ನವದೆಹಲಿ: Shani Dev - ಶನಿದೇವನನ್ನು (Shani Dev) ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಕಾರಣ ಜನರ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ತಕ್ಕಂತೆ ಶನಿ ಫಲ ನೀಡುತ್ತಾನೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ (Jyotishya Shastra) ಕೂಡ ಶನಿದೇವನಿಗೆ ವಿಶೇಷ ಮಹತ್ವವಿದೆ. ವೈದಿಕ ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ ಶನಿ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷ ಇರುತ್ತಾನೆ ಎಂದು ಹೇಳಲಾಗಿದೆ. ಎಲ್ಲಾ ಗ್ರಹಗಳಲ್ಲಿ ಶನಿ ಗ್ರಹ ತುಂಬಾ ನಿಧಾನ ಗತಿಯಲ್ಲಿ ಚಲಿಸುವ ಗ್ರಹವಾಗಿದೆ. ಇನ್ನೊಂದೆಡೆ ಶನಿಯೇ ದೆಶೆ ಏಳೂವರೆ ವರ್ಷದ್ದಾಗಿರುತ್ತದೆ. ಹಾಗಾದರೆ ಬನ್ನಿ ಮುಂಬರುವ ಮೂರು ವರ್ಷಗಳಲ್ಲಿ ಶನಿಯ ಪ್ರಭಾವ ಯಾವ ರಾಶಿಗಳ (Zodiac Signs) ಮೇಲೆ ಇರುತ್ತದೆ ನೋಡೋಣ ಹಾಗೂ ಯಾವ ರಾಶಿ ರಾಶಿಗಳು ಶನಿ ದೆಸೆಯಿಂದ ಮುಕ್ತ ಇರಲಿವೆ ನೋಡೋಣ.


COMMERCIAL BREAK
SCROLL TO CONTINUE READING

ಪ್ರಸ್ತುತ ಈ ರಾಶಿಯ ಜನರು ಕಷ್ಟ ಎದುರಿಸುತ್ತಿದ್ದಾರೆ
ವರ್ತಮಾನದಲ್ಲಿ ಶನಿ ಮಕರ ರಾಶಿಯಲ್ಲಿ ಶನಿ ಗೋಚರಿಸುತ್ತಿದ್ದಾನೆ. ಇದೆ ಕಾರಣದಿಂದ ಮಿಥುನ ಹಾಗೂ ತುಲಾ ರಾಶಿಯವರು ಶನಿಯ ಎರಡೂವರೆ ವರ್ಷ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಧನು, ಮಕರ ಹಾಗೂ ಕುಂಭ ರಾಶಿಯ ಜಾತಕದವರು ಶನಿಯ ಸಾಡೆಸಾತಿ ಎದುರಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ 2021ರಲ್ಲಿ 5 ರಾಶಿಗಳ ಮೇಲೆ ಶನಿಯ ದೃಷ್ಟಿ ಇರಲಿದೆ. ಪ್ರಸ್ತುತ ಶನಿ ಮಕರರಾಶಿಯಲ್ಲಿ ವಕ್ರನಡೆಯಲ್ಲಿದ್ದಾನೆ ಹಾಗೂ 11 ಅಕ್ಟೋಬರ್ ವರೆಗೆ ಅಲ್ಲಿಯೇ ಅದೇ ಅವಸ್ಥೆಯಲ್ಲಿ ಮುಂದುವರೆಯಲಿದ್ದಾನೆ. 


ಶನಿಯ ದೆಶೆಯಿಂದ ಮುಕ್ತರಾಗಿರಲಿದ್ದಾರೆ ಈ ನಾಲ್ಕು ರಾಶಿಯ ಜನರು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಬರುವ ಮೂರು ವರ್ಷಗಳಲ್ಲಿ ಅಂದರೆ 2022 ರಿಂದ 2024 ರವರೆಗೆ ಒಟ್ಟು ನಾಲ್ಕು ರಾಶಿಗಳು ಶನಿ (Shani Dev) ದೆಶೆಯಿಂದ ಸಂಪೂರ್ಣ ಮುಕ್ತರಾಗಿರಲಿದ್ದಾರೆ.  ಇವುಗಳಲ್ಲಿ ಮೇಷ, ವೃಷಭ, ಸಿಂಹ ಹಾಗೂ ಕನ್ಯಾ ರಾಶಿಗಳು ಶಾಮೀಲಾಗಿವೆ.


