Sadesati Shani: ಜ್ಯೋತಿಷ್ಯದಲ್ಲಿ ಶನಿಯನ್ನು ಕರ್ಮ ಫಲದಾಯಕ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಶನಿಯು ಉಚ್ಚ ಸ್ಥಾನದಲ್ಲಿದ್ದರೆ ಎಲ್ಲದರಲ್ಲೂ ಯಶಸ್ಸು ಪ್ರಾಪ್ತಿಯಾಗಲಿದೆ. ಮತ್ತೊಂದೆಡೆ ಶನಿಯು ನೀಚ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಯು ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಸಾಡೇ ಸಾತಿ ಶನಿಯು ಹಲವು ಸಂದರ್ಭಗಳಲ್ಲಿ ಒಳ್ಳೆಯ ಫಲಗಳನ್ನು ನೀಡುತ್ತಾನೆ.  ಆದರೆ ಕೆಲವೊಮ್ಮೆ ಶನಿಯಿಂದ ಪ್ರಭಾವಿತವಾಗಿರುವ ರಾಶಿಚಕ್ರದ ಜನರಿಗೆ ಇದು ಹಾನಿಕಾರಕವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಾಡೇ ಸಾತಿ ಶನಿಯ ಪ್ರಭಾವ ಹೊಂದಿರುವವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022ರಲ್ಲಿ ಒಟ್ಟು 4 ರಾಶಿಗಳ ಮೇಲೆ ಶನಿಯ ಸಾಡೇಸಾತಿ ಪ್ರಭಾವ ಇರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ.


COMMERCIAL BREAK
SCROLL TO CONTINUE READING

ಧನು ರಾಶಿ (Sagittarius):
ಸಾಡೇ ಸಾತಿ ಶನಿಯ ಪ್ರಭಾವದಿಂದ (Sadesati Shani Effect) ನಿಮ್ಮ ಧೈರ್ಯ ಹೆಚ್ಚಾಗುತ್ತದೆ. 2022 ರಲ್ಲಿ, ಶನಿಯ ಕೃಪೆಯಿಂದ, ಅದೃಷ್ಟ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸ್ಪಷ್ಟವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕು. ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. 


ಇದನ್ನೂ ಓದಿ- Vastu Tips: ವ್ಯವಹಾರದಲ್ಲಿ ಪ್ರಗತಿ ಬಯಸಿದರೆ, ಈ 5 ವಿಶೇಷ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಿ


ಮಕರ ರಾಶಿ  (Capricorn):
ಶನಿಯು ಜಾತಕದ ಎರಡನೇ ಮನೆಗೆ ಪ್ರವೇಶಿಸುತ್ತಾನೆ. ಶನಿ ಸಾಡೇ ಸಾತಿ (Sadesati Shani) ಪ್ರಭಾವದಿಂದ ಆಸ್ತಿಯಲ್ಲಿ ಆರ್ಥಿಕ ಲಾಭವಾಗಲಿದೆ. ವಿದೇಶಿ ಕಂಪನಿಯಲ್ಲಿ ಲಾಭ ಇರುತ್ತದೆ. ಆದರೆ, ಸಾಡೇ ಸಾತಿ ಶನಿಯ ಅಶುಭ ಪ್ರಭಾವದಿಂದ ಅನಗತ್ಯ ಚಿಂತೆ ಇರುತ್ತದೆ. ಗೃಹ ವ್ಯವಹಾರಗಳಲ್ಲಿ  ಸಮಸ್ಯೆ ಹೆಚ್ಚಾಗಲಿದೆ. ನೀವು ಸಾಲದಿಂದ ತೊಂದರೆಗೊಳಗಾಗುತ್ತೀರಿ, ಆದರೆ ಸಾಡೇ ಸತಿಯ ಪರಿಣಾಮವು ಕಡಿಮೆಯಾಗುತ್ತಿದ್ದಂತೆ, ಚಿಂತೆ ದೂರವಾಗುತ್ತದೆ.  


ಕುಂಭ ರಾಶಿ (Aquarius):
ಶನಿಯು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ ಮತ್ತು ನಿಮ್ಮ ಜಾತಕದ ಮೊದಲ ಮನೆಗೆ ಬರುತ್ತಾನೆ. ಸಾಡೇ ಸಾತಿ ಶನಿಯ ಪ್ರಭಾವವು ರಾಜಯೋಗದಂತೆ ಸಂತೋಷವನ್ನು ನೀಡುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ಅಂತ್ಯ ಕಾಣಲಿವೆ. ದುಂದು ವೆಚ್ಚದಿಂದ ಮುಕ್ತಿ ಸಿಗುತ್ತದೆ. ಆದಾಗ್ಯೂ, ವೈವಾಹಿಕ ಜೀವನ ಮತ್ತು ಪ್ರೇಮ ಜೀವನದ ಬಗ್ಗೆ ಬಹಳ ಜಾಗರೂಕರಾಗಿರಬೇಕು.  


ಇದನ್ನೂ ಓದಿ- Mars Transit: ಡಿ. 5ಕ್ಕೆ ವೃಶ್ಚಿಕ ರಾಶಿ ಪ್ರವೇಶಿಸಲಿರುವ ಮಂಗಳ, ಯಾವ ರಾಶಿಯವರಿಗೆ ಶುಭ ಯಾರಿಗೆಅಶುಭ ?


ಮೀನ ರಾಶಿ (Pisces):
ಮೀನ ರಾಶಿಯವರಿಗೆ 2022 ರಲ್ಲಿ ಸಾಡೇ ಸಾತಿ ಶನಿಯ ಪ್ರಭಾವ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ವಿಶೇಷವಾಗಿ ಆರ್ಥಿಕ ವಿಷಯಗಳಲ್ಲಿ ವಿಚಾರಶೀಲ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರೇಮ ಮತ್ತು ವೈವಾಹಿಕ ಜೀವನದಲ್ಲಿ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ವರ್ತಿಸಬೇಕು. ಇದಲ್ಲದೆ, ನೀವು ಬಾಸ್‌ನೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕು. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.