ನವದೆಹಲಿ: ಇಂದು ಶನಿವಾರ. ಈ ದಿನವು ಶನಿ ದೇವರಿಗೆ ಸಂಬಂಧಿಸಿದೆ. ಧರ್ಮಗ್ರಂಥಗಳ ಪ್ರಕಾರ ಶನಿ ದೇವನು ನ್ಯಾಯದ ದೇವರು. ಕಾರ್ಯಗಳ ಆಧಾರದ ಮೇಲೆ ಶನಿಯು ಮನುಷ್ಯನ ಭವಿಷ್ಯವನ್ನು ನಿರ್ಧರಿಸುತ್ತಾರೆ. ಶನಿದೇವನ ಪೂಜೆಗೆ ಹಲವು ವಿಶೇಷ ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಶನಿದೇವನು ಅಸಮಾಧಾನಗೊಳ್ಳಬಹುದು. ಶನಿ ದೇವರನ್ನು ಪೂಜಿಸುವಾಗ ಯಾವ ತಪ್ಪುಗಳನ್ನು ಮಾಡಬಾರದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.  


COMMERCIAL BREAK
SCROLL TO CONTINUE READING

ಶನಿದೇವರ ಪೂಜೆಯಲ್ಲಿ ಈ ತಪ್ಪು ಮಾಡಬೇಡಿ


ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ


ಶನಿ ದೇವಸ್ಥಾನದಲ್ಲಿ ಪೂಜಿಸುವಾಗ ಶನಿ ದೇವರ ವಿಗ್ರಹವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಪೂಜಿಸಬೇಡಿ. ಹೀಗೆ ಮಾಡುವುದರಿಂದ ಶನಿದೇವನಿಗೆ ಕೋಪ ಬರಬಹುದು. ಇದರ ಬದಲು ಶನಿದೇವರ ಪಾದಗಳನ್ನು ನೋಡಿ ಪೂಜಿಸಬೇಕು. ಇದರಿಂದ ದೇವರ ಆಶೀರ್ವಾದ ನಿಮಗೆ ಸಿಗಲಿದೆ.   


ನೀವು ಶನಿ ದೇವರನ್ನು ಆರಾಧಿಸುವಾಗ ವಿಗ್ರಹದ ಮುಂದೆ ನೇರವಾಗಿ ನಿಲ್ಲಬೇಡಿ. ಹೀಗೆ ಮಾಡುವುದರಿಂದ ಶನಿಯ ದುಷ್ಟ ಕಣ್ಣು ನಿಮ್ಮ ಮೇಲೆ ಬೀಳುತ್ತದೆ, ಇದರಿಂದ ನೀವು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳಕರ ಫಲಿತಾಂಶಗಳನ್ನು ಪಡೆಯಲು ನೀವು ವಿಗ್ರಹದ ಎಡ ಅಥವಾ ಬಲಭಾಗದಲ್ಲಿ ನಿಂತಿರುವ ಶನಿ ದೇವನನ್ನು ಪೂಜಿಸಬಹುದು.


ಇದನ್ನೂ ಓದಿ: Horoscope Today: ಈ ರಾಶಿಯವರ ಕನಸು ನನಸಾಗುವುದು, ಅದೃಷ್ಟದ ಬಾಗಿಲು ತೆರೆಯಲಿದೆ


ಮನೆಯಲ್ಲಿ ಶನಿದೇವರ ವಿಗ್ರಹ ಸ್ಥಾಪಿಸಬೇಡಿ


ಶನಿದೇವರ ವಿಗ್ರಹವನ್ನು ಮನೆಯಲ್ಲಿ ಎಂದಿಗೂ ಪ್ರತಿಷ್ಠಾಪಿಸಬಾರದು. ಬದಲಾಗಿ ಹತ್ತಿರದ ದೇವಸ್ಥಾನಕ್ಕೆ ಹೋಗಿ ಶನಿದೇವನನ್ನು ಪೂಜಿಸಬೇಕು ಮತ್ತು ಅಪ್ಪಿತಪ್ಪಿಯೂ ದೀಪವನ್ನು ಹಚ್ಚಬೇಡಿ. ಪೂಜೆಯ ನಂತರ ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.


ನೀವು ಮನೆಯಲ್ಲಿ ಕುಳಿತು ಶನಿ ದೇವರನ್ನು ಪೂಜಿಸಬಯಸಿದರೆ, ನಿಮ್ಮ ಮುಖವನ್ನು ಪಶ್ಚಿಮಕ್ಕೆ ಇರಿಸಿ. ಇದರ ನಂತರ ಶನಿ ದೇವನಿಗೆ ಸಂಬಂಧಿಸಿದ ಮಂತ್ರಗಳನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಶನಿದೇವ ಸಂತಸಗೊಳ್ಳುತ್ತಾನೆ. ದೇವಸ್ಥಾನದಲ್ಲಿ ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವಾಗ ಅದರ ಹನಿಗಳು ಅಲ್ಲಿ ಇಲ್ಲಿ ಬೀಳದಂತೆ ನೋಡಿಕೊಳ್ಳಿ.


ಇದನ್ನೂ ಓದಿಕುಂಭ ರಾಶಿಯಲ್ಲಿ ಶನಿಯ ಸಂಚಾರ: ಈ ರಾಶಿಯವರಿಗೆ ಬಹಳಷ್ಟು ತೊಂದರೆಗಳು ಎದುರಾಗಲಿವೆ!


ತಾಮ್ರದ ಪಾತ್ರೆಗಳಿಂದ ಶನಿದೇವರ ಪೂಜೆ ಮಾಡಬೇಡಿ


ಧರ್ಮಗ್ರಂಥಗಳ ಪ್ರಕಾರ ತಾಮ್ರದ ಪಾತ್ರೆಗಳನ್ನು ಸೂರ್ಯ ದೇವರಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ ಮತ್ತು ಶನಿದೇವ ಅದರ ಶತ್ರು. ಹೀಗಾಗಿ ತಾಮ್ರದ ಪಾತ್ರೆಗಳನ್ನು ಶನಿದೇವನ ಪೂಜೆಯಲ್ಲಿ ಅಪ್ಪಿತಪ್ಪಿಯೂ ಬಳಸಬಾರದು. ಹೀಗೆ ಮಾಡುವುದರಿಂದ ನೀವು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯುಂಟಾಗುತ್ತದೆ.  


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.