Vastu Tips For Money : ಮನೆಯಲ್ಲಿ ಆರ್ಥಿಕ ಸಮಸ್ಯೆಯೆ? ಹಾಗಿದ್ರೆ, ಮನೆಯ ಈ ದಿಕ್ಕಿನಲ್ಲಿ ಚಿಕ್ಕ ಜಗ್ ಇಡಿ!

ಇಂದು ನಾವು ಬೇಸಿಗೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಬಳಸುವ ಮಡಕೆ-ಜಗ್‌ಗೆ ಸಂಬಂಧಿಸಿದ ಕೆಲವು ಸುಲಭ ವಾಸ್ತು ಶಾಸ್ತ್ರದ ಪರಿಹಾರಗಳ ಬಗ್ಗೆ ನಿಮಗಾಗಿ ಮಾಹಿತಿ ತಂದಿದ್ದೇವೆ.

Written by - Zee Kannada News Desk | Last Updated : Apr 29, 2022, 04:17 PM IST
  • ಮನೆಗಳಲ್ಲಿ ಬಳಸುವ ಮಡಕೆ-ಜಗ್‌ಗೆ ಸಂಬಂಧಿಸಿದ ಕೆಲವು ಸುಲಭ ವಾಸ್ತು ಶಾಸ್ತ್ರದ ಪರಿಹಾರ
  • ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಮಣ್ಣಿನ ಜಗ್
  • ಭಾರಿ ಆರ್ಥಿಕ ನಷ್ಟ ಅಥವಾ ಆರ್ಥಿಕ ಬಿಕ್ಕಟ್ಟಿಗೆ ಎದುರಿಸಬೇಕಾಗುತ್ತದೆ.
Vastu Tips For Money : ಮನೆಯಲ್ಲಿ ಆರ್ಥಿಕ ಸಮಸ್ಯೆಯೆ? ಹಾಗಿದ್ರೆ, ಮನೆಯ ಈ ದಿಕ್ಕಿನಲ್ಲಿ ಚಿಕ್ಕ ಜಗ್ ಇಡಿ! title=

Vastu Tips for Money in Kannada : ವಾಸ್ತು ಶಾಸ್ತ್ರವನ್ನು ಚೆನ್ನಾಗಿ ಅನುಸರಿಸಿದರೆ, ನೀವು ಸುಲಭವಾಗಿ ಸಂತೋಷದ ಮತ್ತು ಯಶಸ್ವಿ ಜೀವನವನ್ನು ನಡೆಸಬಹುದು. ಅಲ್ಲದೆ, ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬಹುದು, ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ, ಇದು ನಿಮಗೆ ತ್ವರಿತ ಪ್ರಗತಿ ಮತ್ತು ಬಹಳಷ್ಟು ಸಂಪತ್ತನ್ನು ನೀಡುತ್ತದೆ. ಹಾಗೆ, ಇದು ನಿಮ್ಮ ಸಂಬಂಧಗಳನ್ನು ಸುಧಾರಿಸುತ್ತದೆ. ಇಂದು ನಾವು ಬೇಸಿಗೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಬಳಸುವ ಮಡಕೆ-ಜಗ್‌ಗೆ ಸಂಬಂಧಿಸಿದ ಕೆಲವು ಸುಲಭ ವಾಸ್ತು ಶಾಸ್ತ್ರದ ಪರಿಹಾರಗಳ ಬಗ್ಗೆ ನಿಮಗಾಗಿ ಮಾಹಿತಿ ತಂದಿದ್ದೇವೆ. ಹೆಚ್ಚುತ್ತಿರುವ ರೆಫ್ರಿಜರೇಟರ್, ವಾಟರ್ ಕೂಲರ್ ಇತ್ಯಾದಿಗಳ ಬಳಕೆಯು ಮಣ್ಣಿನ ಪಾತ್ರೆಗಳು ಮತ್ತು ಜಗ್ ಬಳಕೆಯನ್ನು ಕಡಿಮೆ ಮಾಡಿದೆ, ಆದರೆ ಅವುಗಳನ್ನು ಮನೆಯಲ್ಲಿ ಇಡುವುದು ತುಂಬಾ ಶುಭಕರವೆಂದು ಹೇಳಲಾಗುತ್ತದೆ.

ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಮಣ್ಣಿನ ಜಗ್ 

ವಾಸ್ತು ಶಾಸ್ತ್ರದಲ್ಲಿ ಮಡಿಕೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಪ್ರಕಾರ ಮನೆಯಲ್ಲಿ ಮಣ್ಣಿನ ಪಾತ್ರೆಗಳು, ಮಡಕೆಗಳು ಮತ್ತು ಹೂಜಿಗಳು ಇದ್ದರೆ ಅಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಆದರೆ ಇದಕ್ಕಾಗಿ ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದು ಅವಶ್ಯಕ. ಹಾಗೆಯೇ ಸರಿಯಾಗಿ ಬಳಸಿಕೊಳ್ಳಬೇಕು. ಇದಲ್ಲದೆ, ಇನ್ನೂ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಎಲ್ಲಾ ನಿಮಯಗಳನ್ನು ಪಾಲಿಸಿದರೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಕೃಪೆಯಿಂದ ಮನೆಯಲ್ಲಿ ಐಶ್ವರ್ಯ ಮತ್ತು ಸಂಪತ್ತು ಹೆಚ್ಚುತ್ತದೆ ಮತ್ತು ಯಾವುದಕ್ಕೂ ಕೊರತೆ ಕಾಣುವುದಿಲ್ಲ.

ಇದನ್ನೂ ಓದಿ : Surya Grahan 2022: ಸೂರ್ಯ ಗ್ರಹಣದ ದಿನ ಗರ್ಭಿಣಿ ಮಹಿಳೆಯರು ಈ ಕೆಲಸ ಮಾಡಬಾರದು, ಮಗುವಿನ ಮೇಲೆ ಪ್ರಭಾವ ಉಂಟಾಗುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ, ದೇವತೆಗಳು ಮನೆಯ ಉತ್ತರ ದಿಕ್ಕಿನಲ್ಲಿ ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ, ಆದ್ದರಿಂದ ಈ ದಿಕ್ಕಿನಲ್ಲಿ ನೀರು ತುಂಬಿದ ಜಗ್ ಅನ್ನು ಇಡುವುದರಿಂದ ದೇವತೆಗಳಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.

ಉತ್ತರ ದಿಕ್ಕಿನಲ್ಲಿ ಮಡಕೆ ಅಥವಾ ಜಗ್ ಇಡುವುದರಿಂದ ಮನೆಯಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಆದರೆ ಅವುಗಳನ್ನು ಎಂದಿಗೂ ಖಾಲಿ ಇಡಬೇಡಿ ಎಂಬುದನ್ನು ನೆನಪಿನಲ್ಲಿಡಿ. ಬದಲಿಗೆ, ನೀರು ಖಾಲಿಯಾಗಲು ಪ್ರಾರಂಭಿಸಿದ ತಕ್ಷಣ, ಅವುಗಳನ್ನು ನೀರಿನಿಂದ ತುಂಬಿಸಿ.

ಮನೆಯಲ್ಲಿ ಖಾಲಿ ಮಡಕೆ ಅಥವಾ ಜಗ್ ಅನ್ನು ಎಂದಿಗೂ ಇಡಬೇಡಿ. ಹಾಗೆ ಮಾಡುವುದರಿಂದ ನೀವು ಭಾರಿ ಆರ್ಥಿಕ ನಷ್ಟ ಅಥವಾ ಆರ್ಥಿಕ ಬಿಕ್ಕಟ್ಟಿಗೆ ಎದುರಿಸಬೇಕಾಗುತ್ತದೆ.

ನೀವು ತ್ವರಿತ ಆರ್ಥಿಕ ಪ್ರಗತಿಯನ್ನು ಬಯಸಿದರೆ, ಪ್ರತಿದಿನ ಸಂಜೆ ತುಳಸಿ ಗಿಡದ ಬಳಿ ಮಣ್ಣಿನ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಆಹಾರ ಧಾನ್ಯಗಳ ಕೊರತೆಯಾಗುವುದಿಲ್ಲ.

ಒಂದು ಮಡಕೆ ಅಥವಾ ಜಗ್ ಅನ್ನು ಅಡುಗೆಮನೆಯಲ್ಲಿ ಇರಿಸಿದರೆ, ಅದನ್ನು ಒಲೆಯಿಂದ ದೂರವಿಡಿ ಎಂಬುದನ್ನು ನೆನಪಿನಲ್ಲಿಡಿ. ಬೆಂಕಿ ಮತ್ತು ನೀರನ್ನು ಹತ್ತಿರ ಇಡಬಾರದು.

ಇದನ್ನೂ ಓದಿ : Akshaya Tritiya 2022: ಅಕ್ಷಯ ತೃತಿಯಾ ದಿನ ಈ ತಪ್ಪುಗಳನ್ನು ಮಾಡಬೇಡಿ, ಜೀವನದಲ್ಲಿ ಸುಖ ಸಮೃದ್ಧಿ ಹಾಳಾಗುತ್ತದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News