Shani Asta: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ರಾಶಿಯನ್ನು ಪರಿವರ್ತಿಸಿ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಇದಲ್ಲದೆ, ಆತ ತನ್ನ ಚರಣವನ್ನು ಕೂಡ ಬದಲಾಯಿಸಿದ್ದಾನೆ. ಶನಿಗೆ ನಾಲ್ಕು ಚರಣಗಳಿವೆ. ಪ್ರಸ್ತುತ ಶನಿ ಚಿನ್ನದ ಚರಣದ ಮೂಲಕ ಸಾಗುತ್ತ ಮೂರು ರಾಶಿಗಳ ಜನರಿಗೆ ಅಪಾರ ಲಾಭ ಕಲ್ಪಿಸಲಿದ್ದಾನೆ. ಈ ಸಮಯ ಆ ರಾಶಿಗಳ ಪಾಲಿಗೆ ಅತ್ಯಂತ ಶುಭ ಸಾಬೀತಾಗುತ್ತಿದೆ. ಇದರಿಂದ ಆಯಾ ರಾಶಿಗಳ ಜನರ ಮೇಲೆ ಶನಿ ಅಪಾರ ಕೃಪೆ ತೋರುತ್ತಿದ್ದಾನೆ. ಶನಿಯ ಚಿನ್ನದ ಚರಣ ಯಾವ 3 ರಾಶಿಗಳ ಜನರ ಭಾಗ್ಯ ಬದಲಾಯಿಸಲಿದೆ ತಿಳಿದುಕೊಳ್ಳೋಣ ಬನ್ನಿ, 

COMMERCIAL BREAK
SCROLL TO CONTINUE READING

ಶನಿಯ ಚಿನ್ನದ ಪಾದ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು, ಹಣ ನೀಡಲಿದೆ.
ಮೇಷ ರಾಶಿ:
ಮೇಷ ರಾಶಿಯ ಚಿನ್ನದ ಚರಣದಲ್ಲಿ ಶನಿಯ ಈ ಗೋಚರ ಸಂಭವಿಸಿದೆ. ಈ ಸಮಯ ಮೇಷ ರಾಶಿಗಳ ಜನರ ಆದಾಯವನ್ನು ಹೆಚ್ಚಿಸಲಿದೆ. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಅಪಾರ ಜಿಗಿತ ಕಂಡುಬರಲಿದೆ. ಆಕಸ್ಮಿಕ ಧನಲಾಭ ಸಿಗಲಿದೆ. ಷೇರು ಮಾರುಕಟ್ಟೆ, ಜೂಜು ಹಾಗೂ ಲಾಟರಿಗಳಲ್ಲಿ ಕೂಡ ಅಪಾರ ಧನ ಲಾಭವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಉಳಿತಾಯ ಕೂಡ ಮಾಡುವಿರಿ. ವೃತ್ತಿ ಜೀವನದಲ್ಲಿ ದೊಡ್ಡ ಅವಕಾಶ ಒದಗಿ ಬರಲಿದೆ ಮತ್ತು ಅದು ನಿಮ್ಮ ಭಾಗ್ಯವನ್ನೇ ಬದಲಾಯಿಸಲಿದೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಕನ್ಯಾ ರಾಶಿ: ಶನಿಯ ಚಿನ್ನದ ಚರಣದ ಮೂಲಕ ಸಾಗಣೆ ಕನ್ಯಾ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ದೊಡ್ಡ ಲಾಭವನ್ನು ನೀಡುತ್ತದೆ. ಹಣಕಾಸಿನ ಸ್ಥಿತಿ  ಪ್ರಯೋಜನಕಾರಿಯಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಕೋರ್ಟ-ಕಚೇರಿ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಹಳೆಯ ಸಮಸ್ಯೆಗಳು ಅಂತ್ಯವಾಗಲಿವೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ.


ಇದನ್ನೂ ಓದಿ-Todays Horoscope 29 January 2023: ಮೇಷ ರಾಶಿಯವರಿಗೆ ಚಂದ್ರ ಬಲ, ಇತರ ರಾಶಿಗಳ ಜನರ ಪಾಲಿಗೆ ಹೇಗಿದೆ ದಿನ?


ಕುಂಭ ರಾಶಿ: ಶನಿಯು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಕುಂಭ ರಾಶಿಯನ್ನು ಪ್ರವೇಶಿಸಿರುವುದರಿಂದ ಕುಂಭ ರಾಶಿಯವರಿಗೆ ಸಿಕ್ಕಿರುವ ಶನಿಯ ಚಿನ್ನದ ತುಂಬಾ ಶುಭಕರವಾಗಿದೆ. ಈ ಜನರ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಲಿವೆ. ಶನಿಯ ಸಾಡೆಸಾತಿ ಸ್ವಲ್ಪ ತೊಂದರೆಗಳನ್ನು ನೀಡುತ್ತದೆ, ಆದರೆ ಹಣದ ಲಾಭ ಮತ್ತು ಉತ್ತಮ ಯಶಸ್ಸನ್ನು ಪಡೆಯುವ ಅವಕಾಶಗಳನ್ನು ಸಹ ನೀಡುತ್ತದೆ. ಆದಾಯ ಹೆಚ್ಚಾಗಲಿದೆ. ದೊಡ್ಡ ಆಸ್ತಿ ಅಥವಾ ವಾಹನವನ್ನು ಖರೀದಿಸಬಹುದು. ಪ್ರಚಾರ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು.


ಇದನ್ನೂ ಓದಿ-ನಿದ್ರಾಹೀನತೆ ಸಮಸ್ಯೆಗೆ ರಾಮಬಾಣ ಈ ಸ್ಪೆಷಲ್ ಚಹಾ, ಒಮ್ಮೆ ಟ್ರೈ ಮಾಡಿ ನೋಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.