ಪ್ರೀತಿಗಾಗಿ ಶಹಜಹಾನ್ ತಾಜ್ ಮಹಲ್ ನಿರ್ಮಿಸಿದಂತೆ, ತಂದೆ ಮೇಲಿನ ಅಭಿಮಾನಕ್ಕಾಗಿ ಮಂದಿರ ನಿರ್ಮಿಸಿದ ಪುತ್ರರು!
ವಯಸ್ಸಾದ್ರೆ ಸಾಕು ತಂದೆ, ತಾಯಿಯನ್ನು ಮನೆಯಿಂದ ಹೊರಹಾಕೋ ಮಕ್ಕಳು ಕೂಡಾ ಇದ್ದಾರೆ.. ಇಂಥಾ ಸಮಾಜನ ಮಧ್ಯೆ ಈ ಬಗ್ಗೆ ನಿಜಕ್ಕೂ ಮಾದರಿ.. ತಂದೆ ಮೇಲಿನ ಅಭಿಮಾನಕ್ಕಾಗಿ ಧಾರವಾಡದಲ್ಲಿ ಪುತ್ರರರಿಬ್ಬರು ಮಂದಿರ ನಿರ್ಮಿಸಿದ್ದಾರೆ.. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಧಾರವಾಡ: ಪ್ರೀತಿಗಾಗಿ ಶಹಜಹಾನ್ ತಾಜ್ ಮಹಲ್ (Tajmahal) ನಿರ್ಮಾಣ ಮಾಡಿರುವುದು ಇತಿಹಾಸ. ಹಾಗೇಯೆ ತಂದೆ ಮೇಲಿನ ಅಭಿಮಾನಕ್ಕಾಗಿ ಧಾರವಾಡದಲ್ಲಿ ಪುತ್ರರರಿಬ್ಬರು ತಂದೆಯ ನೆನಪಿಗಾಗಿ ಮಂದಿರ (Temple) ನಿರ್ಮಿಸಿದ್ದಾರೆ.
ಹೌದು, ಆಸ್ತಿಗಾಗಿ ತಂದೆತಾಯಿಯನ್ನು ಹೊರಹಾಕುವ ಕಾಲದಲ್ಲಿ ಅಗಲಿದ ತಂದೆಗಾಗಿ ಮಂದಿರ ನಿರ್ಮಿಸಿ, ತಂದೆಯ ಸಮಾಧಿಯನ್ನು ಪೂಜೆ ಮಾಡುತ್ತಿರೊ ಮಕ್ಕಳು ಅಲ್ಲಿ ಮೃತ ತಂದೆಯ ಕಂಚಿನ ಪುತ್ಥಳಿ (Bronze effigy of father) ನಿರ್ಮಿಸಿದ್ದಾರೆ. ಇಂತಹ ಅಪರೂಪದ ದೃಶ್ಯ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಜಮೀನುವೊಂದರಲ್ಲಿ ಕಂಡು ಬಂದಿದೆ.
ಏನಿದು ಘಟನೆ:
95 ನೇ ವಯಸ್ಸಿನಲ್ಲಿ ಅನಾರೋಗ್ಯ ದಿಂದ ಸಾವನ್ನಪ್ಪಿದ ಶಿವಪ್ಪ ಮಲಕಾರಿ (Shivappa Malakari) ಎಂಬುವರ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಶಿವಪ್ಪ ಮಲಕಾರಿ ಅವರ ಮಕ್ಕಳು ಸೇರಿ ತಂದೆಗಾಗಿ ದೇವಸ್ಥಾನ ಕಟ್ಟಿಸಿದ್ದಾರೆ. ಈ ಮಂದಿರ ನಿರ್ಮಾಣಕ್ಕಾಗಿ ಒಟ್ಟು 35 ಲಕ್ಷ ರೂಪಾಯಿ ಖರ್ಚು ಮಾಡಿ ಇದ್ದಾರೆ. ಮಹಾರಾಷ್ಟ್ರದಿಂದ ಕಂಚಿನ ಪುತ್ಥಳಿ ನಿರ್ಮಿಸಿ ತರಲಾಗಿದೆ. ಪುತ್ಥಳಿಗೆ ಏಳುವರೆ ಲಕ್ಷ ರೂಪಾಯಿ ನೀಡಲಾಗಿದೆ. 27.5 ಲಕ್ಷದಲ್ಲಿ ಸುಂದರ ಮಂದಿರ ನಿರ್ಮಾಣ ಮಾಡಲಾಗಿದೆ. ಶಿವಪ್ಪ ಅವರು ಮೃತರಾದ ಬಳಿಕ ತಂದೆಯ ಆಸೆಯಂತೆ ಏಳುವರೆ ಎಕರೆ ಸ್ವಂತ ಜಮೀನಿನಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಬಳಿಕ ಮೊದಲವರ್ಷ ಪುಣ್ಯಸ್ಮರಣೆ ಒಳಗಡೆ ಮಂದಿರ ನಿರ್ಮಿಸಿ ಪುತ್ಥಳಿ ಇಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ಮಂದಿರ ನಿರ್ಮಿಸಿ ಪುತ್ಥಳಿ ಅನಾವರಣ ಮಾಡಿ ಅಲ್ಲಿ ಅವರ ಮಕ್ಕಳು ಪೂಜೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ- Viral Video: ಸೆಲ್ಫಿ ತೆಗೆದುಕೊಳ್ಳಲು ಬಂದ ಸ್ವಚ್ಛತಾ ಸಿಬ್ಬಂದಿಗೆ ಹಿಂಗ್ಯಾಕ್ ಮಾಡಿದ್ರು ರೋಜಾ!
