ಸಂಬಂಧಗಳಲ್ಲಿ ಮುತ್ತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೀತಿ, ಪ್ರೇಮದಲ್ಲಿ ಮುತ್ತು ಸಾಮಾನ್ಯ. ಆದರೆ ಮುತ್ತು ಕೊಡೋದು ಸಹ ಒಂದು ಕಲೆ ಎನ್ನಬಹುದು. ಏಕೆಂದರೆ, ಕೊಡುವ ಮುತ್ತು ಸಂಗಾತಿಗೆ ಮತ್ತು ಬರುವಂತಿರಬೇಕು. ಇನ್ನು ಕಿಸ್ ಮಾಡಬೇಕೆಂದರೆ ಅದಕ್ಕೆ ಎನ್ನುವ ಹಲವಾರು ಟ್ರಿಕ್ಸ್ ಗಳಿರುತ್ತವೆ. ಇನ್ನು ರಾಶಿಚಕ್ರದ ಅನುಸಾರ ಈ ನಾಲ್ಕು ರಾಶಿಗಳ ಜನರು ಕಿಸ್ ಕೊಡೋದ್ರಲ್ಲಿ ನಿಸ್ಸೀಮರಾಗಿರುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ 17 ರಿಂದ ಹೊಳೆಯುತ್ತದೆ ಈ ರಾಶಿಯವರ ಅದೃಷ್ಟ. ! ಯಶಸ್ಸು ಕರುಣಿಸಲಿದ್ದಾನೆ ಸೂರ್ಯ
ವೃಷಭ ರಾಶಿ: ಈ ರಾಶಿಯವರು ಕಿಸ್ ಮಾಡೋದ್ರಲ್ಲಿ ಉತ್ತಮರು ಎನ್ನಲಾಗಿದೆ. ಅವರು ತಮ್ಮ ಸಂಗಾತಿಗೆ ಚುಂಬಿಸುವಾಗ ಭಾವೋದ್ರಿಕ್ತ ಮತ್ತು ತೀವ್ರವಾಗಿಡಲು ಬಯಸುತ್ತಾರೆ. ಇನ್ನು ಈ ರಾಶಿಯನ್ನು ಶುಕ್ರ ಆಳುವುದರಿಂದ ಇವರನ್ನು ಬೆಸ್ಟ್ ಕಿಸ್ಸರ್ ಗಳು ಎಂದರೆ ತಪ್ಪಾಗಲ್ಲ.
ಸಿಂಹರಾಶಿ: ಈ ರಾಶಿಯವರು ಸಂಗಾತಿಗೆ ಮುತ್ತಿಡುವಾಗ ಭಾವನಾತ್ಮಕವಾಗಿ ಹಿಡಿದುಟ್ಟುಕೊಳ್ಳುವಂತೆ ಮಾಡುತ್ತಾರೆ. ಸೂಕ್ಷ್ಮವಾಗಿ ಮುತ್ತಿಡುವ ಕಲೆ ಈ ರಾಶಿಯವರಿಗೆ ತಿಳಿದಿದೆ. ಸಿಂಹ ರಾಶಿಯವರಿಗೆ ಸೂಕ್ಷ್ಮ ಪ್ರಜ್ಞೆಯ ಕಲೆ ತಿಳಿದಿರುವುದರಿಂದ ಮುತ್ತಿಡುವಾಗ ಸಂಗಾತಿಯ ಭಾವನೆಗಳನ್ನು ಅವರು ಅರಿತುಕೊಳ್ಳುತ್ತಾರೆ.
ಧನು ರಾಶಿ: ಈ ರಾಶಿಯವರು ಸಂಗಾತಿಯ ಪ್ರೀತಿ ಪಡೆಯಲು ಎಂತಹ ಸಾಹಸವನ್ನಾದರೂ ಮಾಡಲು ಸಿದ್ಧರಿರುತ್ತಾರೆ. ಈ ರಾಶಿಯವರಿಗೆ ಮುಖ್ಯವಾಗಿ ಫ್ಲರ್ಟಿಂಗ್ ಮಾಡೋ ವಿಧಾನ ಚೆನ್ನಾಗಿ ಅರಿತಿರುತ್ತದೆ. ಅಷ್ಟೇ ಅಲ್ಲದೆ, ರಾಶಿ ಚಕ್ರದ ಪ್ರಕಾರ ಕೆಲವರು ಅತ್ಯುತ್ತಮ ಚುಂಬನಕಾರರು ಈ ರಾಶಿಯವರೇ ಆಗಿರುತ್ತಾರೆ. ಈ ರಾಶಿಯವರಿಗೆ ವಿಷಯವನ್ನು ನಿಧಾನವಾಗಿ ರೊಮ್ಯಾಂಟಿಕ್ ಆಗಿಸುವುದು ತಿಳಿದಿದೆ.
ಇದನ್ನೂ ಓದಿ: ಶನಿಮಹಾತ್ಮನ ಕೋಪ ಕಡಿಮೆ ಮಾಡಲು ಇನ್ನೊಬ್ಬರಿಗೆ ಈ ಪಾನೀಯ ಕುಡಿಸಬೇಕಂತೆ.!
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಪ್ರೀತಿಯಲ್ಲಿ ನಿಷ್ಠಾವಂತರು. ಅವರು ನಿಜವಾಗಿಯೂ ಪ್ರೀತಿಯಲ್ಲಿದ್ದರೆ ಮಾತ್ರ ಸಂಗಾತಿಗೆ ಮುತ್ತಿಡುತ್ತಾರೆ. ಆ ಮುತ್ತು ಉತ್ಸಾಹದಿಂದ ಕೂಡಿರುತ್ತದೆ. ತಮ್ಮ ಸಂಗಾತಿಗೆ ಇಷ್ಟವಾಗುವಂತೆ ಹೇಗೆ ಚುಂಬಿಸಬೇಕು ಎಂಬ ಕಲೆ ಈ ರಾಶಿಯವರಿಗೆ ತಿಳಿದಿರುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.