ಸಂಬಂಧಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರಂತೆ ಈ ನಾಲ್ಕು ರಾಶಿಯ ಜನರು

ಕೆಲವು ರಾಶಿಚಕ್ರದ  ಜನರು ಸಂಬಂಧವನ್ನು ಕಾಪಾಡಿಕೊಳ್ಳಲು ಏನು ಬೇಕಾದರೂ ಮಾಡುತ್ತಾರಂತೆ, ಅಂದರೆ ಸಂಬಂಧಗಳಿಗೆ ಅತಿಯಾಗಿ ಬೆಲೆ ಕೊಡುತ್ತಾರಂತೆ. ಹಾಗಿದ್ದರೆ ದೀರ್ಘಾವಧಿಯ ಸಂಬಂಧಕ್ಕೆ ಯಾವ ರಾಶಿಚಕ್ರ ಒಳ್ಳೆಯದು ಎಂದು  ಕೇಳಿದರೆ ಉತ್ತರ ಇಲ್ಲಿದೆ. 

Written by - Ranjitha R K | Last Updated : Jun 9, 2021, 03:28 PM IST
  • ಈ 4 ರಾಶಿಗಳ ಜನರು ದೀರ್ಘ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ
  • ವೃಷಭ ರಾಶಿಯವರಿಗೆ ಸಂಬಂಧಗಳಲ್ಲಿ ನಂಬಿಕೆ ಮುಖ್ಯ
  • ಕಟಕ ರಾಶಿಯ ಜನರು ಭಾವನಾತ್ಮಕರು
ಸಂಬಂಧಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರಂತೆ ಈ ನಾಲ್ಕು ರಾಶಿಯ ಜನರು title=
ಈ 4 ರಾಶಿಗಳ ಜನರು ದೀರ್ಘ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ (file photo)

ನವದೆಹಲಿ : ಪ್ರತಿ ರಾಶಿಚಕ್ರದ ಜನರು ತಮ್ಮದೇ ಆದ ವಿಶೇಷ ಸ್ವರೂಪವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ಕೆಲವು ವಿಶೇಷ ಗುಣಗಳಿರುತ್ತವೆ. ಕೆಲ ನ್ಯೂನತೆಗಳಿರುತ್ತವೆ. ವಿಭಿನ್ನ ರಾಶಿಚಕ್ರ ಚಿಹ್ನೆಗಳ (Zodia sign) ಜನರು ಸಂಬಂಧವನ್ನು ಕಾಪಾಡಿಕೊಳ್ಳುವ ಬಗ್ಗೆ ವಿಭಿನ್ನ ವರ್ತನೆಗಳನ್ನು ಹೊಂದಿರುತ್ತಾರೆ. ಕೆಲವು ರಾಶಿಚಕ್ರದ  ಜನರು ಸಂಬಂಧವನ್ನು ಕಾಪಾಡಿಕೊಳ್ಳಲು ಏನು ಬೇಕಾದರೂ ಮಾಡುತ್ತಾರಂತೆ, ಅಂದರೆ ಸಂಬಂಧಗಳಿಗೆ ಅತಿಯಾಗಿ ಬೆಲೆ ಕೊಡುತ್ತಾರಂತೆ. ಹಾಗಿದ್ದರೆ ದೀರ್ಘಾವಧಿಯ ಸಂಬಂಧಕ್ಕೆ (Long term relationship)  ಯಾವ ರಾಶಿಚಕ್ರ ಒಳ್ಳೆಯದು ಎಂದು  ಕೇಳಿದರೆ ಉತ್ತರ ಇಲ್ಲಿದೆ. 

ಈ ರಾಶಿಯವರು ಏನೇ ಆದರೂ ಸಂಬಂಧವನ್ನು ತೊರೆಯುವುದಿಲ್ಲ :

ವೃಷಭ ರಾಶಿ :
ವೃಷಭ ರಾಶಿಚಕ್ರದವರು (Taurus) ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಈ ರಾಶಿಯ ಜನರು ಜೀವನದುದ್ದಕ್ಕೂ ಏನೇ ಆದರೂ ಜೊತೆಯಾಗಿಯೇ ಇರುವ ಸಂಗಾತಿಯನ್ನು ಹೊಂದಲು ಬಯಸುತ್ತಾರೆ. ಹಾಗೆಯೇ ವೃಷಭ ರಾಶಿಯವರು (Vrishabha Rashi.)ಸಂಬಂಧ ನಿಭಾಯಿಸುವುದರಲ್ಲಿಯೂ ಎಲ್ಲರನ್ನೂ ಮೀರಿಸಿ ಬಿಡುತ್ತಾರೆ. ಈ ರಾಶಿಯವರು ಸಂಬಂಧದಲ್ಲಿನ ಪ್ರೀತಿ, ವಿಶ್ವಾಸ , ಗೌರವಕ್ಕೆ ಬಹಳವಾಗಿ ಬೆಲೆ ಕೊಡುತ್ತಾರೆ. ಯಾವಾಗಲೂ ದೀರ್ಘಕಾಲದ ಸಂಬಂಧದ (Long term relation) ಮೇಲೆ ಇವರಿಗೆ ನಂಬಿಕೆ ಇರುತ್ತದೆ. 

