ನವದೆಹಲಿ: Saturday Remedies - ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ದಿನ ಮತ್ತು ತಿಥಿ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿದೇವ  (Shani Dev) ಅತಿ ಬೇಗ ಮುನಿಸಿಕೊಳ್ಳುತ್ತಾರೆ ಎನ್ನಲಾಗುತ್ತದೆ ಹಾಗೂ ವಾರದ ಈ ದಿನ ಶನಿದೇವ ಮುನಿಸಿ ಕೊಳ್ಳುವ ಯಾವುದೇ ಕೆಲಸ ಮಾಡಬಾರದು ಎಂದು ಹೇಳಲಾಗಿದೆ. ಮನೆಯಲ್ಲಿ ಸುಖ-ಶಾಂತಿ ಬಯಸುತ್ತಿದ್ದರೆ, ಶನಿವಾರ ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಆವಶ್ಯಕ.


COMMERCIAL BREAK
SCROLL TO CONTINUE READING

ಶನಿವಾರ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ (What Not To Do On Saturday)
ಬಹುತೇಕ ಜನರಿಗೆ ಶನಿವಾರ ರಜಾದಿನ ಇರುತ್ತದೆ. ಹೀಗಾಗಿ ಅವರು ಶಾಪಿಂಗ್ ಮಾಡಲು ಹಾಗೂ ತಿರುಗಾಡಲು ಶನಿವಾರವನ್ನು ಕಾಯ್ದಿರಿಸುತ್ತಾರೆ. ಆದರೆ, ಹಿಂದೂ ಧರ್ಮದಲ್ಲಿ ಶನಿವಾರಕ್ಕಾಗಿ ಕೆಲ ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳ ಪ್ರಕಾರ ಶನಿವಾರದ ದಿನ ಕೆಲ ವಸ್ತುಗಳನ್ನು ಖರೀದಿಸಬಾರದು ಮತ್ತು ಕೆಲ ಕೆಲಸಗಳನ್ನು ಮಾಡುವುದರಿಂದ ದೂರವಿರಬೇಕು.


ಇದನ್ನೂ ಓದಿ-Money Plant Vastu Tips : ಮನೆಯಲ್ಲಿ ಮನಿ ಪ್ಲಾಂಟ್ ಹಾಕಿದ್ದರೆ ಈ ನಿಯಮಗಳು ತಿಳಿದಿರಲಿ , ಇಲ್ಲವಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು


ಶನಿವಾರ ಏನನ್ನು ಖರೀದಿಸಬಾರದು?
ಶನಿವಾರ ಕಬ್ಬಿಣ, ಲೋಹದಿಂದ ತಯಾರಿಸಿದ ವಸ್ತುಗಳು, ಉಪ್ಪು, ಕರಿ ಎಳ್ಳು, ಸಾಸಿವೆ ಎಣ್ಣೆ, ಕರಿ ಚಪ್ಪಲಿ ಇತ್ಯಾದಿಗಳನ್ನು ಖರೀದಿಸಬಾರದು. ಈ ದಿನ ಉಪ್ಪು ಖರೀದಿಸುವುದರಿಂದ ಸಾಲದ ಹೊರೆ ಹೆಚ್ಚಾಗುತ್ತದೆ. ಕರಿ ಎಳ್ಳು ಅಥವಾ ಕರಿ ಚಪ್ಪಲಿ ಖರೀದಿಸುವುದರಿಂದ ಆಗುವ ಕೆಲಸಗಳು ನಿಂತು ಹೋಗುತ್ತವೆ. ಶನಿವಾರ ಬಟ್ಟೆಗಳನ್ನು ಕೂಡ ಖರೀದಿಸಬಾರದು (What Not To Buy On Saturday).


ಇದನ್ನೂ ಓದಿ-Kitchen Spices Vastu Tips: ಜಾತಕದಲ್ಲಿನ ಗ್ರಹ ದೋಷಗಳನ್ನು ನಿವಾರಿಸುತ್ತಂತೆ ಈ ಮಸಾಲೆಗಳು


ಶನಿವಾರ ಈ ಕೆಲಸಗಳನ್ನು ಮಾಡಬಾರದು
ಶನಿವಾರ ಉಗುರು ಹಾಗೂ ಕೂದಲುಗಳನ್ನು ಕತ್ತರಿಸಬಾರದು. ಜೊತೆಗೆ ಕೆಂಪು ಬಣ್ಣದ ಆಹಾರ ಪದಾರ್ಥಗಳ ಸೇವನೆಯಿಂದ ಕೂಡ ದೂರ ಇರಬೇಕು. ಈ ದಿನ ಉಪ್ಪು, ಪೊರಕೆ ಹಾಗೂ ಬಟ್ಟೆಗಳನ್ನು ದಾನವಾಗಿ ನೀಡಬಾರದು. ವಿನಾಕಾರಣ ಯಾರೊಂದಿಗೂ ಕೂಡ ಜಗಳ ಕಾಯಬೇಡಿ.


ಇದನ್ನೂ ಓದಿ-Crying Benefits: ಅಳುವುದರಿಂದ ಸಿಗುವ ಪ್ರಯೋಜನ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