World Oral Health Day 2024: ಪ್ರತಿಯೊಬ್ಬರಿಗೂ ತಮ್ಮ ಹಲ್ಲುಗಳು ಫಳ ಫಳ ಹೊಳೆಯುವಂತೆ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಲ್ಲುಗಳ ಹೊಳಪು ಕಳೆಗುಂದಿದ್ದರೆ, ಹಲ್ಲುಗಳು ಹಳದಿಯಾಗಿದ್ದರೆ ಮುಕ್ತವಾಗಿ ನಗಲು ಕೂಡ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ, ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ನೀವು ನಿಮ್ಮ ಹಲ್ಲುಗಳು ಹೊಳೆಯುವಂತೆ ಮಾಡಬಹುದು. ಅಂತಹ ಸುಲಭ ವಿಧಾನಗಳ ಬಗ್ಗೆ ತಿಳಿಯೋಣ... 


COMMERCIAL BREAK
SCROLL TO CONTINUE READING

ಡೈರಿ ಉತ್ಪನ್ನಗಳ ಸೇವನೆ: 
ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡು ಬರುತ್ತದೆ. ಇದು ಹಲ್ಲುಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಇದಲ್ಲದೆ,  ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಲಾಲಾರಸ ಉತ್ಪಾದನೆ ಕೂಡ ಹೆಚ್ಚಾಗುತ್ತದೆ. ಇದು ಹಲ್ಲುಗಳಲ್ಲಿ ಕಲೆ ಕೂರಲು ಅನುಮತಿಸುವುದಿಲ್ಲ. ಇದು ಹಲ್ಲುಗಳ ಮೇಲ್ಮೈಯಿಂದ ಕಲೆಗಳನ್ನು ತೆಗೆದುಹಾಕಲು ಮತ್ತು ಅವುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ. 


ತೆಂಗಿನ ಎಣ್ಣೆ:  
ಕೂದಲಿನ ಬೆಳವಣಿಗೆಗೆ ತೆಂಗಿನೆಣ್ಣೆ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದೇ ಇದೆ. ಆದರೆ, ತೆಂಗಿನ ಎಣ್ಣೆಯು ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸುವ ಅತ್ಯುತ್ತಮ ಏಜೆಂಟ್ ಎಂದು ನಿಮಗೆ ತಿಳಿದಿದೆಯೇ? ಸ್ವಲ್ಪ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳು ಬೆಳ್ಳಗಾಗುತ್ತವೆ. 


ಇದನ್ನೂ ಓದಿ- ಮಧುಮೇಹಿಗಳು ಆಲಿವ್ ಆಯಿಲ್ ಹೀಗೆ ಬಳಸಿದರೆ ಸಾಕು ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು!


ಆಪಲ್ ಸೈಡರ್ ವಿನೆಗರ್: 
ಆಪಲ್ ಸೈಡರ್ ವಿನೆಗರ್ ತೂಕ ನಷ್ಟಕ್ಕೆ ತುಂಬಾ ಲಾಭದಾಯಕ ಎಂದು ನಿಮಗೆ ತಿಳಿದೇ ಇದೆ. ಆದರೆ, ಆಪಲ್ ಸೈಡರ್ ವಿನೆಗರ್ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದು ಹತ್ತಿ ಉಂಡೆಯಲ್ಲಿ ಸ್ವಲ್ಪ ಆಪಲ್ ಸೈಡರ್ ವಿನೆಗರ್ ಅನ್ನು ಅದ್ದಿ ಅದನ್ನು ಕೆಲ ನಿಮಿಷಗಳ ಕಾಲ ಹಲ್ಲುಗಳ ಮೇಲೆ ಉಜ್ಜಿದ್ಸರೆ ಹಲ್ಲುಗಳು ಫಳ ಫಳ ಹೊಳೆಯುತ್ತವೆ. 


ನಿಂಬೆ ರಸ: 
ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದು ಅದನ್ನು ನಿಮ್ಮ ಹಲ್ಲುಗಳಿಗೆ ಉಜ್ಜಿಕೊಳ್ಳಿ.  ಈ ರೀತಿ ಮಾಡುವುದರಿಂದ ಒಂದೇ ವಾರದಲ್ಲಿ ನಿಮ್ಮ ಹಳದಿ ಹಲ್ಲುಗಳು ಬೆಳ್ಳಗಾಗುತ್ತವೆ. 


ಇದನ್ನೂ ಓದಿ- ಮಧುಮೇಹಿಗಳು ಒಂದು ಲೋಟ ಕಾಫಿ ಕುಡಿದರೆ ಸಾಕು, ನಾರ್ಮಲ್ ಆಗುವುದು ಬ್ಲಡ್ ಶುಗರ್ ! ಆದರೆ ಕಾಫಿ ಇದಾಗಿರಬೇಕು !


ಅಡಿಗೆ ಸೋಡಾ: 
ಉತ್ತಮ ಗುಣಮಟ್ಟದ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದರ ಪೇಸ್ಟ್ ತಯಾರಿಸಿ ನಿತ್ಯ ಇದರಿಂದ ಬ್ರಶ್ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಹಳದಿ ಹಲ್ಲುಗಳು ಫಳ ಫಳ ಹೊಳೆಯುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.