ಬಳೆ ಕೇವಲ ಶೃಂಗಾರ ಸಾಧನವಲ್ಲ! ಇದು ಕೈಯ್ಯಲ್ಲಿದ್ದರೆ ಆರೋಗ್ಯಕ್ಕಿದೆ ಲಾಭ!
Indian Culture: ಮಹಿಳೆಯರು ಗಾಜಿನ ಬಳೆಗಳನ್ನು ತೊಟ್ಟರೆ ಪತಿಯ ಆಯುಷ್ಯ ಹೆಚ್ಚಾಗುತ್ತದೆ ಎನ್ನುವುದು ನಂಬಿಕೆ. ಮಹಿಳೆಯರು ತೊಡುವ ಬಳೆಗಳ ನಂಬಿಕೆಯ ಹಿಂದೆ ವಿಜ್ಞಾನವೂ ಅಡಗಿದೆ.
ಬೆಂಗಳೂರು : ತನ್ನ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಆಳವಾಗಿ ಬೇರೂರಿಸಿಕೊಂಡಿರುವ ದೇಶ ನಮ್ಮದು. ಇಲ್ಲಿ ನಮ್ಮ ಸಂಸ್ಕೃತಿಯಲ್ಲಿನ ಪದ್ಧತಿಗಳನ್ನು, ನಂಬಿಕೆಗಳನ್ನು, ಆಚಾರ ವಿಚಾರಗಳನ್ನು ಬಹಕ ಜತನದಿಂದ ಅನುಸರಿಸಲಾಗುತ್ತದೆ. ಈ ಪ್ರಾಚೀನ ಸಂಪ್ರದಾಯಗಳಲ್ಲಿ, ಮಹಿಳೆಯರು ಗಾಜಿನ ಬಳೆಗಳನ್ನು ಧರಿಸುವ ಸಂಪ್ರದಾಯವಿದೆ. ಬಳೆಗಳಿಗೆ ಮಹಿಳೆಯರ ಜೀವನದಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ವಿಶೇಷವಾಗಿ ವಿವಾಹಿತ ಮಹಿಳೆಯರ ಬಾಳಿನಲ್ಲಿ ಗಾಜಿನ ಬಳೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದು ವೈವಾಹಿಕ ಜೀವನ ಮತ್ತು ಮುತ್ತೈದೆ ಸಂಕೇತ ಎಂದು ಹೇಳಲಾಗುತ್ತದೆ. ಅಲ್ಲದೆ, ಮಹಿಳೆಯರು ಗಾಜಿನ ಬಳೆಗಳನ್ನು ತೊಟ್ಟರೆ ಪತಿಯ ಆಯುಷ್ಯ ಹೆಚ್ಚಾಗುತ್ತದೆ ಎನ್ನುವುದು ನಂಬಿಕೆ. ಮಹಿಳೆಯರು ತೊಡುವ ಬಳೆಗಳ ನಂಬಿಕೆಯ ಹಿಂದೆ ವಿಜ್ಞಾನವೂ ಅಡಗಿದೆ.
ಬಳೆಗಳನ್ನು ಧರಿಸುವುದರ ಹಿಂದಿನ ವೈಜ್ಞಾನಿಕ ಕಾರಣಗಳು :
ಒಬ್ಬ ಮಹಿಳೆ ಮದುವೆಯಾದಾಗ,ಅವಳ ಎರಡೂ ಕೈಗಳನ್ನು ಬಳೆಗಳಿಂದ ಸಿಂಗರಿಸಲಾಗುತ್ತದೆ.ಈ ಸಂಪ್ರದಾಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಹಿಳೆಯರು ಗಾಜಿನ ಬಳೆಗಳನ್ನು ಧರಿಸುವುದರ ಹಿಂದಿನ ಕಾರಣವನ್ನು ಇಲ್ಲಿ ವಿವಿಧ ರೀತಿಯಲ್ಲಿ ಹೇಳಲಾಗುತ್ತಿದೆ. ಈ ಪದ್ಧತಿಯ ಹಿಂದಿನ ಕಾರಣಗಳನ್ನು ಅರ್ಥಮಾಡಿಸುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ : Hair Care Tips: ಮೊಳಕಾಲಿನವರೆಗೆ ನೀಳವಾದ ಕೇಶರಾಶಿ ಪಡೆಯಲು ಮನೆಯಲ್ಲಿಯೇ ತಯಾರಿಸಿ ಆ ಆಯುರ್ವೇದ ತೈಲ, ಒಂದೇ ವಾರದಲ್ಲಿ ಫಲಿತಾಂಶ!
ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣ :
ಮಹಿಳೆಯರು ಬಳೆಗಳನ್ನು ಧರಿಸುವ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣಗಳಿರಬಹುದು ಎಂದು ಕೆಲವು ವರದಿಗಳು ಸೂಚಿಸುತ್ತವೆ. ಮಹಿಳೆಯರು ತಮ್ಮ ಮಣಿಕಟ್ಟಿನ ಮೇಲೆ ಬಳೆಗಳನ್ನು ಧರಿಸಿದಾಗ, ಅವು ಒಂದಕ್ಕೊಂದು ಉಜ್ಜಿಕೊಳ್ಳುತ್ತವೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಕೆಲವು ನಂಬಿಕೆಗಳ ಪ್ರಕಾರ, ಮಣಿಕಟ್ಟು ಮಹಿಳೆಯ ದೇಹದಲ್ಲಿ ಹಾರ್ಮೋನ್ ಸಮತೋಲನಕ್ಕೆ ಕೊಡುಗೆ ನೀಡುವ ಆಕ್ಯುಪ್ರೆಶರ್ ಪಾಯಿಂಟ್ ಎಂದು ಕೂಡಾ ಹೇಳಲಾಗಿದೆ.
ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ :
ಬಳೆಗಳ ಆಯ್ಕೆಗೆ ಸಂಬಂಧಿಸಿದಂತೆ ಕೆಲವು ನಂಬಿಕೆಗಳಿವೆ.ಮಹಿಳೆಯರು ಹೆಚ್ಚಾಗಿ ಗಾಜಿನ ಬಳೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಏಕೆಂದರೆ ಈ ಬಳೆಗಳು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಎಂದು ಹೇಳಲಾಗುತ್ತದೆ. ದೇಶದ ಅನೇಕ ಪ್ರದೇಶಗಳಲ್ಲಿ, ಬಳೆಗಳಿಂದ ಹಿರ ಹೊಮ್ಮುವ ಸದ್ದು ಅವಿವಾಹಿತ ಮಹಿಳೆಯರಿಗೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆಯಂತೆ. ಇದು ಕೆಟ್ಟ ದೃಷ್ಟಿಯಿಂದ ಅವರನ್ನು ರಕ್ಷಿಸುತ್ತದೆ ಎನ್ನುವುದು ನಂಬಿಕೆ. ವಿವಿಧ ಬಣ್ಣದ ಬಳೆಗಳು ಸಹ ವಿಭಿನ್ನ ಅರ್ಥಗಳನ್ನು ಹೊಂದಿವೆ.ಉದಾಹರಣೆಗೆ, ಹಸಿರು ಶಾಂತಿಯನ್ನು ಸಂಕೇತಿಸುತ್ತದೆ, ಆದರೆ ಕೆಂಪು ಬಣ್ಣವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದರೊಂದಿಗೆ ಸಂಬಂಧಿಸಿದೆ.
ಇದನ್ನೂ ಓದಿ : Weight Loss Tips: ದೇಸೀ ತುಪ್ಪ ಸೇವಿಸಿದರೆ ತೂಕ ಇಳಿಕೆಯಾಗುತ್ತಾ? ಇಲ್ಲಿದೆ ಆದರೆ ಹಿಂದಿನ ಸತ್ಯಾಸತ್ಯತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.