Vaishakh Amavasya 2022 Date and Time: ಶನಿಶ್ಚರಿ ಅಮಾವಾಸ್ಯೆಯು ಏಪ್ರಿಲ್ 30 ರಂದು ಅಂದರೆ ವರ್ಷದ ಮೊದಲ ಸೂರ್ಯಗ್ರಹಣವದ ದಿನವೇ ಸಂಭವಿಸುತ್ತಿದೆ. ಇದು ವೈಶಾಖ ಮಾಸದ ಅಮಾವಾಸ್ಯೆಯಾಗಿದ್ದು, ಶನಿವಾರದಂದು ತರುತ್ತಿರುವ ಕಾರಣ ಈ ಅಮಾವಾಸ್ಯೆಯನ್ನು ಶನಿಶ್ಚರಿ ಅಮಾವಾಸ್ಯೆ ಅಥವಾ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಶನಿಶ್ಚರಿ ಅಮಾವಾಸ್ಯೆಯಂದು ಕೆಲವು ವಿಶೇಷ ಉಪಾಯಗಳನ್ನು ಅನುಸರಿಸಿದರೆ, ಶನಿದೇವನ ಕೃಪೆಯನ್ನು ಸುಲಭವಾಗಿ ಪಡೆಯಬಹುದು ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಅನುಗ್ರಹವು ಅದೃಷ್ಟವನ್ನು ಬದಲಾಯಿಸುತ್ತದೆ. ಏಪ್ರಿಲ್ 29 ರಂದು ಶನಿಯು ಸ್ಥಾನಪಲ್ಲಟವಾದ ಕಾರಣ ಮೀನ ರಾಶಿಯ ಜಾತಕದವರಿಗೆ ಸಾಡೇ ಸತಿ ಆರಂಭವಾಗಲಿದ್ದು, ಕರ್ಕ ಮತ್ತು ವೃಶ್ಚಿಕ ರಾಶಿಯ ಜಾತಕದವರಿಗೆ ಶೇಣಿಯ ಎರಡುವರೆ ವರ್ಷಗಳ ಕಾಟ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ಮಹಾದೆಸೆಯಿಂದ ಬಳಲುತ್ತಿರುವವರು ಈ ದಿನ ಕೆಲ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು.

COMMERCIAL BREAK
SCROLL TO CONTINUE READING

ಶನಿ ಅಮಾವಾಸ್ಯೆ ಪೂಜೆಯ ಮುಹೂರ್ತ
ಶನಿಶ್ಚರಿ ಅಮಾವಾಸ್ಯೆಯು ಏಪ್ರಿಲ್ 30 ರ ಶನಿವಾರ ಮಧ್ಯರಾತ್ರಿ 12:57 ರಿಂದ ಪ್ರಾರಂಭವಾಗಿ ಮೇ 1 ರ ಭಾನುವಾರದಂದು ಮಧ್ಯರಾತ್ರಿ 01:57 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಪ್ರೀತಿಯೋಗ ಮಧ್ಯಾಹ್ನ 03:20 ರವರೆಗೆ ಇರಲಿದ್ದು, ನಂತರ ಆಯುಷ್ಮಾನ್ ಯೋಗವು ಆರಂಭವಾಗಲಿದೆ. ಸ್ನಾನ ಮತ್ತು ಪೂಜೆಗೆ ಶುಭ ಮುಹೂರ್ತವು ಬೆಳಗ್ಗೆ 11:52 ರಿಂದ ಮಧ್ಯಾಹ್ನ 12:45 ರವರೆಗೆ ಇರಲಿದೆ. ಇದೇ ವೇಳೆ, ರಾಹುಕಾಲವು ಬೆಳಗ್ಗೆ 9 ರಿಂದ 10:39 ರವರೆಗೆ ಇರಲಿದೆ.

