ಬೆಂಗಳೂರು : ಜ. 31 ರಂದು ಸಂಕಷ್ಟಿ ಚತುರ್ಥಿ (Sankashti Chaturthi 2021).  ಸಂಕಷ್ಟಿ ಚತುರ್ಥಿಗೆ ಧರ್ಮ ಪರಂಪರೆಯಲ್ಲಿ ವಿಶೇಷ ಮಹತ್ವ (Sankashti Chaturthi Significance)  ಇದೆ.  ಸಂಕಷ್ಟಿ ಚತುರ್ಥಿ ದಿನ  ಭಗವಾನ್  ಶ್ರೀಗಣೇಶಗೆ ವಿಶೇಷ ಪೂಜೆ ಮಾಡಲಾಗುತ್ತದೆ.  ಗಣೇಶನನ್ನು ಪ್ರಾರ್ಥಿಸಿ ಮಹಿಳೆಯರು ವ್ರತ  ಕೈಗೊಳ್ಳುತ್ತಾರೆ.  


COMMERCIAL BREAK
SCROLL TO CONTINUE READING

ಸಂಕಷ್ಟಿ ಚತುರ್ಥಿಯ ಫಲ  ಏನು..?
1. ಸಂಕಷ್ಟಿ ಚತುರ್ಥಿಯ ದಿನ ದೃಢ ನಿಷ್ಠೆಯಿಂದ ಗಣಪತಿಯನ್ನು (Lord Ganesha) ಪ್ರಾರ್ಥಿಸಿದರೆ ಎಲ್ಲಾ ಸಂಕಷ್ಟ ದೂರವಾಗುತ್ತದೆ. 
2. ಸಂತಾನ ದೀರ್ಘಾಯುವಾಗುತ್ತದೆ.  
3. ಮಕ್ಕಳು ರೋಗ ರಹಿತರಾಗಿ ಆರೋಗ್ಯವಂತರಾಗುತ್ತಾರೆ.


ಇದನ್ನೂ ಓದಿ Astrology : ದಿಢೀರ್ ಧನ ಕನಕ ವಸ್ತು ವಾಹನ ತರುವುದು ಗಜಕೇಸರಿ ಯೋಗ..! ನಿಮ್ಮ ಜಾತಕದಲ್ಲಿದೆಯಾ..?


ಸಂಕಷ್ಟಿ ಚತುರ್ಥಿಯ ಶುಭ ಮುಹೂರ್ತವೇನು..? ವ್ರತ ವಿಧಿ ಯಾವುದು..?.
ಸಂಕಷ್ಟಿ ಚತುರ್ಥಿಯ ಶುಭ ಮುಹೂರ್ತ ಹೀಗಿದೆ 
ವ್ರತದ ಮುಹೂರ್ತ - 31 ಜನವರಿ 2021 (ಭಾನುವಾರ) Sunday
ಚಂದ್ರೋದಯ ಸಮಯ - ರಾತ್ರಿ 20:40
ಆರಂಭ - ಜನವರಿ 31, ಭಾನುವಾರ 20:25 ಕ್ಕೆ
ಅಂತ್ಯ  - 01 ಫೆಬ್ರವರಿ 2021, ಸೋಮವಾರ 18:23 ಕ್ಕೆ


ಸಂಕಷ್ಟಿ ಚತುರ್ಥಿ ವ್ರತ ಹೇಗೆ ಮಾಡಬೇಕು.. 
1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಸ್ವಚ್ಛ ಬಟ್ಟೆಗಳನ್ನು ಧರಿಸಿ.
2. ಗಣೇಶನಿಗೆ ಪವಿತ್ರ ನೀರಿನಿಂದ ಅಭಿಷೇಕ ಮಾಡಿ.
3.  ನಂತರ ಗಣೇಶನನ್ನು ಪೂಜಿಸಿ.
4. ಸೂರ್ಯಾಸ್ತದ (Sunset) ನಂತರ ಸ್ನಾನ ಮಾಡಿ ಮತ್ತು ಸ್ವಚ್ಛ ಬಟ್ಟೆಗಳನ್ನು ಧರಿಸಿ.
5. ಗಣೇಶನ ವಿಗ್ರಹದ ಮುಂದೆ ಕಳಸ ಪ್ರತಿಷ್ಠಾಪನೆ ಮಾಡಿ
6. ಅದರ ನಂತರ, ಗಣೇಶನಿಗೆ (Lord Ganesha Puja) ಧೂಪ ದೀಪ, ನೈವೇದ್ಯ, ಎಳ್ಳು, ಲಡ್ಡು,  ಗೆಣಸು, ಪೇರಲ ಮತ್ತು ಬೆಲ್ಲವನ್ನು ಅರ್ಪಿಸಿ.


ಇದನ್ನೂ ಓದಿ : Vastu Tips: ವ್ಯಾಲೆಟ್ ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ, ಆರ್ಥಿಕ ಪ್ರಗತಿ ನಿಂತುಹೋಗುತ್ತದೆ


ಸಂಕಷ್ಟಿ ಚತುರ್ಥಿಯಂದು ಚಂದ್ರನಿಗೆ ಅರ್ಘ್ಯ  ಅರ್ಪಿಸುವ ವಿಧಾನ :
ಚಂದ್ರನಿಗೆ ಅರ್ಘ್ಯ ಅರ್ಪಿಸುವ ಮೂಲಕ ಸಂಕಷ್ಟ ಚತುರ್ಥಿಯ (Sankashti Chaturthi)  ಉಪವಾಸ ಕೊನೆಗೊಳ್ಳುತ್ತದೆ.  ಇದರಿಂದಲೇ ಉಪವಾಸ ಸಫಲವಾಗುತ್ತದೆ. ಚಂದಿರನಿಗೆ ಅರ್ಘ್ಯ ಕೊಡುವಾಗ ಜೇನುತುಪ್ಪ, ಶ್ರೀಗಂಧ, ಹಾಲು ಅರ್ಪಿಸಬೇಕು.  ಅರ್ಘ್ಯ ಅರ್ಪಿಸಿದ ಬಳಿಕ ಆಹಾರ ಸೇವಿಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.