Viral Video: ಸೆಲ್ಫಿ ತೆಗೆದುಕೊಳ್ಳಲು ಬಂದ ಸ್ವಚ್ಛತಾ ಸಿಬ್ಬಂದಿಗೆ ಹಿಂಗ್ಯಾಕ್‌ ಮಾಡಿದ್ರು ರೋಜಾ!

ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ನಟಿ ರೋಜಾ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡುವ ಇಬ್ಬರು ಮಹಿಳಾ ಕಾರ್ಮಿಕರು ನಟಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ನಟಿ ಅವರಿಗೆ ಸನ್ನೆ ಮಾಡುವ ಮೂಲಕ ಹತ್ತಿರ ಬರದಂತೆ ತಡೆದಿದ್ದಾರೆ.

Written by - Puttaraj K Alur | Last Updated : Jul 17, 2024, 04:01 PM IST
  • ತಿರುಪತಿ ತಿಮ್ಮಪ್ಪನಿಗೆ ನಾಮ ಹಾಕಿರುವ ಆರೋಪ ಹೊತ್ತಿರುವ ನಟಿ ರೋಜಾರಿಂದ ಮತ್ತೊಂದು ಎಡವಟ್ಟು!
  • ದೇವಸ್ಥಾನದಲ್ಲಿ ಸೆಲ್ಫಿ ವೇಳೆ ಅಂತರ ಕಾಯ್ದುಕೊಳ್ಳುವಂತೆ ಸ್ವಚ್ಛತಾ ಸಿಬ್ಬಂದಿಗೆ ಸನ್ನೆ ಮಾಡಿದ ನಟಿ ರೋಜಾ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ, ನಟಿ ವಿರುದ್ಧ ವ್ಯಾಪಕ ಆಕ್ರೋಶ
Viral Video: ಸೆಲ್ಫಿ ತೆಗೆದುಕೊಳ್ಳಲು ಬಂದ ಸ್ವಚ್ಛತಾ ಸಿಬ್ಬಂದಿಗೆ ಹಿಂಗ್ಯಾಕ್‌ ಮಾಡಿದ್ರು ರೋಜಾ! title=
ನಟಿ ರೋಜಾ ಮತ್ತೊಂದು ಎಡವಟ್ಟು!

Actress Roja Viral Video: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅಕ್ರಮ ಎಸಗಿರುವ ಆರೋಪ ಹೊತ್ತಿರುವ ರಾಜಕಾರಣಿ ಹಾಗೂ ಬಹುಭಾಷಾ ತಾರೆ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದ ಸ್ವಚ್ಛತಾ ಸಿಬ್ಬಂದಿ ಜೊತೆಗೆ ಅಸಡ್ಡೆಯಿಂದ ವರ್ತಿಸಿದ್ದಕ್ಕೆ ಟಾಲಿವುಡ್ ನಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಜಗನ್ಮೋಹನ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವೆ ಆಗಿ ಸೇವೆ ಸಲ್ಲಿಸಿದ್ದ ರೋಜಾ ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದರು. ತಿರುಪತಿಯ ದರ್ಶನ ಟಿಕೆಟ್‌ ವಿಷಯದಲ್ಲಿ ಅವರು ಅಕ್ರಮ ಎಸಗಿದ್ದು, ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.  

ಇದನ್ನೂ ಓದಿ: ಈ ಹಾಟ್‌ ಬ್ಯೂಟಿ ಯಾವುದೇ ಸೂಪರ್‌ ಮಾಡೆಲ್‌ ಅಥವಾ ನಟಿಯಲ್ಲ, ಹೊರತಾಗಿ ಐಪಿಎಸ್‌ ಅಧಿಕಾರಿ ಅಂದ್ರೆ ನೀವು ನಂಬ್ತೀರಾ..?

ಇದೀಗ ದೇವಸ್ಥಾನದಲ್ಲಿ ಸೆಲ್ಫಿ ವೇಳೆ ಅಂತರ ಕಾಯ್ದುಕೊಳ್ಳುವಂತೆ ಸ್ವಚ್ಛತಾ ಸಿಬ್ಬಂದಿಗೆ ಸನ್ನೆ ಮಾಡುವ ಮೂಲಕ ನಟಿ ಅಸಡ್ಡೆಯಿಂದ ವರ್ತಿಸಿದ್ದಾರೆಂದು ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ನಟಿ ರೋಜಾ ಭೇಟಿ ನೀಡಿದ್ದರು. ಈ ವೇಳೆ ಅನೇಕ ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ನಟಿ ಬಳಿಗೆ ಬಂದು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡುವ ಇಬ್ಬರು ಮಹಿಳಾ ಕಾರ್ಮಿಕರು ನಟಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ನಟಿ ಅವರಿಗೆ ಸನ್ನೆ ಮಾಡುವ ಮೂಲಕ ಹತ್ತಿರ ಬರದಂತೆ ತಡೆದಿದ್ದಾರೆ.

ಇದನ್ನೂ ಓದಿ: ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್! ಫೋಟೋ ವೈರಲ್

ಮತ ಕೇಳುವಾಗ ಮನೆ ಬಾಗಿಲಿಗೆ ಹೋಗುವ ಇಂತಹ ರಾಜಕಾರಣಿಗಳು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ? ತಮ್ಮ ಸಿನಿಮಾ ನೋಡಿ.. ನೋಡಿ... ಅಂತಾ ಪ್ರತಿಯೊಬ್ಬರಲ್ಲೂ ಬೇಡಿಕೊಳ್ಳುವ ಇವರು ನಾಚಿಕೆ ಇಲ್ಲದವರು, ಸ್ವಚ್ಛತಾ ಸಿಬ್ಬಂದಿ ಜೊತೆಗೆ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲವೆಂದು ರೋಜಾ ವಿರುದ್ಧ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋವನ್ನು ಅನೇಕರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News