ಅಪಾರ ಯಶಸ್ಸು-ಹಣ ದಯಪಾಲಿಸುತ್ತಾನೆ ಶನಿ 
ನೀವು ಶನಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ ಅಥವಾ ಶನಿಯ ಮಹಾದೆಸೆಯ ಕೆಟ್ಟ ಫಲಿತಾಂಶಗಳಿಂದ ಪರಿಹಾರ ಪಡೆಯಲು ಬಯಸುತ್ತಿದ್ದರೆ, ಶನಿಶ್ಚರಿ ಅಮಾವಾಸ್ಯೆಯ ದಿನ ಕೆಲವು ಉಪಾಯಗಳನ್ನು ಅನುಸರಿಸಿ. ಇದರಿಂದ ನಿಮಗೆ ತುಂಬಾ ಪ್ರಯೋಜನ ಸಿಗಲಿದೆ


ಇದನ್ನೂ ಓದಿ-Vastu Tips For Money : ಮನೆಯಲ್ಲಿ ಆರ್ಥಿಕ ಸಮಸ್ಯೆಯೆ? ಹಾಗಿದ್ರೆ, ಮನೆಯ ಈ ದಿಕ್ಕಿನಲ್ಲಿ ಚಿಕ್ಕ ಜಗ್ ಇಡಿ!

>> ಶನಿಶ್ಚರಿ ಅಮಾವಾಸ್ಯೆಯ ದಿನ ಮಾಹಿ ನದಿಯಲ್ಲಿ ಸ್ನಾನ ಮಾಡುವುದರಿಂದ ಶನಿಯ ಸಾಡೇಸಾತಿ, ಎರಡೂವರೆ ವರ್ಷಗಳ ಶನಿ ದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಎಲ್ಲಾ ದುಃಖಗಳು, ನೋವುಗಳು ಮತ್ತು ಅಡೆತಡೆಗಳು ಕೊನೆಗೊಳ್ಳುತ್ತವೆ.
>> ಶನಿ ದೇವರು ವ್ಯಕ್ತಿಗಳ ಕರ್ಮಕ್ಕೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಹೀಗಾಗಿ ಶನಿಶ್ಚರಿ ಅಮಾವಾಸ್ಯೆಯ ದಿನ ಒಳ್ಳೆಯ ಕೆಲಸ ಮಾಡಿ. ಅಗತ್ಯವಿರುವ ದಾನ ಮಾಡಿ. ನೀವು ಅವರಿಗೆ ಆಹಾರ. ಬಟ್ಟೆ, ಪಾದರಕ್ಷೆ, ಚಪ್ಪಲಿ ದಾನ ಮಾಡುವ ಮೂಲಕ ಶನಿ ಪ್ರಸನ್ನನಾಗುತ್ತಾನೆ. ಇದಲ್ಲದೆ ಕಪ್ಪು ಎಳ್ಳು, ಕಪ್ಪು ಬಟ್ಟೆಗಳನ್ನು ಕೂಡ ದಾನ ಮಾಡುವುದು ಕೂಡ ಮಂಗಳಕರವಾಗಿದೆ.
>> ಶನಿಶ್ಚರಿ ಅಮಾವಾಸ್ಯೆಯ ದಿನ ಶನಿದೇವನನ್ನು ವಿಧಿ-ವಿಧಾನಗಳಿಂದ ಪೂಜಿಸಿ. ಆತನಿಗೆ ನೀಲಿ ಹೂವುಗಳು, ಕಪ್ಪು ಎಳ್ಳು, ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಶೀಘ್ರದಲ್ಲಿಯೇ ಎಲ್ಲದರಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.
>> ಶನಿಯ ದುಷ್ಪ್ರಭಾವಗಳನ್ನು ತೊಡೆದುಹಾಕುವ ಉತ್ತಮ ಮಾರ್ಗವೆಂದರೆ ಸಂಕಟಮೊಚಕ ಹನುಮನನ್ನು ಪೂಜಿಸಿ.ಶನಿಶ್ಚರಿ ಅಮಾವಾಸ್ಯೆ ದಿನ, ಅಂಜನಿ ಸುತನ ದೇವಸ್ಥಾನಕ್ಕೆ ಹೋಗಿ ಮತ್ತು ಬಜರಂಗಬಲಿಗೆ ಸಿಂಧೂರವನ್ನು ಅರ್ಪಿಸಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿ.


ಇದನ್ನೂ ಓದಿ-Relationship Tips : ನಿಮ್ಮ ಸಂಗಾತಿಗೆ ಈ 4 ಭರವಸೆಗಳನ್ನು ನೀಡಿ, ಜೀವನ ಪೂರ್ತಿ ಸುಖವಾಗಿರಿ



(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.