ಇದನ್ನೂ ಓದಿ : Solar Eclipse 2021 : ಈ ಸೂರ್ಯಗ್ರಹಣದಂದು ಬಾನಿನಲ್ಲಿ ಕಾಣಿಸಲಿದೆ `ವಜ್ರದುಂಗುರ'..!

ಕಟಕ :
ಕಟಕ ರಾಶಿಯವರು (Cancer) ಭಾವನಾತ್ಮಕರು. ಅವರು ಅಲ್ಪಾವಧಿಯ ಅಥವಾ ಪ್ರಾಸಂಗಿಕ ಸಂಬಂಧಗಳನ್ನು ಹೊಂದಲು ಬಯಸುವುದಿಲ್ಲ.ಕಟಕ  ರಾಶಿಯವರು (Kataka Rashi) ಯಾವಾಗಲೂ  ಅವರು ಸುರಕ್ಷಿತ ಮತ್ತು ದೀರ್ಘಕಾಲ ಉಳಿಯುವಂತಹ ಸಂಬಂಧಗಳನ್ನು ಮಾತ್ರ ಇಷ್ಟಪಡುತ್ತಾರೆ. 

ವೃಶ್ಚಿಕ :
ವೃಶ್ಚಿಕ ರಾಶಿಯ (Scorpio) ಜನ ಇಂಟೆಂಟ್ ಮತ್ತು ಪಾಶನೆಟ್ ಆಗಿರುತ್ತಾರೆ. ಅವರು ಇಂಥದ್ದೇ ಗುಣ ಹೊಂದಿರುವವರ ಜೊತೆ ಸಂಬಂಧ ಬೆಳೆಸಲು ಇಷ್ಟ ಪಡುತ್ತಾರೆ. ಅಲ್ಲದೆ ಭವಿಷ್ಯದಲ್ಲಿ ತಮ್ಮೊಂದಿಗೆ ದೀರ್ಘಕಾಲದವರೆಗೆ ತಮ್ಮೊಂದಿಗೆ ಉಳಿಯುತ್ತಾರೆ ಎಂದು ಖಾತ್ರಿಯಾದ ಬಳಿಕವೇ ಸಂಬಂಧದ ಬಗ್ಗೆ ಯೋಚಿಸುತ್ತಾರೆ. ಅಲ್ಲೆ ಏನೇ ಸಂದರ್ಭ ಬಂದರೂ ಸಂಬಂಧವನ್ನು ಉಳಿಸಿಕೊಳ್ಳುವ ಸರ್ವ ಪ್ರಯತ್ನವನ್ನೂ ಮಾಡುತ್ತಾರೆ. 

ಇದನ್ನೂ ಓದಿ : Vastu Tips : ಪೊರಕೆ ವಿಚಾರದಲ್ಲಿ ಈ ತಪ್ಪು ಆಗದಿರಲಿ ; ಹಣಕಾಸಿನ ಸಮಸ್ಯೆ ಎದುರಾಗಬಹುದು

ಮಕರ :
ಮಕರ ರಾಶಿವರ (Capricorn) ಸುಲಭವಾಗಿ ಯಾರನ್ನೂಈ ಪ್ರೀತಿಸುವುದಿಲ್ಲ. ಅವರೊಂದಿಗೆ ಉತ್ತಮ ಭವಿಷ್ಯವನ್ನು ಹೊಂದಬಹುದು ಎಂಬ ವಿಶ್ವಾಸ ಬರುವವರೆಗೂ ಈ ರಾಶಿಯ (Makara Rashi) ಜನ ಸ್ನೇಹ ಮಾಡುವುದೇ ಇಲ್ಲ. ಸಂಬಂಧಗಳಿಗೆ ಇವರ ಜೀವನದಲ್ಲಿ ಮೊದಲ ಆದ್ಯತೆ.  ತಮ್ಮ ಸಂಗಾತಿಯ ಬಗ್ಗೆ ಮೊದಲೇ ಎಲ್ಲಾ ವಿಚಾರಗಳನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News