ಗಿರಮಿಟ್ ಶಿವಪ್ಪ ಅಂತಲೇ ಫೇಮಸ್ ಆಗಿದ್ದ ಶಿವಪ್ಪ ಮಲಕಾರಿ! (Shivappa Malakari was famous as Giramit Shivappa):
ದಿ. ಶಿವಪ್ಪ ಮಲಕಾರಿ ಅವರಿಗೆ ಆರು ಜನ ಮಕ್ಕಳು, ಮೂವರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳು. ದಿ.ಶಿವಪ್ಪ ಅವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಂಚನೂರು ಗ್ರಾಮದವರು. ಕೆನಾಲ್ ನಿರ್ಮಾಣಕ್ಕೆ ಇವರ ಇದ್ದ ಅಲ್ಪ ಭೂಮಿ ಹೋಗುತ್ತದೆ. ಬಳಿಕ ಧಾರವಾಡಕ್ಕೆ ಆಗಮಿಸಿ ಬದುಕಿಗಾಗಿ ಹೋಟೆಲ್ ಆರಂಭ ಮಾಡುತ್ತಾರೆ. ಗಿರಮಿಟ್ ಶಿವಪ್ಪ ಅಂತಲೇ ಫೇಮಸ್ ಆಗಿರುತ್ತಾರೆ. ಬಳಿಕ ನುಗ್ಗಿಕೇರಿ ಗ್ರಾಮದಲ್ಲಿ ಏಳುವರೆ ಎಕರೆ ಜಮೀನು ಖರೀದಿ ಮಾಡಿ ಕೃಷಿ ಮಾಡುತ್ತಾರೆ. ಶಿವಪ್ಪ ಅವರ ಮೊದಲ ಮಗ ಸಿವಿಲ್ ಇಂಜಿನೀಯರ್, ಎರಡನೆ ಮಗ ರಾಜಕೀಯ ಹಾಗೂ ಮೂರನೇ ಮಗ ಕೃಷಿ ಮಾಡುತ್ತ ತಂದೆಯೊಂದಿಗೆ ಕೂಡು ಕುಟುಂಬ ಸಾಗಿಸುತ್ತಿರುತ್ತಾರೆ. ಆದರೆ ಅನಾರೋಗ್ಯದಿಂದ ಶಿವಪ್ಪ ಮಲಕಾರಿ ಅವರು 2023 ಅ.5 ರಂದು ಮೃತಪಡುತ್ತಾರೆ. ತಂದೆಯ ಆಸೆಯಂತೆ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಮೃತಪಟ್ಟು ಒಂದು ವರ್ಷ ತುಂಬಿದ ಹಿನ್ನೆಲೆ ಮಂದಿರ ಕಟ್ಟಿ ಪುತ್ಥಳಿ ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ- ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮುಡಿದ್ರೆ ಏನಾಗುತ್ತೆ!! ಶುಭನಾ? ಅಶುಭನಾ?
ಈ ಬಗ್ಗೆ ಮಾತನಾಡಿರುವ ಗಿರಮಿಟ್ ಶಿವಪ್ಪ ಅವರ ಮಗ ಹೊನ್ನಪ್ಪ ಮಲಕಾರಿ, ಮುಂದಿನ ಪೀಳಿಗೆಗೆ ನಮ್ಮ ತಂದೆಯ ಬಗ್ಗೆ ತಿಳಿಯಲಿ ಎಂದು ತಂದೆಯ ಮಂದಿರ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ತಂದೆಯನ್ನು ನೋಡಿಕೊಳ್ಳದ ಮಕ್ಕಳು ಸಾವಿನ ಬಳಿಕ ಅವರ ನೆನಪು ಕೂಡ ಮರೆಯುವ ಕಾಲದಲ್ಲಿ ತಂದೆಯನ್ನು ದೇವರು ಎಂದು ನಿತ್ಯ ಪೂಜೆ ಮಾಡಲು ಮಂದಿರ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.