಟಾರ್ಥಗಳು ನೆರವೇರುತ್ತವೆ. ಆದರೆ ಕೆಲ ಜನರು ಹಲವು ವರ್ಷಗಳಿಂದ ಮಂತ್ರವನ್ನು ಜಪಿಸುತ್ತಿದ್ದಾರೆ, ಆದರೆ ಅದರಿಂದ ಅವರ ಜೀವನದಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಬದಲಾವಣೆಯಾಗಿರುವುದಿಲ್ಲ. ಇದಕ್ಕೆ ಕಾರಣ ಎಂದರೆ ಮಂತ್ರ ಪಠಿಸುವಾಗ ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು ಹಾಗಾದರೆ ಬನ್ನಿ ಮಂತ್ರವನ್ನು ಪಠಿಸುವಾಗ ಯಾವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

COMMERCIAL BREAK
SCROLL TO CONTINUE READING

ಮಂತ್ರವನ್ನು ಪಠಿಸುವಾಗ ಈ ನಿಯಮಗಳನ್ನು ನೆನಪಿನಲ್ಲಿಡಿ
>> ಸ್ನಾನ ಮಾಡದೆ ಮಂತ್ರವನ್ನು ಜಪಿಸಬೇಡಿ. ಸ್ನಾನ ಮಾಡಿದ ನಂತರ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿದ ನಂತರ ಯಾವಾಗಲೂ ಮಂತ್ರವನ್ನು ಪಠಿಸಿ.

>> ಇದಲ್ಲದೆ ನೀವು ಕುಳಿತುಕೊಂಡು ಮಂತ್ರವನ್ನು ಜಪಿಸುತ್ತಿರುವ ಸ್ಥಳವನ್ನು ಸ್ವಚ್ಛವಾಗಿಡುವುದು ತುಂಬಾ ಮುಖ್ಯವಾಗಿದೆ. ಇದಲ್ಲದೆ, ಸ್ಥಳದ ಸುತ್ತಲಿನ ವಾತಾವರಣವು ಶಾಂತವಾಗಿರಬೇಕು, ಇದರಿಂದ ಜಪ ಮಾಡುವಾಗ  ನಿಮ್ಮ ಮನಸ್ಸು ಏಕಾಗ್ರ ಚಿತ್ತದಲ್ಲಿರುತ್ತದೆ.

>> ನೆಲದ ಮೇಲೆ ನೇರವಾಗಿ ಕುಳಿತು ಮಂತ್ರವನ್ನು ಎಂದಿಗೂ ಜಪಿಸಬೇಡಿ. ಯಾವುದಾದರೊಂದು ಆಸನದ ಮೇಲೆ ಕುಳಿತು ಮಂತ್ರ ಜಪಿಸಿದರೆ ಉತ್ತಮ.

>> ಮಂತ್ರವನ್ನು ಪಠಿಸಿದ ನಂತರ, ಆಸನವನ್ನು ಸರಿಯಾಗಿ ಇರಿಸಿ. ಅದಕ್ಕೆ ಕಾಲುಗಳಿಂದ ಸ್ಪರ್ಶಿಸಬೇಡಿ.

>> ಸಾಮಾನ್ಯವಾಗಿ ತುಳಸಿ ಮಾಲೆಯನ್ನು ಮಂತ್ರಗಳನ್ನು ಪಠಿಸಲು ಮಂಗಳಕರವೆಂದು ಪರಿಗಣಿಸಲಾಗಿದ್ದರೂ, ವಿವಿಧ ದೇವತೆಗಳ ಮಂತ್ರಗಳನ್ನು ಪಠಿಸುವಾಗ, ಅವುಗಳಿಗೆ ಸಂಬಂಧಿಸಿದ ಮಾಲೆಗಳನ್ನು ಬಳಸಿ. ರುದ್ರಾಕ್ಷದ ಜಪಮಾಲೆಯೊಂದಿಗೆ ಶಿವನ ಮಂತ್ರಗಳನ್ನು ಜಪಿಸುವಂತೆ, ಸ್ಫಟಿಕ ಅಥವಾ ಕಮಲಗಟ್ಟೆಯ ಮಾಲೆಯ ಜಪಮಾಲೆಯೊಂದಿಗೆ ಲಕ್ಷ್ಮಿ ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚಿನ  ಪ್ರಾಪ್ತಿಯಾಗುತ್ತದೆ.

>> ಜಪ ಮಾಡಲು ಸಾಮಾನ್ಯವಾಗಿ ಬೆಳಗಿನ ಸಮಯವೇ ಸೂಕ್ತ. ಅಂದಹಾಗೆ, ನೀವು ಸಂಜೆ ಕೂಡ ಮಂತ್ರವನ್ನು ಪಠಿಸಬಹುದು. ಆದರೆ ನೀವು ಮಂತ್ರವನ್ನು ಜಪಿಸಲು, ಪ್ರತಿದಿನ ಒಂದೇ ನಿರ್ಧಿಷ್ಟ ಸಮಯದಲ್ಲಿ ಮಾಡಿ ಮತ್ತು  ಮಂತ್ರವನ್ನು ಪಠಿಸುವ ಸ್ಥಳವನ್ನು ಬದಲಾಯಿಸದಿರಲು ಪ್ರಯತ್ನಿಸಿ.

>> ಮಂತ್ರವನ್ನು ಜಪಿಸುವಾಗ ಗೌಮುಖಿಯೊಳಗೆ ಮಾಲೆಯನ್ನು ಮುಚ್ಚಿ ಜಪ ಮಾಡುವುದು ಉತ್ತಮ.

>> ಮಂತ್ರವನ್ನು ಜಪಿಸುವಾಗ, ನೀವು ಯಾರ ಮಂತ್ರವನ್ನು ಜಪಿಸುತ್ತೀರೋ ಆ ದೇವತೆಗಳ ಚಿತ್ರವನ್ನು ನಿಮ್ಮ ಮನಸ್ಸಿನಲ್ಲಿ ಇರಿಸಿ.


ಇದನ್ನೂ ಓದಿ-Lucky Zodiac Signs: ಜೂನ್ 7 ರಂದು ಈ 4 ರಾಶಿಗಳ ಜನರಿಗೆ ಆಂಜನೇಯನ ವಿಶೇಷ ಕೃಪೆ ಪ್ರಾಪ್ತಿಯಗಲಿದೆ

>> ಯಾವುದೇ ಮಂತ್ರವನ್ನು ಜಪಿಸಿದರೂ ಅದರಲ್ಲಿ ಕನಿಷ್ಠ 1 ಜಪಮಾಲೆಯನ್ನು ಪ್ರತಿದಿನ ಅಂದರೆ 108 ಬಾರಿ ಜಪಿಸಬೇಕು. ಇದಕ್ಕಿಂತ ಹೆಚ್ಚು ಜಪ ಮಾಡುವುದು ಉತ್ತಮ.


ಇದನ್ನೂ ಓದಿ-Best Son by zodiac Sign: ಈ ಮೂರು ರಾಶಿಯ ಹುಡುಗರು ಅತ್ಯುತ್ತಮ ಪುತ್ರ ಮಾತ್ರವಲ್ಲ ಒಳ್ಳೆಯ ಅಳಿಯ ಕೂಡಾ

(ಹಕ್ಕುತ್ಯಾಗ-  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