ಬೆಂಗಳೂರು : ಶನಿದೇವನನ್ನು (Shanidev) ಕರ್ಮ ಫಲದಾತ ಎಂದು ಕರೆಯುತ್ತಾರೆ. ಶನಿವಾರದ (saturday) ದಿನ ಶನಿದೇವನಿಗೆ ಅರ್ಪಿತ . ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಒಳ್ಳೆಯದು ಮಾಡಿದ್ದರೆ ಒಳ್ಳೆಯದು, ಕೆಟ್ಟದ್ದು ಮಾಡಿದರೆ ಕೆಟ್ಟ ಫಲ ಎನ್ನುವುದು ಶನಿ ಮಹಾತ್ಮನ ನ್ಯಾಯ. ಶನಿ ದೇವನ ವಕ್ರ ದೃಷ್ಟಿ ಬಿದ್ದರೆ ಆ ವ್ಯಕ್ತಿಯ ಜೀವನ ನರಕ ಎಂದು ಹೇಳಲಾಗುತ್ತದೆ. ಏಳುವರೆ ವರ್ಷದ ಶನಿ ಅಥವಾ ಸಾಡೇ ಸಾತ್ (saade saath) ಯೋಗ ಪ್ರತಿಯೊಬ್ಬನ ಜೀವನದಲ್ಲೂ ಬರುತ್ತದೆ. ಈ ಯೋಗದ ಫಲವು ವ್ಯಕ್ತಿಯ ಕರ್ಮದ ಮೇಲೆ ನಿರ್ಧಾರವಾಗುತ್ತದೆ ಎನ್ನುತ್ತಾರೆ.
ಒಂದು ರಾಶಿಯಲ್ಲಿ ಶನಿ ದೇವರು (Shanidev) ಎರಡುವರೆ ವರ್ಷಗಳವರೆಗೆ ಇರುತ್ತಾರೆ ಎನ್ನಲಾಗಿದೆ. ನಂತರ ೩೦ ವರ್ಷಗಳ ನಂತರ ಮತ್ತೆ ಆ ರಾಶಿಗೆ (Rashi) ಪ್ರವೇಶ ಮಾಡುತ್ತಾರೆ. ಶನಿ ದೆಸೆ ಅಂದ ಕೂಡಲೇ ಸಾಮಾನ್ಯವಾಗಿ ಒಂದು ಭಯ ಆತಂಕ ಇದ್ದೇ ಇರುತ್ತದೆ. ಆದರೆ ಕೆಲವು ಪರಿಹಾರಗಳನ್ನು ಮಾಡಿಕೊಂಡರೆ ಭಯ ಪಡುವ ಅಗತ್ಯವಿರುವುದಿಲ್ಲ. ಅಂಥಹ ಪರಿಹಾರವನ್ನು ನಾವಿಲ್ಲಿ ಹೇಳುತ್ತೇವೆ.
ಇದನ್ನೂ ಓದಿ : Holi 2021: ಹೋಳಿಯಲ್ಲಿ ಆಂಜನೇಯನನ್ನು ಈ ರೀತಿ ಪೂಜಿಸಿ ನಿಮ್ಮ ಸಮಸ್ಯೆ ನಿವಾರಿಸಿ
ಶನಿದೇವನಿಗೆ ಎಕ್ಕದ ಹೂವು ಅಂದರೆ ಅತ್ಯಂತ ಇಷ್ಟವಂತೆ. ಶನಿ ದೇವರ ಕೃಪೆಗೆ ಪಾತ್ರರಾಗಬೇಕಾದರೆ ಎಕ್ಕದ ಹೂವನ್ನು ಶನಿ ದೇವರಿಗೆ ಅರ್ಪಿಸಬೇಕು. ಅಲ್ಲದೆ, ಎಳ್ಳೆಣ್ಣೆಯನ್ನು (Sesame oil) ಶನಿ ದೇವರಿಗೆ ಅರ್ಪಿಸಿದರೆ ಶನಿ ದೇವರು ಪ್ರಸನ್ನನಾಗುತ್ತಾನೆ. ಹಾಗೆಯೇ ಶನಿವಾರ (Saturday)ಇಡೀ ಬೇಳೆಯನ್ನು ಮತ್ತು ಎಳ್ಳನ್ನು ದಾನ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ ಎನ್ನುತ್ತಾರೆ. ಎಕ್ಕದ ಹೂವು ಅಂದರೆ ಈಶ್ವರನಿಗೂ (Lord Shiva) ಬಹಳ ಪ್ರಿಯವಾದದ್ದು..
ಆಂಜನೇಯ ಸ್ವಾಮಿ (Hanuman)ಕೂಡಾ ಶನಿ ದೇವರಿಗೆ ಅತ್ಯಂತ ಪ್ರಿಯವಾದವರು ಎನ್ನಲಾಗುತ್ತದೆ. ಹಾಗಾಗಿ ಯಾರು ಶನಿವಾರದಂದು ಆಂಜನೇಯ ಸ್ವಾಮಿ ಮತ್ತು ಈಶ್ವರ ಪೂಜೆ ಮಾಡುತ್ತಾರೋ ಅವರು ಶನಿ ಮಹಾತ್ಮನ ವಕ್ರ ದೃಷ್ಟಿಯಿಂದ ಬಚಾವಾಗಬಹುದಂತೆ.
ಇದನ್ನೂ ಓದಿ : Holi 2021: ರಾಶಿಗನುಗುಣವಾಗಿ ಯಾವ ರಾಶಿಯವರಿಗೆ ಯಾವ ಬಣ್ಣ ಶುಭ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.