ಪುರಾಣಗಳ ಪ್ರಕಾರ ಶನಿ ಮಹಾತ್ಮೆಯು ಎರಡೂ ರೀತಿಯಲ್ಲೂ ಪ್ರಭಾವ ಬೀರುತ್ತದೆ. ಶನಿ ಯಾವ ಸ್ಥಿತಿಯಲ್ಲಿ ಇರುತ್ತಾನೆ ಎಂಬುದರ ಆಧಾರ ಮೇಲೆ ಮನುಷ್ಯರ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರಗಳನ್ನು ನಾವು ಅಳೆಯಬಹುದು.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರಗಳಲ್ಲಿ ನವಗ್ರಹಗಳಿಗೆ ಪ್ರಮುಖ ಸ್ಥಾನವನ್ನು ಕಲ್ಪಿಸಲಾಗಿದೆ. ಅದರಲ್ಲೂ ಶನಿ ಎಂದರೆ ಕೊಂಚ ಪ್ರಭಾವಶಾಲಿಯಾಗಿದ್ದು, ಜನರು ಈತನ ಪ್ರಭಾವಕ್ಕೆ ಭಯಪಡುತ್ತಾರೆ. ಶನಿಯು ಛಾಯಾಪುತ್ರ. ಆತ ಕರ್ಮಫಲದಾತ. ನಾವು ಮಾಡಿದ ಸರಿ-ತಪ್ಪುಗಳಿಗೆ ಅನುಸಾರವಾಗಿ ಕರ್ಮಗಳನ್ನು ವಿಧಿಸುವಾತ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ:  ಶನಿಮಹಾತ್ಮನ ಕೋಪ ಕಡಿಮೆ ಮಾಡಲು ಇನ್ನೊಬ್ಬರಿಗೆ ಈ ಪಾನೀಯ ಕುಡಿಸಬೇಕಂತೆ.!


ಇನ್ನು ಪಂಚಾಂಗದ ಪ್ರಕಾರ ಜುಲೈ 2022ರಿಂದ ಮಕರ ರಾಶಿಯಲ್ಲಿ ಶನಿಯು ಹಿಮ್ಮುಖ ಸ್ಥಿತಿಯಲ್ಲಿ ಸಾಗುತ್ತಿದ್ದಾನೆ. ಅಕ್ಟೋಬರ್ 23ರ ವೇಳೆಗೆ ಮಕರ ರಾಶಿಯಲ್ಲಿ ಮತ್ತೆ ಸಹಜ ಚಲನೆ ಆರಂಭಿಸಲಿದ್ದಾನೆ. ಬಳಿಕ ಜನವರಿ 17, 2023ರವರೆಗೆ ಮಕರ ರಾಶಿಯಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾನೆ. ಶನಿಯು ವಕ್ರಿಯಾದಾಗ ಇತರರ ಮೇಲೆ ಆತನ ನಕಾರಾತ್ಮಕ ಪರಿಣಾಮಗಳು ಬೀರುತ್ತವೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ.


ಇನ್ನು ಶನಿಯ ಈ ಸಂಚಾರವೂ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಅದು ಸಕಾರಾತ್ಮಕ ಅಥವಾ ನಕಾರಾತ್ಮಕ ಆಗಿರಬಹುದು. ಪ್ರಸ್ತುತ ಐದು ರಾಶಿಗಳ ಮೇಲೆ ಶನಿಯ ಪ್ರಭಾವ ಬೀರುತ್ತಿದೆ.


ಜಾತಕದಲ್ಲಿ ಚಂದ್ರನಿಂದ ಹನ್ನೆರಡನೇ, ಮೊದಲ ಮತ್ತು ಎರಡನೆಯ ಮನೆಯ ಮೂಲಕ ಶನಿ ಸಾಗಿದರೆ ಆ ಸಮಯವನ್ನು ಸಾಡೇ ಸಾತಿ ಎಂದು ಕರೆಯಲಾಗುತ್ತದೆ. ಶನಿಯು ಒಂದು ಮನೆಯಿಂದ ಇನ್ನೊಂದು ಮನೆಗೆ ಸಾಗಲು ಎರಡೂವರೆ ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಇದನ್ನು ಧೈಯಾ ಅಂದರೆ 2 .5ವರ್ಷ ಎಂದು ಕರೆಯಲಾಗುತ್ತದೆ. ಇನ್ನು 12, 1 ಮತ್ತು 2ನೇ ಮನೆಗಳ ಮೂಲಕ ಶನಿ ಸಾಗುವಾಗ ಏಳೂವರೆ ವರ್ಷ ತೆಗೆದುಕೊಳ್ಳುತ್ತದೆ. ಇದನ್ನು ಅರ್ಥಪೂರ್ಣವಾಗಿ ಶನಿ ಸಾಡೆಸಾತಿಯ ಎನ್ನುತ್ತಾರೆ.   


ಸಾಡೇ ಸತಿ ಮತ್ತು ಧೈಯಾ ಪ್ರಭಾವವಿರುವ ರಾಶಿಚಕ್ರಗಳು:


ಶನಿ ಸಾಡೇಸಾತಿಯು ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ ಮೇಲಿದ್ದರೆ ಶನಿ ಧೈಯಾವು ಮಿಥುನ ರಾಶಿ, ತುಲಾ ರಾಶಿ ಮೇಲಿರಲಿದೆ. ಈ ಪ್ರಭಾವ ಹೊಂದಿರುವ ಜನರು ಜಾಗರೂಕತೆಯಿಂದ ಇರಬೇಕು.


ಇದನ್ನೂ ಓದಿ: Best Kissers: ಈ ನಾಲ್ಕು ರಾಶಿಯವರು ಮುತ್ತು ಕೊಡೋದ್ರಲ್ಲಿ ನಿಸ್ಸೀಮರು


ಸಾಡೇ ಸತಿ ಮತ್ತು ಧೈಯಾ ಪ್ರಭಾವವಿದ್ದರೆ ಏನಾಗುತ್ತದೆ:  


ಸಾಡೇ ಸಾತಿ ಇದ್ದ ಸಂದರ್ಭದಲ್ಲಿ ಮನುಷ್ಯ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಡೇ ಸಾತಿ ಆರಂಭದಲ್ಲಿ ಆರ್ಥಿಕ ಸಂಕಷ್ಟಗಳೂ ಗೋಚರವಾಗುತ್ತದೆ. ಶತ್ರುಕಾಟ ಸೇರಿದಂತೆ ಕುಟುಂಬದಲ್ಲಿ ಕಲಹಗಳು ಹೆಚ್ಚಾಗಿ ಉಂಟಾಗುತ್ತದೆ. ಇನ್ನು 2023 ಜನವರಿ 17ರ ವರೆಗೆ ಸಾಡೇ ಸಾತಿ ಇದ್ದು, ಈ ರಾಶಿಯ ಜನರು ಎಚ್ಚರಿಕೆ ವಹಿಸುವುದು ಅಗತ್ಯವಿದೆ.


(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.