Remedy Of Salt: `ರಾಹು`ವಿನ ಅಶುಭ ಪರಿಣಾಮವನ್ನು ಚಿಟಿಕೆಯಲ್ಲಿ ನಿವಾರಿಸುತ್ತದೆ `ಉಪ್ಪು`!
ಅಡುಗೆಮನೆಯಲ್ಲಿ ಉಪ್ಪನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದಲ್ಲಿ ಇದು ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿ ಎಂದು ಹೇಳಲಾಗಿದೆ. ವಾಸ್ತು ಪ್ರಕಾರ, ಉಪ್ಪಿನ ಪರಿಹಾರದಿಂದ ರಾಹು ದೋಷವೂ ನಿವಾರಣೆಯಾಗುತ್ತದೆ.
Remedy Of Salt: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು ಪಾಪ ಗ್ರಹ ಎಂದು ಪರಿಗಣಿಸಲಾಗಿದೆ. ಇದು ಮಾನವ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಇದು ವ್ಯಕ್ತಿಯ ಬುದ್ದಿಯನ್ನು ಹಾಳುಮಾಡುತ್ತದೆ, ಇದರಿಂದಾಗಿ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವೂ ಕೂಡ ವ್ಯಕ್ತಿಗೆ ಅರಿವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಂದಹಾಗೆ, ರಾಹುವಿನ ಅಶುಭ ಪರಿಣಾಮವನ್ನು ತೆಗೆದುಹಾಕಲು ಅನೇಕ ಪರಿಹಾರಗಳನ್ನು ನೀಡಲಾಗಿದೆ. ಆದರೆ ಉಪ್ಪಿನೊಂದಿಗೆ ರಾಹುವಿನ ಪ್ರಭಾವವನ್ನು ಕಡಿಮೆಗೊಳಿಸುವುದರ ಜೊತೆಗೆ ಮನೆಯ ವಾಸ್ತು ದೋಷಗಳೂ ಕೊನೆಗೊಳ್ಳುತ್ತವೆ ಎಂದು ಹೇಳಲಾಗುವುದು. ಹಾಗಿದ್ದರೆ ಉಪ್ಪಿನ ವಿಶೇಷ ವಾಸ್ತು ಪರಿಹಾರವನ್ನು ತಿಳಿಯಿರಿ.
ವಾಸ್ತು ಮತ್ತು ರಾಹು ದೋಷಕ್ಕೆ ಉಪ್ಪಿನ ಪರಿಹಾರಗಳು :
ಸ್ನಾನ ಮಾಡುವ ನೀರಿನಲ್ಲಿ ಚಿಟಿಕೆ ಉಪ್ಪು (Salt Remedies) ಬೆರೆಸಿ ಈ ನೀರಿನಿಂದ ಸ್ನಾನ ಮಾಡಿ. ಈ ಪರಿಹಾರವನ್ನು ಪ್ರತಿದಿನ ಮಾಡುವುದರಿಂದ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಅಲ್ಲದೆ, ಯಾವುದೇ ರೀತಿಯ ಮಾನಸಿಕ ತೊಂದರೆಗಳಿದ್ದರೆ, ಅವು ಸಹ ಕೊನೆಗೊಳ್ಳುತ್ತವೆ. ಇದಲ್ಲದೇ ಚಿಂತೆಯೂ ದೂರವಾಗುತ್ತದೆ. ಇದರೊಂದಿಗೆ ರಾಹುದೋಷವೂ ಪರಿಹಾರವಾಗುತ್ತದೆ.
ಇದನ್ನೂ ಓದಿ- Shani Rashi Parivartan: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿಯ ಪ್ರವೇಶ, ಈ 4 ರಾಶಿಯವರ ಮೇಲೆ ಕೆಟ್ಟ ಪರಿಣಾಮ
ದೀರ್ಘಕಾಲದ ಅನಾರೋಗ್ಯದಿಂದ ಪಾರಾಗಲು:
ಮನೆಯಲ್ಲಿ ಯಾರಾದರೂ ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಚಿಕಿತ್ಸೆಯ ನಂತರವೂ ಹೆಚ್ಚಿನ ಪ್ರಯೋಜನವನ್ನು ಪಡೆಯದಿದ್ದರೆ, ನಂತರ ಅವರು ಮಲಗುವ ಸ್ಥಳದಲ್ಲಿ ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ಹಾಕಿಡಿ. ಪ್ರತಿ ವಾರ ಉಪ್ಪನ್ನು ಬದಲಾಯಿಸುತ್ತಿರಿ. ಉಪ್ಪಿನ ಈ ಪರಿಹಾರವನ್ನು (Salt Remedies For Vastu Dosh) ಕೆಲವು ವಾರಗಳವರೆಗೆ ನಿರಂತರವಾಗಿ ಮಾಡಬೇಕು. ಇದು ಪರಿಸ್ಥಿತಿಯನ್ನು ಸುಧಾರಿಸುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ- RISK TAKERS: ಈ ರಾಶಿಚಕ್ರದವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ
ಕೌಟುಂಬಿಕ ವಿವಾದಗಳನ್ನು ಬಗೆಹರಿಸಲು :
ಮನೆಯಲ್ಲಿ ನಿರಂತರ ಜಗಳಗಳು ನಡೆಯುತ್ತಿದ್ದರೆ ಅಥವಾ ಪರಸ್ಪರ ವೈಮನಸ್ಯ ಇದ್ದರೆ ಅದನ್ನು ಹೋಗಲಾಡಿಸಲು ಉಪ್ಪಿನ ಮದ್ದು ವಿಶೇಷ. ಇದಕ್ಕಾಗಿ ಒಂದು ಹಿಡಿ ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ. ಅದನ್ನು ಮನೆಯ ಮುಖ್ಯ ಬಾಗಿಲಿನ ಹೊರಗೆ ತೂಗು ಹಾಕಿ. ಅಲ್ಲದೆ, ಪ್ರತಿ ಶನಿವಾರ ಮನೆ ಒರೆಸುವ ಮೊದಲು, ನೀರಿನಲ್ಲಿ ಒಂದು ಚಿಟಿಕೆ ಉಪ್ಪು ಹಾಕಿ. ಯಾವುದೇ ರೀತಿಯ ಮಾನಸಿಕ ಸಮಸ್ಯೆ ಅಥವಾ ನಿದ್ರಾಹೀನತೆಯ ಸಮಸ್ಯೆ ಇದ್ದರೆ. ಇದನ್ನು ತೆಗೆದುಹಾಕಲು, ನೀರಿನಲ್ಲಿ ಚಿಟಿಕೆ ಉಪ್ಪು ಸೇರಿಸಿ ಮತ್ತು ಆ ನೀರಿನಿಂದ ಕೈಕಾಲುಗಳನ್ನು ತೊಳೆಯಿರಿ. ಈ ರೀತಿ ಮಾದುವುದರಿಂದ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