Shani Uday 2023: ಶನಿದೇವನು ಮಾರ್ಚ್ 6 ರಂದು ರಾತ್ರಿ 11.36 ರ ಸುಮಾರಿಗೆ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಜೋತಿಷ್ಯ ಪಂಡಿತರ ಪ್ರಕಾರ ಶನಿಯ ಈ ಉದಯ ಒಟ್ಟು 5 ರಾಶಿಗಳ ಜಾತಕದವರ ಸಂಕಷ್ಟ ಹೆಚ್ಚಿಸಲಿದೆ ಎನ್ನಲಾಗಿದೆ. ಹೀಗಾಗಿ ಈ 5 ರಾಶಿಗಳ ಜನರು ಶನಿ ಉದಯ ಕಾಲದಲ್ಲಿ ಅತ್ಯಂತ ಜಾಗರೂಕರಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಆ ಐದು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಮೇಷ ರಾಶಿ- ಶನಿಯ ಈ ಉದಯ ಮೇಷ ರಾಶಿಯವರಿಗೆ ಶುಭ ಪರಿಗಣಿಸಲಾಗಿಲ್ಲ. ಆಸ್ತಿ ಖರೀದಿಗೆ ಯೋಜನೆ ರೂಪಿಸುತ್ತಿದ್ದರೆ, ಸ್ವಲ್ಪ ಕಾಲ ನಿಲ್ಲುವುದು ಉಚಿತ ಸಾಬೀತಾಗಲಿದೆ. ಹೂಡಿಕೆದಾರರಿಗೆ ಈ ಸಮಯ ಅನುಕೂಲಕರವಾಗಿಲ್ಲ. ಖರ್ಚು-ವೆಚ್ಚ ಹೆಚ್ಚಾಗಲಿದೆ ಹಾಗೂ ಆದಾಯದ ಮಾರ್ಗಗಳಲ್ಲಿ ಅಡೆತಡೆಗಳು ಇರಲಿವೆ. ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇದೆ. ಸಾಲ ಹಾಗೂ ವೆಚ್ಚದಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆಗೆ ನಿಮ್ಮ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಸಂಬಂಧಗಳು ಕೂಡ ಪ್ರಭಾವಕ್ಕೆ ಒಳಗಾಗಲಿವೆ.

ಕನ್ಯಾ ರಾಶಿ- ಶನಿ ಉದಯ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲಿದೆ. ಕುಟುಂಬ ಸದಸ್ಯರ ಜೊತೆಗೆ ಮತಭೇದದ ಸಾಧ್ಯತೆ ಇದೆ. ಆಗಂತುಕರಿಂದ ಎಚ್ಚರಿಕೆವಹಿಸಿ. ಹಣಕಾಸಿನ ವಹಿವಾಟನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಶನಿ ಉದಯ ಅವಧಿಯಲ್ಲಿ ನಿಮ್ಮ ಗುಟ್ಟನ್ನು ಇತರರಿಗೆ ಬಿಟ್ಟುಕೊಡಬೇಡಿ. ವಾಣಿಯ ಮೇಲೆ ನಿಯಂತ್ರಣವಿರಲಿ. ಇಲ್ಲದಿದ್ದರೆ ಸಂಬಂಧಗಳು ಹಾಳಾಗಬಹುದು. ದಾಂಪತ್ಯ ಜೀವನದಲ್ಲಿಯೂ ಕೂಡ ವಿರಸ ಉಂಟಾಗುವ ಸಾಧ್ಯತೆ ಇದೆ.


ವೃಶ್ಚಿಕ ರಾಶಿ- ವ್ಯಾಪಾರದಲ್ಲಿ ಹಾನಿಯ ಪ್ರಬಲ ಯೋಗ ಕಾಣಿಸುತ್ತಿದೆ. ಹಲವು ಮಹತ್ವದ ಮತ್ತು ದೊಡ್ಡ ಡೀಲ್ ಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ವ್ಯಾಪಾರ ವರ್ಗದವರಿಗೆ ಸಮಯ ಅನುಕೂಲಕರವಾಗಿಲ್ಲ. ದಾಂಪತ್ಯ ಜೀವನದಲ್ಲಿಯೂ ಕೂಡ ಸಂಕಷ್ಟಗಳು ಎದುರಾಗಬಹುದು. ಪತಿ-ಪತ್ನಿಯರ ನಡುವೆ ವಿರಸ ಉಂಟಾಗುವ ಸಾಧ್ಯತೆ ಇದೆ. ಗ್ರಹ ಕಲಹ ಮತ್ತು ಒತ್ತಡದ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ.

ಮಕರ ರಾಶಿ- ಶನಿ ಉದಯ ನಿಮ್ಮ ಸಂಬಂಧಗಳನ್ನು ಹಾಳುಗೆಡವಲಿದೆ. ಸಹೋದರ-ಸಹೋದರಿಯರ ಜೊತೆಗೆ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಉದ್ಭವಿಸುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಸಮಯ ಉತ್ತಮವಾಗಿಲ್ಲ. ವೃತ್ತಿಪರವಾಗಿಯೂ ಕೂಡ ಸಮಯ ಅನುಕೂಲಕರವಾಗಿಲ್ಲ. ನೌಕರಿ-ವ್ಯಾಪಾರದ ಉತ್ತಮ ಪ್ರಸ್ತಾಪಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ಈ ಕಾಲದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಮುಂದುವರೆಯಬೇಕು.


ಇದನ್ನೂ ಓದಿ-Holi 2023 ದಿನ ನಿಮ್ಮ ರಾಶಿಗೆ ಅನುಗುಣವಾಗಿ ಈ ಉಪಾಯ ಮಾಡಿ, ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ!


ಮೀನ ರಾಶಿ- ಶನಿ ಉದಯದ ಬಳಿಕ ತರಾತುರಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಣಯಗಳು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಅನಗತ್ಯ ಖರ್ಚು-ವೆಚ್ಚ ತಪ್ಪಿಸಿ. ಇದು ನಿಮ್ಮ ಬಜೆಟ್ ಬಿಗಡಾಯಿಸಲು ಕಾರಣವಾಗಲಿದೆ. ನೌಕರಿ-ವ್ಯಾಪಾರದಿಂದ ಸಿಗುತ್ತಿರುವ ಲಾಭದಲ್ಲಿ ಕೊರತೆ ಎದುರಾಗಬಹುದು. ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ವಾಹನ ಚಲಾಯಿಸುವಾಗ ಸಾಕಷ್ಟು ಎಚ್ಚರಿಕೆವಹಿಸಿ. ಬೇರೆಯವರ ವಾಹನ ಎರವಲು ಪಡೆದು ಚಲಾಯಿಸಲು ಹೋಗಬೇಡಿ.


ಇದನ್ನೂ ಓದಿ-White Hair Problem: ಅಡುಗೆ ಮನೆಯಲ್ಲಿರುವ ಈ 3 ಪದಾರ್ಥಗಳಿಂದ ನೈಸರ್ಗಿಕವಾಗಿ ತಲೆ ಕೂದಲನ್ನು ಕಪ್ಪಾಗಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.