ಬೆಂಗಳೂರು : Best Son by zodiac Sign: ಪೋಷಕರ ದೃಷ್ಟಿಯಲ್ಲಿ ಉತ್ತಮ ಮಗ ಮತ್ತು ಅತ್ತೆಯ ದೃಷ್ಟಿಯಲ್ಲಿ ಉತ್ತಮ ಅಳಿಯ ಸ್ಥಾನಮಾನವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 3 ರಾಶಿಯ ಹುಡುಗರು ತುಂಬಾ ಒಳ್ಳೆಯ ಪುತ್ರರು ಮತ್ತು ಉತ್ತಮ ಅಳಿಯ ಎಂದು ಸಾಬೀತಾಗುತ್ತಾರೆಯಂತೆ. ಅವರು ತಮ್ಮ ಸ್ವಭಾವ ಮತ್ತು ಸೇವೆಯಿಂದ ತಮ್ಮ ಹೆತ್ತವರು ಮತ್ತು ಅತ್ತೆಯ ಹೃದಯವನ್ನು ಗೆಲ್ಲುತ್ತಾರೆ. ಕುಟುಂಬದ ಹಿರಿಯ ಸದಸ್ಯರಿಂದ ತುಂಬಾ ಪ್ರೀತಿಯನ್ನು ಪಡೆಯುವ ಈ ಹುಡುಗರು ಬಹಳ ಅದೃಷ್ಟವಂತರು ಎಂದೇ ಹೇಳಬಹುದು.
ಈ 3 ರಾಶಿಯ ಹುಡುಗರು ಅದೃಷ್ಟವಂತರು :
ವೃಷಭ ರಾಶಿ : ವೃಷಭ ರಾಶಿಯ ಜನರು ಬುದ್ಧಿವಂತರು, ಶ್ರಮಜೀವಿಗಳು ಮತ್ತು ಭಾವುಕರಾಗಿರುತ್ತಾರೆ. ಎದುರಿಗಿದ್ದವರು ದುಃಖ ಪಡುತ್ತಿದ್ದರೆ ಅದನ್ನು ನೋಡುವುದು ಇವರಿಗೆ ಸಾಧ್ಯವಾಗುವುದಿಲ್ಲ. ಈ ರಾಶಿಯವರು ತಮಗೆ ಸಂಬಂಧಿಸಿದ ಎಲ್ಲಾ ಸಂಬಂಧಗಳನ್ನು ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ತಂದೆ ತಾಯಿಯರ ಸೇವೆ ಮಾಡಲು ಹೇಗೆ ಸಿದ್ಧರಿರುತ್ತಾರೆಯೋ, ಅದೇ ರೀತಿ ಅತ್ತೆ ಮಾವನನ್ನು ಕೂಡಾ ಗೌರವದಿಂದ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ : ಈ ಎರಡು ರಾಶಿಯವರಿಗೆ ಶೀಘ್ರವೇ ಶುರುವಾಗಲಿದೆ ಎರಡೂವರೆ ವರ್ಷದ ಶನಿ ಕಾಟ
ಕರ್ಕ ರಾಶಿ : ಕರ್ಕಾಟಕ ರಾಶಿಯ ಪುರುಷರು ಬುದ್ಧಿವಂತರು, ಸುಸಂಸ್ಕೃತರು. ಅವರು ಹಿರಿಯರನ್ನು ಗೌರವಿಸುತ್ತಾರೆ ಮತ್ತು ಅವರ ಎಲ್ಲಾ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಈ ಗುಣಗಳಿಂದಾಗಿ ಕುಟುಂಬದವರೆಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ತಮ್ಮ ಹೆತ್ತವರ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ. ಮಾತ್ರವಲ್ ತಮ್ಮ ಅತ್ತೆ ಮಾನನನ್ನು ಕೂಡಾ ಆದರ, ಪ್ರೀತಿ ವಿಶ್ವಾಸಗಳಿಂದ ನೋಡಿಕೊಳ್ಳುತ್ತಾರೆ.
ಧನು ರಾಶಿ : ಧನು ರಾಶಿಯವರು ಶ್ರಮಜೀವಿಗಳು, ಪ್ರಾಮಾಣಿಕರು ಮತ್ತು ಮೃದು ಹೃದಯಿಗಳು. ಒಡಹುಟ್ಟಿದವರನ್ನು ಅತಿಯಾಗಿ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಸಾಮಾನ್ಯವಾಗಿ ಈ ರಾಶಿಯ ಗಂಡು ಮಕ್ಕಳು ತಮ್ಮ ಹೆತ್ತವರಿಗೆ ತುಂಬಾ ಪ್ರಿಯರಾಗಿರುತ್ತಾರೆ. ಮದುವೆಯ ನಂತರ, ತಮ್ಮ ಅತ್ತೆಯ ಹೃದಯವನ್ನು ಕೂಡಾ ಸುಲಭವಾಗಿ ಗೆಲ್ಲುತ್ತಾರೆ.
ಇದನ್ನೂ ಓದಿ : Planet Transit 2022: ಈ ರಾಶಿಯವರ ಅದೃಷ್ಟ ಬೆಳಗಲಿದ್ದಾರೆ ಬುಧ-ಶನಿ
( ಸೂಚನೆ : ಈ ಮೇಲಿನ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.