ಮುಂದಿನ ಮೂರು ವರ್ಷಗಳವರೆಗೆ ಈ ರಾಶಿಗಳ ಮೇಲೆ ಶನಿಯ ಪ್ರಭಾವ ಇರಲಿದೆ
ಜ್ಯೋತಿಶ್ಯಾಚಾರ್ಯರು (Jyotishyacharya) ಹೇಳುವ ಪ್ರಕಾರ 29 ಏಪ್ರಿಲ್ 2022 ರಲ್ಲಿ ಶನಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಕರ್ಕ ಹಾಗೂ ವೃಶ್ಚಿಕ ರಾಶಿಯ ಜಾತಕದವರಿಗೆ ಶನಿಯ ಎರಡೂವರೆ ವರ್ಷ ಆರಂಭಗೊಳ್ಳಲಿದೆ. ಇನ್ನೊಂದೆಡೆ ಮಿಥುನ ಹಾಗೂ ತುಲಾ ಹಾಗೂ ಮಿಥುನ ರಾಶಿಯವರು ಮುಕ್ತರಾಗಲಿದ್ದಾರೆ. ಇದಲ್ಲದೆ ಮಕರ ರಾಶಿಯ ಜಾತಕದವರ ಮೇಲೆ ಶನಿಯ ಅಂತಿಮ ಚರಣ ಇರಲಿದ್ದರೆ, ಕುಂಭ ರಾಶಿಯ ಜಾತಕದವರ ಮೇಲೆ ಎರಡನೇ ಚರಣ ಆರಂಭಗೊಳ್ಳಲಿದೆ. ನಂತರ ಧನು ರಾಶಿಯ ಜಾತಕದವರಿಗೆ ಶನಿಯಿಂದ ಮುಕ್ತಿ ಸಿಗಲಿದೆ.


2023 ರಿಂದ 24ರವರೆಗೆ ಈ ರಾಶಿಯ ಜನರು ಜಾಗ್ರತೆ ವಹಿಸಬೇಕು
ಇದೆ ವರ್ಷದ ಜುಲೈ 12 ರಿಂದ ಶನಿ ಮತ್ತೆ ಮಕರರಾಶಿಯಲ್ಲಿ ಗೋಚರಿಸಿರುವ ಕಾರಣ ಮಿಥುನ, ತುಲಾ ಹಾಗೂ ಧನು ಜಾತಕದವರ ಮತ್ತೆ ಶನಿಯ ದೃಷ್ಟಿಗೆ ಗುರಿಯಾಗಿದ್ದಾರೆ. ಈ ಸ್ಥಿತಿ ಜನವರಿ 17, 2023ರವರೆಗೆ ಇರಲಿದೆ. ಹಾಗೆ ನೋಡುವುದಾದರೆ 2022 ರಲ್ಲಿ ಮಿಥುನ, ಕರ್ಕ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಹಾಗೂ ಮೀನ ಜಾತಕದವರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಇರಲಿದೆ. 2024ರಲ್ಲಿ ಕರ್ಕ, ವೃಶ್ಚಿಕ, ಮಕರ, ಕುಂಭ ಹಾಗೂ ಮೀನ ಜಾತಕದವರ ಮೇಲೆ ಶನಿಯ ದೃಷ್ಟಿ ಇರಲಿದೆ.


ಇದನ್ನೂ ಓದಿ-ಪತಿಯ ಮನೆಗೆ ಹೊರಡುವ ಮಗಳ ಕೈಯಲ್ಲಿ ತಪ್ಪಿಯೂ ಈ ನಾಲ್ಕು ವಸ್ತುಗಳನ್ನು ಇಡಬೇಡಿ


ಈ ಮಂತ್ರಗಳನ್ನು ಜಪಿಸಿ
ಓಂ ಶಂ ಅಭಯಹಸ್ತಾಯನಮಃ
ಓಂ ಶಂ ಶನಿಶ್ವರಾಯನಮಃ
ಓಂ ನೀಲಾಂಜನಸಮಾಭಾಮಸಂ ರವಿಪುತ್ರಂ ಯಮಾಗ್ರಜಂ ಛಾಯಾಮಾರ್ತಂಡಸಂಭೂತಂ ಟಂ ನಮಾಮಿ ಶನೈಶ್ವರಂ  


ಇದನ್ನೂ ಓದಿ-Sun Transit 2021: ನಾಳೆ ಕರ್ಕ ರಾಶಿಗೆ ಸೂರ್ಯ ಪ್ರವೇಶ, ಸೂರ್ಯನ ಗೋಚರದ ವಿಶೇಷತೆ ಇಲ್ಲಿದೆ


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಹಾಗೂ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-House Door Vastu Tips: ಮನೆಯ ಬಾಗಿಲು ಹೀಗಿದ್ದರೆ ಸುಖ ಶಾಂತಿಗೆ ಕೊರತೆಯಿರುವುದಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