ಸುದೀರ್ಘ 12 ವರ್ಷಗಳ ಬಳಿಕ ಹೋಳಿ ಹಬ್ಬದ ದಿನ ಗ್ರಹಗಳ ವಿಶೇಷ ಕಾಕತಾಳೀಯ, ಈ ರಾಶಿಗಳ ಭಾಗ್ಯ ಸೂರ್ಯನಂತೆ ಹೊಳೆಯಲಿದೆ!

Holi 2023 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿ ಹಾಗೂ ಶುಕ್ರರ ಯುತಿ ನೆರವೇರಲಿದ್ದು, ಈ ಯುತಿ ಹಲವು ಜಾತಕದವರ ಪಾಲಿಗೆ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುದು ತಿಳಿದುಕೊಳ್ಳೋಣ ಬನ್ನಿ,
 

Holi 2023 Horoscope: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ, ಈ ಬಾರಿ ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತಿದೆ. ಈ ವರ್ಷ ಹೋಳಿ ದಹನ್ ಮಾರ್ಚ್ 7 ರಂದು ನಡೆಯಲಿದೆ. ಮಾರ್ಚ್ 8 ರಂದು ದೇಶದ ಹಲವೆಡೆ ಬಣ್ಣದೋಕುಳಿ ಆಡಲಾಗುವುದು. ಆದರೆ ಈ ವರ್ಷ ಹೋಳಿ ಹಬ್ಬದಂದು ಗ್ರಹಗಳ ವಿಶೇಷ ಕಾಕತಾಳೀಯ ರೂಪುಗೊಳ್ಳಲಿದೆ.  ಈ ದಿನ ಹೋಳಿಯಂದು ದೇವಗುರು ಬೃಹಸ್ಪತಿ ಮತ್ತು ದಾನವರ ಗುರು ಶುಕ್ರ ಮೀನರಾಶಿಯಲ್ಲಿರಲಿದ್ದಾರೆ. ಇದರ ಪ್ರಭಾವವು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸಲಿದೆ. ಆದರೆ ಈ ಮೈತ್ರಿ ಏರ್ಪಟ್ಟರೆ 3 ರಾಶಿಗಳ ಜನರಿಗೆ ಭಾರಿ ಅದೃಷ್ಟ ಒಲಿದುಬರಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಆರು ಶತಮಾನಗಳ ಬಳಿಕ 3 ರಾಜಯೋಗಳ ಅಪರೂಪದ ಸಂಯೋಜನೆ, ಈ ರಾಶಿಗಳ ಜನರಿಗೆ ಭಾರಿ ಧನಾಗಮನ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /3

ಮೇಷ ರಾಶಿ- ಈ ಬಾರಿ ಹೋಳಿ ಹಬ್ಬದಿಂದ, ಮೇಷ ರಾಶಿಯವರಿಗೆ ಉತ್ತಮ ಹಣ ಮತ್ತು ವೃತ್ತಿಯಲ್ಲಿ ಪ್ರಗತಿ ಇದ್ರಲಿದೆ. ಏಕೆಂದರೆ ಗುರು ಮತ್ತು ಶುಕ್ರನ ಸಂಯೋಗವು ನಿಮ್ಮ ಸಂಕ್ರಮಣದ ಜಾತಕದ ದ್ವಿತೀಯ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ನೀವು ಹಠಾತ್ ಹಣವನ್ನು ಪಡೆಯಬಹುದು. ಸ್ಥಗಿತಗೊಂಡ ಹಣವನ್ನು ನಿಮ್ಮ ಬಳಿ ಮರಳಲಿದೆ. ಇದರೊಂದಿಗೆ, ನಿಮ್ಮ ಆರ್ಥಿಕ ಭಾಗವು ಮೊದಲಿಗಿಂತ ಬಲವಾಗಿರಲಿದೆ. ಇದೇ ವೇಳೆ, ಈ ಅವಧಿಯಲ್ಲಿ ನಿಮ್ಮ ಮಾತಿನ ಪರಿಣಾಮವೂ ಹೆಚ್ಚಾಗಲಿದೆ. ಇದರಿಂದಾಗಿ ಜನರು ನಿಮ್ಮಿಂತ ಪ್ರಭಾವಿತರಾಗುತ್ತಾರೆ. ಮಾಧ್ಯಮ, ಫಿಲ್ಮ್ ಲೈನ್ ಅಥವಾ ಮಾರ್ಕೆಟಿಂಗ್ ಗೆ ಸಂಬಂಧಪಟ್ಟ ಜನರಿಗೆ ಈ ಸಮಯವು ಮಂಗಳಕರವೆಂದು ಸಾಬೀತಾಗಲಿದೆ.  

2 /3

ವೃಷಭ ರಾಶಿ- ಶುಕ್ರ ಮತ್ತು ಗುರುಗಳ ಸಂಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಅಂದರೆ ಹೋಳಿಹಬ್ಬದ ಆರಂಭದಿಂದ  ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು ಎಂದರ್ಥ. ಏಕೆಂದರೆ ನಿಮ್ಮ ರಾಶಿಯಿಂದ ಆದಾಯ ಮತ್ತು ಲಾಭದ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಹೀಗಾಗಿ ನಿಮ್ಮ ಆದಾಯದಲ್ಲಿ ಉತ್ತಮ ಹೆಚ್ಚಳವಾಗಬಹುದು. ಇದರೊಂದಿಗೆ ಸ್ಥಾನ, ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ. ಘನತೆ ಮತ್ತು ಗೌರವ ಹೆಚ್ಚಾಗಲಿದೆ. ಹಳೆಯ ಹೂಡಿಕೆಯಿಂದ ಲಾಭದ ಸಾಧ್ಯತೆಗಳಿವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿದೆ. ಇದರೊಂದಿಗೆ, ಈ ಅವಧಿಯಲ್ಲಿ ನೀವು ಕೋರ್ಟ್-ಕಚೇರಿ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು.  

3 /3

ವೃಶ್ಚಿಕ ರಾಶಿ- ಹೋಳಿ ಹಬ್ಬದ ಆಚರಣೆಯಿಂದ ನಿಮ್ಮ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ಗುರು ಮತ್ತು ಶುಕ್ರರ ಸಂಯೋಜನೆ ನಿಮ್ಮ ಜಾತಕದ ಪಂಚಮ ಭಾವದಲ್ಲಿ ರಚನೆಯಾಗುತ್ತಿದೆ. ಇದರಿಂದ ನೀವು ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಇನ್ನೊಂದೆಡೆ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಇದರೊಂದಿಗೆ, ನೀವು ಪ್ರೇಮ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಇದರ ಜೊತೆಗೆ ನೀವು ವೃತ್ತಿ-ವ್ಯವಹಾರದಲ್ಲಿ ಲಾಭದ ಅವಕಾಶಗಳನ್ನು ಪಡೆಯಬಹುದು. ತಾಯಿಯೊಂದಿಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)