ನವದೆಹಲಿ: Saturday Born Child - ಜೋತಿಷ್ಯ ಶಾಸ್ತ್ರ (Astrology)ಪ್ರಕಾರ ವ್ಯಕ್ತಿ ಜನಿಸಿದ ದಿನಕ್ಕೆ ಅನುಗುಣವಾಗಿ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಶನಿವಾರ ಜನಿಸಿದ ವ್ಯಕ್ತಿಗಳ ಕುರಿತು ಮಾಹಿತಿ ನೀಡಲಿದ್ದೇವೆ. ಶನಿವಾರ ಜನಿಸಿದ ವ್ಯಕ್ತಿಗಳ ಮೇಲೆ ಶನಿ ದೇವನ ವಿಶೇಷ ಪ್ರಭಾವ ಇರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿವಾರ (Saturday), ಶನಿದೇವನಿಗೆ ಸಮರ್ಪಿತ ದಿನವಾಗಿದೆ. ಈ ಕಾರಣದಿಂದ ಶನಿದೇವನ ಪ್ರಭಾವ ವ್ಯಕ್ತಿಗಳ ಮೇಲೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಜೀವನ ಏರಿಳಿತಗಳಿಂದ ಕೂಡಿರುತ್ತದೆ
ಜೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ ಶನಿವಾರ ಜನಿಸಿದ ವ್ಯಕ್ತಿಗಳ ಜೀವನ ಏರಿಳಿತದಿಂದ ಕೂಡಿರುತ್ತದೆ. ಈ ವ್ಯಕ್ತಿಗಳ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಕೊನೆಗೆ ಇವರು ಗೆದ್ದೇಗೆಲ್ಲುತ್ತಾರೆ.


ಇದನ್ನೂ ಓದಿ-Vastu Tips: ಬೇಗ ಕಂಕಣ ಬಲ ಕೂಡಿ ಬರಲು ಮಲಗುವಾಗ ಈ ದಿಕ್ಕಿನೆಡೆ ತಲೆ ಇಟ್ಟು ಮಲಗಿ


ಇವರಿಗೆ ಕ್ರೋಧ ಹೆಚ್ಚಾಗಿರುತ್ತದೆ (Saturday Born Child)
ಶನಿವಾರ ಜನಿಸಿದ ಜನರು ಹೆಚ್ಚು ಕೋಪಿಷ್ಠರಾಗಿರುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇವರ ಕೋಪ ಮೂಗಿನ ಮೇಲಿರುತ್ತದೆ.


ಪರಿಶ್ರಮ ಜೀವಿಗಳಗಿರುತ್ತಾರೆ 
ಶನಿವಾರ ಜನಿಸಿದ ಜನರು ಪರಿಶ್ರಮ ಜೀವಿಗಳಾಗಿರುತ್ತಾರೆ. ತಮ್ಮ ಪರಿಶ್ರಮದಿಂದ ಇವರು ಯಶಸ್ಸನ್ನು ಸಾಧಿಸುತ್ತಾರೆ. 


ಶನಿದೇವನ ಕೃಪೆ (Shani Dev Blessings)
ಶನಿವಾರ ಜನಿಸಿದ ಜನರ ಮೇಲೆ ಶನಿದೇವನ (Shani Dev) ವಿಶೇಷ ಕೃಪೆ ಇರುತ್ತದೆ. ಇವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ, ಇವರ ಮೇಲೆ ಶನಿದೇವನ ವಿಶೇಷ ಕೃಪೆ ಇರುವುದರಿಂದ ಇವರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪಾರಾಗುತ್ತಾರೆ.


ಇದನ್ನೂ ಓದಿ- ಸಂಬಂಧಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರಂತೆ ಈ ನಾಲ್ಕು ರಾಶಿಯ ಜನರು


ಎಲ್ಲಾ ಕಾರ್ಯಗಳನ್ನು ಸಂಪೂರ್ಣ ಶ್ರದ್ಧೆಯಿಂದ ನಿರ್ವಹಿಸುತ್ತಾರೆ
ಶನಿವಾರ ಜನಿಸಿದ ಜನರು ಯಾವುದೇ ಕೆಲಸ ಮಾಡಿದರು ಕೂಡ ಅದನ್ನು ಸಂಪೂರ್ಣ ಶ್ರದ್ಧೆ ಹಾಗೂ ನಿಷ್ಠೆಯಿಂದ ಪೂರ್ಣಗೊಳಿಸುತ್ತಾರೆ. ಈ ಜನರ ಕೆಲಸ ಯಾವಾಗಲು ಉತ್ತಮ ಗುಣಮಟ್ಟದ್ದಾಗಿರುತ್ತದೆ.


ಇತರರಿಗೆ ಸಹಾಯ ಮಾಡುವ ಜೀವಿಗಳು (Astrology Predictions)
ಶನಿವಾರ ಹುಟ್ಟಿದವರು ಪರ ಸಹಾಯ ಮೆರೆಯುವಂತರಾಗಿರುತ್ತಾರೆ. ಯಾರಿಗಾದರೂ ಕೂಡ ಸಹಾಯ ಮಾಡುವಲ್ಲಿ ಇವರು ಯಾವತ್ತು ಮುಂದು. ದಾನ-ಪುಣ್ಯ ಕಾರ್ಯಗಳನ್ನು ಮಾಡುವಲ್ಲಿ ಇವರು ಯಾವತ್ತು ಮುಂದಿರುತ್ತಾರೆ.


ಇವರ ಜೀವನದ ಆರಂಭದ ದಿನಗಳು ಕಷ್ಟದಿಂದ ಕೂಡಿರುತ್ತದೆ
ಶನಿವಾರ ಹುಟ್ಟಿದ ಜನರು ತಮ್ಮ ಜೀವನದ ಆರಂಭದ ದಿನಗಳಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಆದರೆ, ನಂತರ ಇವರ ಜೀವನ ಖುಷಿಯಿಂದ ತುಂಬಿರುತ್ತದೆ.


ಇದನ್ನೂ ಓದಿ-Vastu Tips : ಪೊರಕೆ ವಿಚಾರದಲ್ಲಿ ಈ ತಪ್ಪು ಆಗದಿರಲಿ ; ಹಣಕಾಸಿನ ಸಮಸ್ಯೆ ಎದುರಾಗಬಹುದು


(ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಝೀ ಹಿಂದೂಸ್ಥಾನ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿ ಸಂಪೂರ್ಣ ನಂಬಿಕೆಗಳನ್ನು ಆಧರಿಸಿ ಬರೆಯಲಾಗಿದೆ. ಯಾವುದೇ ಮಾಹಿತಿಯನ್ನು ಅನುಸರಿಸುವ ಮುನ್ನ, ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.)


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.